ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

೩ ನೇ ವರ್ಷದ ಆಟೋಟ ಸ್ಪರ್ಧೆ

Posted on: February 6, 2017

Scan2ಮಡಿಕೇರಿ : ಮಡಿಕೇರಿ ಕ್ಷೇತ್ರ ಸಮಿತಿ ವತಿಯಿಂದ ೩ ನೇ ವರ್ಷದ ಆಟೋಟ ಸ್ಪರ್ಧೆ ನಗರದ ಹಿಂದೂಸ್ತಾನಿ ಶಾಲೆ ಮೈದಾನದಲ್ಲಿ ವಸಂತ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೂಜಿಗೆ ದಾರ ಹಾಕುವುದರ ಮೂಲಕ ಕ್ರೀಡಾಕೂಟವನ್ನು ನಗರಸಭೆ ಸದಸ್ಯರಾದ ಕೆ.ಜಿ.ಪೀಟರ್, ಪ್ರಕಾಶ್ ಆಚಾರ್ಯ, ಜುಲೇಕಾಬಿ ಮತ್ತು ವೇದಿಕೆಯ ಗಣ್ಯರು ಉದ್ಘಾಟಿಸಿದರು.
ನಂತರ ಇತರ ಸ್ಪರ್ಧೆಗಳಾದ ದಾರದ ರೋಲ್‌ಗಳಿಂದ ಪಿರಮಿಡ್ ನಿರ್ಮಾಣ, ಥರ್ಮಕೋಲ್ ಸೀಟ್‌ನಲ್ಲಿ ೫ ಸೂಜಿಗಳನ್ನು ನಿಲ್ಲಿಸಿ ದಾರ ಪೋಣಿಸುವುದು, ೧೦೦ ಮೀ. ಓಟ ಪುರುಷ ಮತ್ತು ಮಹಿಳೆಯರಿಗೆ, ಹಗ್ಗ ಜಗ್ಗಾಟ ಮಹಿಳೆಯರಿಗೆ ಮತ್ತು ಪುರುಷರಿಗೆ, ಮಕ್ಕಳಿಗೆ ೧೦೦ ಮೀ. ಓಟ, ನಿಂಬೆ ಚಮಚದ ಓಟ, ನಿಧಾನಗತಿಯ ದ್ವಿಚಕ್ರವಾಹನ ಚಾಲನೆ, ವೇಗದ ನಡಿಗೆ, ಇಟ್ಟಿಗೆ ಎತ್ತುವ ಸ್ಪರ್ಧೆಗಳು ನಡೆದವು.
ಈ ಸಂದರ್ಭದಲ್ಲಿ ಕೆ.ಎಸ್.ಟಿ.ಎ.ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಶೇಟ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಅಷ್ರಫ್‌ನ್ನೀಸ, ಕೋಶಾಧಿಕಾರಿ ಸುಧಾಕರ, ವಲಯ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಮತ್ತು ಮೂರ್ನಾಡು ವಲಯ ಸಮಿತಿ ಅಧ್ಯಕ್ಷರಾದ ಜಯರಾಮ, ವಿಠಲ, ಸುರೇಶ್ ರೈ, ಪ್ರಧಾನ ಕಾರ್ಯದರ್ಶಿ ಕವಿತ, ಕೋಶಾಧಿಕಾರಿ ಜಯಮಾಲ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಟೈಲರ್ ಸದಸ್ಯರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಷ್ರಫ್‌ನ್ನಿಸ ಅವರು ವಂದಿಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *