ವಾರ ಭವಿಷ್ಯ (24 – 1 ಮೇ 2017)

Posted on: April 24, 2017

ಮೇಷ
ಲೈಂಗಿಕ ಜೀವನವೂ ಅದರ ಅನ್ಯೋನ್ಯತೆ ಮತ್ತು ಆನಂದವನ್ನು ಕಳೆದುಕೊಳ್ಳುತ್ತದೆ. ಅನುಪಯುಕ್ತ ವಾದಗಳಿಗೆ ಗಮನ ನೀಡಬೇಡಿ. ನೀವು ಯಾವಾಗಲೂ ಜಗಳಗಳಿಂದ ಪ್ರಚೋದನೆ ಹೊಂದಿದರೂ, ಅದರಿಂದ ಧನಾತ್ಮಕವಾದದ್ದೇನೂ ಹೊರಹೊಮ್ಮುವುದಿಲ್ಲ.

ವೃಷಭ
ಯಶಸು ಸ್ವಲ್ಪ ವಿಳಂಬದ ನಂತರ ಬರುತ್ತದೆ. ಉದ್ಯಮಿಗಳು ಬೃಹತ್ ಹೂಡಿಕೆಗಳನ್ನು ಮಾಡದಿರಲು ಸಲಹೆ ನೀಡಲಾಗುತ್ತದೆ. ಹಣ ಖರ್ಚು ಮಾಡುವ ಹವ್ಯಾಸಕ್ಕೆ ಕಡಿವಾಣ ಹಾಕುವುದು ಮುಖ್ಯ. ನಿಮ್ಮ ಪ್ರೀತಿಯ ಜೀವನದಲ್ಲಿ ಆಸಕ್ತಿದಾಯಕವಾಗಿದ್ದೇನೂ ಕಾಣುತ್ತಿಲ್ಲ.
ಮಿಥುನ
ಮಿಶ್ರ ಫಲಿತಾಂಶಗಳ ಮಳೆ ಸುರಿಸುತ್ತದೆ. ದೈನಂದಿನ ಜೀವನದಲ್ಲಿ ಒತ್ತಡ ಬರುವ ಸಾಧ್ಯತೆಯಿದೆ; ಆದರೆ, ವೃತ್ತಿಪರ ಜೀವನದ ನಿಮಗೆ ಹೇರಳ ಯಶಸ್ಸನ್ನು ಅನುಗ್ರಹಿಸುವ ಸಾಧ್ಯತೆಯಿದೆ. ಮೇಷ ರಾಶಿಯವರು ಹಾರಾಡಲು ಪ್ರಾರಂಭಿಸಬೇಡಿ,
ಕರ್ಕಾಟಕ
ನಿಮ್ಮ ವೈವಾಹಿಕ ಜೀವನಕ್ಕೆ ಸಮಯ ಮೀಸಲಿಟ್ಟು ನಿಮ್ಮ ಜೀವನ ಸಂಗಾತಿಯನ್ನು ಹೊರಗಡೆ ಕರೆದುಕೊಂಡು ಹೋಗಿ. ಇದು ಸಂಬಂಧವನ್ನು ವೃದ್ಧಿಸುತ್ತದೆ. ಪ್ರೇಮ ಸಂಬಂಧದಲ್ಲಿ ತಪ್ಪು ತಿಳಿವಳಿಕೆಯನ್ನು ದೂರವಿಡಿ; ಇಲ್ಲವಾದರೆ ಸಮಸ್ಯೆ ಕಂಡುಬರುತ್ತದೆ. ಯಾರನ್ನಾದರೂ ತಕ್ಷಣಕ್ಕೆ ತೀರ್ಮಾನಿಸಬೇಡಿ.
ಸಿಂಹ
ನೌಕರರು ಸಹೋದ್ಯೋಗಿಗಳ ಜತೆ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಹೊಸ ಉದ್ಯೋಗ ಪಡೆಯುವುದಕ್ಕಿಂತ ಮೊದಲು ಪ್ರಸ್ತುತ ಉದ್ಯೋಗಕ್ಕೆ ರಾಜೀನಾಮೆ ನೀಡಬೇಡಿ. ಇಲ್ಲವಾದರೆ, ನೀವು ಹೊಸ ಉದ್ಯೋಗವನ್ನು ಪಡೆಯಲು ತುಂಬಾ ದಿನಗಳವರೆಗೆ ಕಾಯಬೇಕಾದೀತು. ಆದರೆ, ನೀವು ಹೊಸ ಉದ್ಯೋಗವನ್ನು ಪಡೆಯುತ್ತೀರಿ ಎಂದು ಅರ್ಥವಾಗಿಲ್ಲ.
ಕನ್ಯಾ
ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ. ನೀವು ಪುರಸ್ಕಾರವನ್ನೂ ಪಡೆಯುತ್ತೀರಿ. ಧನಾತ್ಮಕ ಚಿಂತನೆ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಇತರ ವ್ಯಕ್ತಿಗಳು ನಿಮ್ಮ ಕೆಲಸದಿಂದ ಮೆಚ್ಚುತ್ತಾರೆ. ಹೊಸ ತಂತ್ರ ಅಥವಾ ಕೌಶಲವನ್ನು ಕಲಿಯಲು ಪ್ರಯತ್ನಿಸುತ್ತೀರಿ. ಇದರಿಂದ ಆದಾಯದ ಹೊಸ ಮೂಲವನ್ನು ಪಡೆಯುತ್ತೀರಿ.
ತುಲಾ
ನಿಮ್ಮ ಸ್ಪರ್ಧಿಗಳಿಗೆ ನಿಮ್ಮನ್ನು ಎದುರಿಸುವುದು ಕಷ್ಟವಾದೀತು. ಅತಿಯಾದ ಮಾನಸಿಕ ಸಮಸ್ಯೆಯನ್ನು ದೂರವಿಡಿ. ಸಹೋದ್ಯೋಗಿಗಳ ಜತೆ ನಿಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಳ್ಳಬೇಡಿ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಮೂಲಕ, ನೀವು ಕೆಲವು ಪ್ರಮುಖ ಜನರನ್ನು ಭೇಟಿಯಾಗುತ್ತೀರಿ.
ವೃಶ್ಚಿಕ
ತಾಯಿಯೊಂದಿಗಿನ ಸಂಬಂಧ ಉತ್ತಮವಾಗಿರಬೇಕು. ನಿತ್ಯ ಜೀವನದಲ್ಲಿ ತುಂಬಾ ಬ್ಯುಸಿಯಾಗಿದ್ದರೆ, ನಿಮ್ಮ ಜೀವನ ಸಂಗಾತಿಗೆ ಹೆಚ್ಚು ಸಮಯ ನೀಡಲಾಗದು. ಇವು ನಿಮ್ಮ ಸಂಬಂಧ ಹಳಸಲು ಕಾರಣವಾಗಬಹುದು. ಸಂಗಾತಿಯನ್ನು ಹೊರಗೆ ಕರೆದುಕೊಂಡು ಹೋಗಿ ಮತ್ತು ಒಂದು ಪ್ರವಾಸವನ್ನು ಯೋಜಿಸಿ.
ಧನು
ವಿದ್ಯಾರ್ಥಿಗಳಿಗೆ ಮಿಶ್ರ ಫಲಿತಾಂಶವನ್ನು ನೀಡುತ್ತದೆ. ಹೆಚ್ಚು ಕಠಿಣ ಪರಿಶ್ರಮಕ್ಕೆ ಕಡಿಮೆ ಫಲಿತಾಂಶವನ್ನು ಪಡೆದರೆ, ಚಿಂತಿತರಾಗಬೇಡಿ. ನಿಮ್ಮ ಭಾಗದ ಯಶಸ್ಸನ್ನು ನೀವು ಖಂಡಿತವಾಗಿಯೂ ಪಡೆಯುತ್ತೀರಿ. ಕೌಟುಂಬಿಕ ನಿರ್ಧಾರಗಳನ್ನು ಸರಿಯಾದ ವಿಚಾರ ಮಾಡಿ ತೆಗೆದುಕೊಳ್ಳಬೇಕು
ಮಕರ
ಬಡ್ತಿಯ ಸಾಧ್ಯತೆಗಳೂ ಇವೆ. ಹೀಗಾಗಿ, ಕಠಿಣ ಪರಿಶ್ರಮ ಮುಂದುವರಿಸಿ, ನಿರಾಶರಾಗಬೇಡಿ. ಉದ್ಯೋಗ ಹುಡುಕುತ್ತಿರುವವರಿಗೆ ಯಶಸ್ಸಿದೆ. ವೃತ್ತಿ ಜೀವನದಲ್ಲೂ ಉತ್ತಮ ಆರಂಭವಿದೆ. ಕಾನೂನು, ಔಷಧ, ವಾಣಿಜ್ಯ ಇತ್ಯಾದಿಗೆ ಸಂಬಂಧಿಸಿದ ವ್ಯಕ್ತಿಗಳು ಧನಾತ್ಮಕ ಸಮಯವನ್ನು ಪಡೆಯುತ್ತಾರೆ.
ಕುಂಭ
ನೀವು ನಿಮ್ಮ ಕೆಲಸದ ಗುಣಮಟ್ಟದಿಂದ ಚಕಿತರಾಗುತ್ತೀರಿ. ದ್ವೇಷಿಗಳು ನಿಮ್ಮೊಂದಿಗೆ ಎಲ್ಲ ವಿಚಾರಗಳನ್ನೂ ಪರಿಹರಿಸಲು ಪ್ರಯತ್ನಿಸುತ್ತಾರೆ. ನಿಮ್ಮ ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. ಇತರರಿಗೆ ನೆರವಾಗುವ ಮುನ್ನ, ನಿಮ್ಮ ಹಣಕಾಸಿನ ಸನ್ನಿವೇಶವನ್ನು ಮೊದಲು ಪರಿಗಣಿಸಿ. ಅತಿಯಾದ ವೆಚ್ಚದಿಂದ ಭವಿಷ್ಯದಲ್ಲಿನ ಸಮಸ್ಯೆಗಳನ್ನು ನೀವು ಎದುರಿಸಬೇಕಾದೀತು.
ಮೀನ
ತಪ್ಪು ಆಹಾರ ಸೇವನೆ ವಿಧಾನ ಹಾಗೂ ವಾತಾವರಣ ಬದಲಾವಣೆ ಸಮಸ್ಯೆಯಿಂದ ನೀವು ಸಮಸ್ಯೆಯನ್ನು ಎದುರಿಸಬಹುದು. ಮಾನಸಿಕ ಒತ್ತಡವನ್ನು ದೂರವಿಡಲು ನೀವು ಖುಷಿಯಾಗಿರಬೇಕು. ಸೊಪ್ಪು ತರಕಾರಿಗಳ ಸೇವನೆ ನಿಮಗೆ ಔಷಧದ ರೀತಿ ಕೆಲಸ ಮಾಡಬಹುದು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *