ವೆಜಿಟೆಬಲ್ ಪಫ್ಸ್

Posted on: March 1, 2017

31-31-vegetable-puff-311011ವೆಜಿಟೆಬಲ್ ಪಫ್ಸ್ ಗೆ ಬೇಕಾಗುವ ಸಾಮಾನು:
* ಪಫ್ ಶೀಟ್ (ರೆಡಿ ಸಿಗುತ್ತೆ)
* 1-2 ಆಲೂಗಡ್ಡೆ (ಬೇಯಿಸಿ ಸಿಪ್ಪೆ ತೆಗೆದು ಕಲೆಸಿರಬೇಕು)
* 1/2 ಕತ್ತರಿಸಿದ ಈರುಳ್ಳಿ
* 1/2 ಕಪ್ ಬೇಯಿಸಿದ ಬಟಾಣಿ
* 1/2 ಕಪ್ ತುರಿದ ಕ್ಯಾರೆಟ್
* 1/2 ಕಪ್ ಕ್ಯಾಪ್ಸಿಕಂ
* 1 ಚಮಚ ಗರಂ ಮಸಾಲ
* 1 ಚಮಚ ಸಾಸಿವೆ
* 1 ಚಮಚ ಕೆಂಪು ಮೆಣಸಿನ ಪುಡಿ
* ಎಣ್ಣೆ, ಉಪ್ಪು

ವೆಜಿಟೆಬಲ್ ಪಫ್ಸ್ ಮಾಡುವ ವಿಧಾನ:
* ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಸಾಸಿವೆ ಹಾಕಿ ಈರುಳ್ಳಿ, ಕ್ಯಾಪ್ಸಿಕಂ ಮತ್ತು ಕ್ಯಾರೆಟ್ ಹುರಿದುಕೊಳ್ಳಬೇಕು. ನಂತರ ಬಟಾಣಿ, ಆಲೂಗಡ್ಡೆಯನ್ನು ಬೆರೆಸಿ ಗರಂ ಮಸಾಲ, ಕೆಂಪು ಮೆಣಸಿನ ಪುಡಿ, ಉಪ್ಪು ಹಾಕಿ 10 ನಿಮಿಷ ಚೆನ್ನಾಗಿ ತಿರುಗಿಸಬೇಕು. ನಂತರ ಅದನ್ನು ತಣ್ಣಗಾಗಲು ಬಿಡಬೇಕು.

* ಪಫ್ ಶೀಟ್ ನಲ್ಲಿ ಈ ಪಲ್ಯದ ಮಿಶ್ರಣವನ್ನು ಸೇರಿಸಿ ಮುಚ್ಚಬೇಕು.

* ಓವೆನ್ ನಲ್ಲಿ 40 ನಿಮಿಷ ಈ ಪಫ್ಸ್ ಗಳನ್ನು ಬೇಯಿಸಿದರೆ ನಿಮ್ಮ ಮಕ್ಕಳ ಮೆಚ್ಚಿನ ತಿಂಡಿ ವೆಜಿಟೆಬಲ್ ಪಫ್ಸ್ ರೆಡಿಯಾಗಿರುತ್ತೆ. ಇದನ್ನು ಚಟ್ನಿ ತಯಾರಿಸಿ ಅದರೊಂದಿಗೆ ತಿಂದರೆ ಇನ್ನು ಚೆಂದ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *