ಅವಲಕ್ಕಿ ಪಾಯಸ

Posted on: April 22, 2017
aval-payasamಬೇಕಾಗುವ ಪದಾರ್ಥಗಳು
 • ಅವಲಕ್ಕಿ 1 ಕಪ್‌
 • ಹಾಲು 1 ಕಪ್‌
 • ಸಕ್ಕರೆ 1/2 ಕಪ್‌
 • ಗೋಡಂಬಿ ಸ್ವಲ್ಪ
 • ಒಣ ದ್ರಾಕ್ಷಿ 1 ಚಮಚ
 • ತುಪ್ಪ 3 ಚಮಚ
 • ಏಲಕ್ಕಿ 1/4 ಚಮಚ
 • ಮಿಲ್ಕ್‌ ಮೇಡ್‌ 3 ಚಮಚ
 ತಯಾರಿಸುವ ವಿಧಾನ : 
 • ಸ್ಟವ್ ಮೇಲೆ ಪ್ಯಾನ್ ಇಟ್ಟು 1 ಚಮಚ ತುಪ್ಪ ಹಾಕಿ. ನಂತರ ಅವಲಕ್ಕಿ ಹಾಕಿ ಗೋಲ್ಡನ್‌ ಬಣ್ಣ ಬರುವಂತೆ ಫ್ರೈ ಮಾಡಿ ನಂತರ ತೆಗೆಯಿರಿ.
 • ಒಂದು ಬೌಲ್‌ನಲ್ಲಿ ಹಾಲು ಹಾಕಿ ಕುದಿ ಬರಿಸಿ. ಸ್ಟೌಅನ್ನು ಸಿಮ್‌ನಲ್ಲಿಟ್ಟಿರಿ. ಅದಕ್ಕೆ ಫ್ರೈ ಮಾಡಿದ ಅವಲಕ್ಕಿ ಹಾಕಿ ಸರಿಯಾಗಿ ಮಿಕ್ಸ್‌ ಮಾಡಿ.
 • ಈ ಹಾಲಿಗೆ ಸಕ್ಕರೆ, ಮಿಲ್ಕ್‌ ಮೇಡ್‌ ಹಾಕಿ ಸರಿಯಾಗಿ ಕಲಸಿ. ಸಕ್ಕರೆ ಪೂರ್ತಿಯಾಗಿ ಕರಗುವಂತೆ ನೋಡಿ. ಅದಕ್ಕೆ ಏಲಕ್ಕಿ ಪುಡಿ ಹಾಕಿ ಕೆಳಗಿಳಿಸಿ.
 • ನಂತರ ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಫ್ರೈ ಮಾಡಿ ಅದನ್ನು ಹಾಗೂ ಉಳಿದ ತುಪ್ಪವನ್ನು ಸಹ ಪಾಯಸಕ್ಕೆ ಹಾಕಿ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *