ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಮಾರ್ಷಿಯಲ್ ಆರ್ಟ್ಸ್ ಮತ್ತು ಯೋಗ ಸಂಸ್ಥೆ

Posted on: February 11, 2017

400 (2)ಶನಿವಾರಸಂತೆ:- ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಮಾರ್ಷಿಯಲ್ ಆರ್ಟ್ಸ್ ಮತ್ತು ಯೋಗ ಸಂಸ್ಥೆಯ ವತಿಯಿಂದ ಶನಿವಾರಸಂತೆಯ ಯಶಸ್ವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ೭ನೆಯ ರಾಜ್ಯಮಟ್ಟದ ಅಂತರ ಶಾಲಾ ಕರಾಟೆ ಮತ್ತು ಯೋಗ ಪಂದ್ಯಾವಳಿಯಲ್ಲಿ ಎಚ್.ಡಿ.ಕೋಟೆಯ ಗೋವಿಂದ್ ರಾಜ್ ಪ್ರಥಮ ಸ್ಥಾನ, ಮೈಸೂರಿನ ಮಧುಕುಮಾರ್ ದ್ವಿತೀಯ ಸ್ಥಾನ, ಶನಿವಾರಸಂತೆಯ ಪಳನಿ ತೃತೀಯ ಸ್ಥಾನ ಹಾಗೂ ಸೋಮವಾರಪೇಟೆಯ ಚಂದ್ರ ಚತುರ್ಥ ಸ್ಥಾನಗಳಿಸಿ ಬ್ಲ್ಯಾಕ್ ಬೆಲ್ಟ್ ಪಡೆದುಕೊಂಡಿದ್ದಾರೆ.
ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳೂ ಸೇರಿದಂತೆ ಮೈಸೂರು, ಚಾಮರಾಜನಗರ ಮತ್ತಿತರ ಜಿಲ್ಲೆಗಳಿಂದ ಸುಮಾರು ೫೦೦ಕ್ಕು ಹೆಚ್ಚು ವಿದ್ಯಾರ್ಥೀಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *