ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟ್‌ರ್‌ವೊಂದು ತಡೆಗೋಡೆಗೆ ಡಿಕ್ಕಿ ಪರಿಣಾಮ ತಡೆಗೋಡೆ ಬಿದ್ದು ಮಗುವೊಂದು ಜೀವಸ್ಥಳದಲ್ಲೇ ಸಾವನಪ್ಪಿರುವ ಘಟನೆ ಸಂಭವಿಸಿದೆ.

Posted on: April 3, 2017

april 2 ss1 copyಶನಿವಾರಸಂತೆ:- ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟ್‌ರ್‌ವೊಂದು ತಡೆಗೋಡೆಗೆ ಪಡಿಸಿದ ಪರಿಣಾಮ ತಡೆಗೋಡೆ ಬಿದ್ದು ಮಗುವೊಂದು ಜೀವಸ್ಥಳದಲ್ಲೇ ಸಾವನಪ್ಪಿರುವ ಘಟನೆ ಗ್ರಾಮದ ಸುಳುಗಳಲೆ ಕಾಲೋನಿಯಲ್ಲಿ ಸಂಭವಿಸಿದೆ.
ಆರು ವರ್ಷದ ಎಸ್.ಪಿ.ಚರಣ್ ಸಾವನ್ನಪ್ಪಿದ ಮಗು. ಸುಳುಗಳಲೆ ಕಾಲೋನಿಯ ನಿವಾಸಿ ಪ್ರವೀಣ್ ಹಾಗೂ ಜ್ಯೋತಿ ದಂಪತಿಗಳಿಗೆ ಸುಮಾರು ಆರುವರ್ಷದ ಅವಳಿ ಮಕ್ಕಳಿದ್ದು ಭಾನುವಾರ ಮದ್ಯಾಹ್ನ ಎಂದಿನಂತೆ ತಮ್ಮ ಅಜ್ಜಿ ಅವಳಿ ಮಕ್ಕಳಿಗೂ ಮನೆಯ ಒಳಗಡೆ ಊಟ ಮಾಡಿಸುತಿದ್ದರು. ಊಟವಾದ ನಂತರ ಚರಣ್ ಮನೆಯ ಮುಂಬಾಗದಲ್ಲಿ ಬಂದು ಆಟವಾಡುತಿದ್ದನು. ಇವರ ಮನೆ ಮುಂಬಾಗದಲ್ಲಿ ನೂತನವಾಗಿ ಮನೆ ನಿರ್ಮಿಸುತ್ತಿರುವವರ ಮನೆಗೆ ಕಲ್ಲಿನ ಪುಡಿಯನ್ನು ತಂದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಚರಣ್ ಆಟವಾಡುತಿದ್ದ ಸ್ಥಳದಲ್ಲಿದ್ದ ತಡೆಗೋಡೆಗೆ ಅಪ್ಪಳಿಸಿದೆ. ಪರಿಣಾಮ ತಡೆಗೋಡೆ ಹಿಂಬಾಗದಲ್ಲಿ ಆಟವಾಡುತಿದ್ದ ಚರಣ್ ಮೇಲೆ ತಡೆಗೋಡೆ ಕುಸಿದು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ತಕ್ಷಣ ಸ್ಥಳಿಯರು ಮಗುವನ್ನು ಶನಿವಾರಸಂತೆ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರಾದರು ಆಗಲೆ ತಲೆಯ ಭಾಗಕ್ಕೆ ಹೆಚ್ಚು ಗಂಬಿರ ಗಾಯವಾಗಿದ್ದರಿಂದ ಪ್ರಾಣ ಪಕ್ಷಿಹಾರಿ ಹೋಗಿತ್ತು.
ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸೊಮವಾರಪೇಟೆ ಪೊಲೀಸ್ ವೃತ್ತ ನಿರಿಕ್ಷಕ ಪರಶಿವಮೂರ್ತಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *