ಬ್ರೇಕಿಂಗ್ ನ್ಯೂಸ್
ಧಗಧಗನೆ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್ – ಓರ್ವ ಸಜೀವ ದಹನ 5ಕ್ಕೂ ಹೆಚ್ಚು ಮನೆಗಳು ಭಸ್ಮ , ವಸತಿ ರಹಿತ ಮತ್ತು ನಿವೇಶನ ರಹಿತರಿಂದ ಗ್ರಾ.ಪಂನಲ್ಲಿ ಅರ್ಜಿ ಸಲ್ಲಿಕೆ , ಸರಕಾರಿ ಆದೇಶದಲ್ಲೇ ಲೋಪ…! ಕೊಡಗು ಜಿಲ್ಲೆಯ ಬದಲಿಗೆ ಮಡಿಕೇರಿ ಜಿಲ್ಲೆ , ಗಾಳಿಬೀಡು ಶಿಕ್ಷಕರಿಗೆ ಸನ್ಮಾನ  ಸರಕಾರಿ ಶಾಲೆಗಳ ಸಾಧನೆಗೆ ಶಿಕ್ಷಕರ ಪರಿಶ್ರಮವೇ ಕಾರಣ ಲೆಕ್ಕಪರಿಶೋದಕ ಟಿ.ಕೆ.ಸುಧೀರ್ ಅಭಿಪ್ರಾಯ , ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಿತೂರಿ ಸಂಘಟನಾ ಕಾರ್ಯದರ್ಶಿ ಧರ್ಮಪ್ಪ ಆರೋಪ , ಪೌರಕಾರ್ಮಿಕರಿಗೆ ಪ.ಪಂ ಅಧ್ಯಕ್ಷರಿಂದ ರೈನ್ ಕೋಟ್ ವಿತರಣೆ , ಚಲಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದು ಕಾರ್ಮಿಕ ಸಾವು , ರೈತರ ಸಾಲ ಎಷ್ಟು ಕೋಟಿ ಇದ್ದರೂ ಸರಿ ಸಾಲ ಮನ್ನಾ ಮಾಡಿಯೇ ತೀರುತ್ತೇನೆ ಸಿಎಂ ಕುಮಾರಸ್ವಾಮಿ , ಜೂ.20 ರಂದು ಉದ್ಯೋಗ ಮೇಳ , ಜೂ.21 ರಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ,

ರುಚಿಕರವಾದ ಖೀಮಾ ಕರಿ

Posted on: March 3, 2017

thumbopenಅಗತ್ಯವಿರುವ ಸಾಮಾಗ್ರಿಗಳು:
ಈರುಳ್ಳಿ – ೨
ಖೀಮಾ – ೫೦೦ ಗ್ರಾಂ (ಕೋಳಿಮಾಂಸ/ಕುರಿಮಾಂಸ)
ಆಲುಗಡ್ಡೆ – ೩೦೦ ಗ್ರಾಂ
ಹಸಿಶುಂಠಿ ಪೇಸ್ಟ್ – ೧ ಚಿಕ್ಕಚಮಚ
ಬೆಳ್ಳುಳ್ಳಿ ಪೇಸ್ಟ್ – ೧ ಚಿಕ್ಕಚಮಚ
ಒಣಮೆಣಸಿನ ಪುಡಿ – ೨ ಚಿಕ್ಕಚಮಚ
ಕೊತ್ತೊಂಬರಿ ಪುಡಿ – ೧ ಚಿಕ್ಕಚಮಚ
ಅರಿಶಿನ ಪುಡಿ – ೧/೪ ಚಿಕ್ಕಚಮಚ
ಮೊಸರು – ೨ ಚಿಕ್ಕಚಮಚ
ಟೊಮೇಟೊ – ೧ ಕಪ್ (ಚಿಕ್ಕದಾಗಿ ತುಂಡುಮಾಡಿದ್ದು)
ಗರಂ ಮಸಾಲಾ ಪುಡಿ – ೧ ಚಿಕ್ಕಚಮಚ
ಹಸಿ ಮೆಣಸು – ೧
ಕೊತ್ತಂಬರಿ ಸೊಪ್ಪು -ಅರ್ಧ ಕಟ್ಟು (ಚಿಕ್ಕದಾಗಿ ಹೆಚ್ಚಿದ್ದು)
ಉಪ್ಪು – ರುಚಿಗನುಸಾರ
ಅಡುಗೆ ಎಣ್ಣೆ – ಎರಡರಿಂದ ಮೂರು ದೊಡ್ಡ ಚಮಚ

ತಯಾರಿಸುವ ವಿಧಾನ:
೧) ಒಂದು ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಈರುಳ್ಳಿ ಹಾಕಿ ಕೊಂಚ ಕಂದು ಬಣ್ಣ ಬರುವವರೆಗೆ ಹುರಿಯಿರಿ
೨) ಇದಕ್ಕೆ ಖೀಮಾ ಹಾಕಿ ಎರಡು ನಿಮಿಷ ಹುರಿಯಿರಿ.
೩) ಇದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್ ಹಾಕಿ ಮಧ್ಯಮ ಉರಿಯಲ್ಲಿ ಐದು ನಿಮಿಷ ತಿರುವಿ.
೪) ಇದಕ್ಕೆ ಉಳಿದ ಎಲ್ಲಾ ಸಾಮಾಗ್ರಿ ಮತ್ತು ಉಪ್ಪು ಹಾಕಿ ತಿರುವಿ ಚೆನ್ನಾಗಿ ಮಿಶ್ರಣ ಮಾಡಿ
೫) ಒಂದು ಕಪ್ ನೀರು ಹಾಕಿ ಸುಮಾರು ಐದು ನಿಮಿಷ ಮದ್ಯಮ ಉರಿಯಲ್ಲಿ ಬೇಯಿಸಿ
೬) ನೀರು ಪೂರ್ಣವಾಗಿ ಇಂಗುವವರೆಗೆ ತಿರುವಿದ ಬಳಿಕ ಟೊಮೇಟೊ ಮತ್ತು ಮೊಸರು ಹಾಕಿ ಹತ್ತು ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ.
೭) ಈಗ ಆಲುಗಡ್ಡೆ ಹಾಕಿ ತಿರುವಿ ಒಂದೂವರೆ ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ಹದಿನೈದು ನಿಮಿಷ ಅಥವಾ ಆಲುಗಡ್ಡೆ ಬೇಯುವವರೆಗೆ ಬೇಯಿಸಿ.
೮) ಈಗ ಗರಂ ಮಸಾಲಾ ಪುಡಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ತಿರುವಿ ಒಲೆ ನಂದಿಸಿ.
೯) ಬಿಸಿ ಬಿಸಿ ಇದ್ದಂತೆಯೇ ರೊಟ್ಟಿ, ಪರೋಟ, ನಾನ್ ಅಥವಾ ಅನ್ನದೊಂದಿಗೆ ಬಡಿಸಿ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *