ವಾರ ಭವಿಷ್ಯ (15 – 22 ಮೇ 2017)

Posted on: May 15, 2017

ಮೇಷ
ನಿಮ್ಮ ಪ್ರೇಮ ಜೀವನದಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ. ಹಾಗೆಯೇ, ಕಾರಣವಿಲ್ಲದೇ ನಿಮ್ಮ ಸಂಗಾತಿಯ ಮೇಲೆ ಅನುಮಾನ ವ್ಯಕ್ತಪಡಿಸುವುದನ್ನು ದೂರವಿಡಿ. ನೀವು ವಿದ್ಯಾರ್ಥಿಯಾಗಿದ್ದರೆ, ನೀವು ಸ್ವಲ್ಪ ಕಠಿಣ ಪರಿಶ್ರಮ ವಹಿಸಬೇಕಾದೀತು.

ವೃಷಭ
ನಿಮ್ಮ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ. ನೀವು ಗೌರವ ಹಾಗೂ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಪಡೆಯಬಹುದು. ನಿಮ್ಮ ವರ್ತನೆಯಲ್ಲಿನ ಸ್ವಲ್ಪ ಬದಲಾವಣೆಯು ನಿಮ್ಮ ಲಾಭಗಳನ್ನು ಹೆಚ್ಚಿಸಬಹುದು

ಮಿಥುನ
ಇತರರೊಂದಿಗೆ ಹಣ ವಿನಿಮಯದ ವಿಚಾರದಲ್ಲಿ ಎಚ್ಚರದಿಂದಿರುವುದು ಉತ್ತಮ. ಉತ್ಸಾಹದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ನಿಮಗೆ ಹೊರೆಯಾಗಬಹುದು. ಇದರ ಹೊರತಾಗಿ, ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಹೂಡಿಕೆ ಮಾಡುವ ಅವಕಾಶ ಪಡೆಯುತ್ತೀರಿ ಮತ್ತು ಕುಟುಂಬದ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ

ಕರ್ಕಾಟಕ
ನೀವು ಕೆಲವು ಹೊಸ ಕೆಲಸಗಳಿಗೆ ಯೋಜನೆ ಮಾಡುತ್ತೀರಿ, ಇದು ಯಶಸ್ವಿಯಾಗುತ್ತದೆ. ಗ್ಯಾಂಬ್ಲಿಂಗ್‌, ಲಾಟರಿ ಇತ್ಯಾದಿಯಂಥ ಉತ್ತಮವಲ್ಲದ ಚಟುವಟಿಕೆಗಳಿಂದ ದೂರವಿರಿ. ಇಲ್ಲವಾದರೆ ನೀವು ಸಮಸ್ಯೆಯನ್ನು ಎದುರಿಸಬೇಕಾದೀತು. ಸೆಪ್ಟೆಂಬರ್‌ ನಂತರ ಎಲ್ಲದರಲ್ಲೂ ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತದೆ.

ಸಿಂಹ
ನೀವು ರಾಜಕೀಯದಲ್ಲಿದ್ದರೆ, ನಿಮ್ಮ ಕೀರ್ತಿ ಎಲ್ಲೆಡೆ ಹರಡುತ್ತದೆ. ಹೊಸ ಸ್ನೇಹ ನಿಮಗೆ ಖುಷಿ ನೀಡುತ್ತದೆ. ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ಎಚ್ಚರಿಕೆಯಿಂದ ಮಾಡಿ. ಇಲ್ಲವಾದರೆ ನೀವು ಕೆಲವು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು.

ಕನ್ಯಾ
ನಿಮ್ಮ ಚಿಂತೆ ನಿವಾರಣೆಯಾಗುತ್ತದೆ. ಶಾಂತಿ ಮತ್ತು ಸೌಹಾರ್ದತೆ ನಿಮ್ಮ ಕುಟುಂಬದಲ್ಲಿ ನೆಲೆಸುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಯಶಸ್ಸಿದೆ. ಇದರ ಜತೆಗೆ, ಉದ್ಯೋಗದಲ್ಲಿ ಬದಲಾವಣೆ ಬಯಸುತ್ತಿರುವವರಿಗೂ ಇದು ಹೊಸ ಅವಕಾಶಕ್ಕೆ ನಾಂದಿಯಾಗಲಿದೆ.

ತುಲಾ
ನಿಮ್ಮ ಆಸಕ್ತಿಯು ಹೊಸ ವಿಚಾರಗಳಿಗೆ ಹರಿಯುತ್ತದೆ. ದೀರ್ಘ ಪ್ರಯಾಣವನ್ನು ದೂರವಿಡಿ. ನಿಮ್ಮ ಪ್ರೇಮಜೀವನದ ಬಗ್ಗೆ ಮಾತನಾಡುವುದಾದರೆ, ಸಂಬಂಧ ಗಟ್ಟಿಯಾಗುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರರು ನಿಮ್ಮನ್ನು ತುಂಬಾ ಬೆಂಬಲಿಸುತ್ತಾರೆ. ನಿಮ್ಮ ಕೆಲಸವು ಬೆಳವಣಿಗೆಯ ಅವಕಾಶವನ್ನು ಪಡೆಯುತ್ತದೆ.

 

ವೃಶ್ಚಿಕ
ನೀವು ಹಲವು ಹಣಕಾಸು ಸವಾಲುಗಳನ್ನು ಎದುರಿಸಬೇಕಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ. ವರ್ಷದ ಅರ್ಧಭಾಗದಲ್ಲಿ ನಿಮ್ಮ ಅದೃಷ್ಟ ಇನ್ನಷ್ಟು ಗಟ್ಟಿಯಾಗಲಿದೆ. ನಿಮ್ಮ ಪರಿಶ್ರಮಕ್ಕಿಂತ ಹೆಚ್ಚು ಗಳಿಸುತ್ತೀರಿ.

ಧನು
ನಿಮ್ಮ ಪ್ರೇಮ ಜೀವನದಲ್ಲಿ ಉತ್ತಮ. ಸಮತೋಲನ ಕಾಯ್ದುಕೊಳ್ಳಿ. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ. ವಿದ್ಯಾರ್ಥಿಗಳ ಬಗ್ಗೆ ಮಾತನಾಡುವುದಾದರೆ, ಈ ವರ್ಷ ಉತ್ತಮವಾಗಿರುತ್ತದೆ ಮತ್ತು ಅಧ್ಯಯನ, ಬ್ಯಾಂಕಿಂಗ್‌ ಮತ್ತು ನಿರ್ವಹಣೆ ವಿಚಾರದಲ್ಲಿ ಉತ್ತಮವಾಗಿದೆ.

ಮಕರ
ನೀವು ಸ್ವಲ್ಪ ಕಠಿಣ ಪರಿಶ್ರಮವಹಿಸಿದರೂ, ಇದರ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ನಿಮ್ಮ ಜತೆ ಶಿಕ್ಷಕರು ಖುಷಿಯಾಗಿರುತ್ತಾರೆ ಮತ್ತು ಶಿಕ್ಷಣದಲ್ಲಿ ನೀವು ಯಶಸ್ವಿಯಾಗುತ್ತೀರಿ.

 

ಕುಂಭ
ನೀವು ಆರಂಭಿಸಿದ ಎಲ್ಲವೂ ಸರಿಯಾದ ಸಮಯಕ್ಕೆ ನಡೆಯುತ್ತದೆ. ನಿಮ್ಮ ಎಲ್ಲ ಚಿಂತೆಗಳೂ ನಿವಾರಣೆಯಾಗುತ್ತವೆ. ನಿಮ್ಮ ಕೆಲಸದ ಜತೆಗೆ, ಹಲವು ಇತರ ಸಂಪನ್ಮೂಲಗಳು ನಿಮಗೆ ಅನುಕೂಲ ಕಲ್ಪಿಸುತ್ತವೆ. ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಉತ್ತಮ ಕೊಡುಗೆಗಳು ಸಿಗುತ್ತವೆ.

 

ಮೀನ
ನೀವು ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಬೇಕು. ವ್ಯವಹಾರ ಪಾಲುದಾರಿಕೆಯಲ್ಲಿ ಒಳಗೊಳ್ಳುವ ಮೊದಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿ. ನಿಮ್ಮ ಹಣವನ್ನು ಎಲ್ಲಾದರೂ ಹೂಡಿಕೆ ಮಾಡಲು ಯೋಜಿಸಿದ್ದರೆ, ಸಮಯ ಅಷ್ಟೇನೂ ಉತ್ತಮವಾಗಿರುವಂತೆ ಕಾಣುವುದಿಲ್ಲ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *