ಜಿಂಕೆ ಮಾಂಸ ಸಾಗಾಟ ಓರ್ವನ ಬಂದನ

Posted on: March 27, 2017

1600 (1) copyಮಡಿಕೇರಿ:- ಕಾಡಿನಲ್ಲಿ ಬೇಟೆಯಾಡಿ ಜಿಂಕೆಯನ್ನು ಕೊಂದಿದ್ದಲ್ಲದೇ ಜಿಂಕೆ ಮಾಂಸವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಇಲಾಖೆ ಸಿಬ್ಬಂಧಿಗಳು ಬಂಧಿಸಿದ್ದಾರೆ.
ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ಎ.ನೆಹರು ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂಧಿಗಳಾದ ರಂಜನ್ ಮತ್ತು ಶಿವರಾಂ ಅವರೊಂದಿದೆ ಕುಶಾಲನಗರ ಗ್ರಾಮಾಂತರ ಠಾಣೆಗೆ ಒಳಪಡುವ ಕಂಬಿಬಾಣೆ ಎಂಬಲ್ಲಿ ದಾಳಿ ನಡೆಸಿದ ಅವರು, ಜಿಂಕೆಯನ್ನು ಕೊಂದು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ ಮಾಂಸವನ್ನು ವಶಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಸ
ಸೋಮವಾರಪೇಟೆ ತಾಲ್ಲೂಕಿನ ಕಂಬಿಬಾಣೆ ಸಮಿಪದ ಕಟ್ಟೆಹಾಡಿ ಕಾಲೋನಿಯ ಗಣೇಶ(೪೫) ಎಂಬಾತನೆ ಬಂಧಿತ ಆರೋಪಿ. ಆರೋಪಿಯಿಂದ ಬೇಟೆಯಾಡಲು ಬಳಸುತಿದ್ದ ಎರಡು ಕತ್ತಿ, ಜಿಂಕೆಯ ಚರ್ಮ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ನಂತರ ನ್ಯಾಯಾಧೀಶರ ಹಾಜರು ಪಡಿಸಿದ ಸಂದರ್ಭ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಕುಶಾಲನಗರ ಗ್ರಮಾಂತರ ಪೊಲೀಸ್ ಠಾಣೆಯಲ್ಲಿ ಮತ್ತು ಅರಣ್ಯ ಇಲಾಖೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *