ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ವಾರ ಭವಿಷ್ಯ (8 – 15ಮೇ 2017)

Posted on: May 8, 2017
ಮೇಷ
ಹೆಚ್ಚಿನ ಪ್ರತಿಕೂಲಗಳಿಲ್ಲದೆ ಕೆಲಸ ಕಾರ್ಯಗಳು ಸರಾಗವಾಗಿ ನಡೆದುಹೋಗುತ್ತವೆ. ಕಾರ್ಯಕ್ಷೇತ್ರದಲ್ಲಿ ನಿಮಗೆ ಶತ್ರು ಬಾಧೆಯಿರದು. ಆಹಾರಪದಾರ್ಥಗಳ ವ್ಯವಹಾರಗಳಲ್ಲಿ ಲಾಭಾಂಶ ಹೆಚ್ಚಲಿವೆ. ಸಾಂಸಾರಿಕವಾಗಿ ಗೃಹಿಣಿಯ ಸಹಕಾರ ತೃಪ್ತಿ ತಂದೀತು. ದೈವಾನುಗ್ರಹ ಉತ್ತಮವಿದ್ದು ನಿರುದ್ಯೋಗಿಗಳಿಗೆ, ಅವಿವಾಹಿತರಿಗೆ ನಿರೀಕ್ಷಿತ ಫಲಗಳನ್ನು ತಂದು ಕೊಡುತ್ತದೆ. ವೃತ್ತಿರಂಗದಲ್ಲಿನ ಚಾಡಿಮಾತು ಗುಲ್ಲೆಬ್ಬಿಸಬಹುದು. ತಾಳ್ಮೆ ಇರಲಿ. ಪ್ರಯಾಣದಲ್ಲಿ ದೇಹಾಯಾಸವಾಗದಂತೆ ಕಾಳಜಿ ಇರಲಿ.ವಿದ್ಯಾರ್ಥಿಗಳ ಅರ್ಹತೆಗೆ ಉತ್ತಮ ಸ್ಥಾನಧಿಮಾಧಿನವಿದೆ. ಶುಭ ವಾರಗಳು: ಶುಕ್ರ, ಶನಿ, ಭಾನುವಾರ.

ವೃಷಭ
ಅಧಿಕ ಪ್ರಯತ್ನಕ್ಕೆ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿ ಇರದು.ನಿರುದ್ಯೋಗಿಗಳು ತಾತ್ಕಾಲಿಕ ವೃತ್ತಿಯಲ್ಲೇ ಸಮಾಧಾನ ಪಡುವಂತಾದೀತು.ರಾಜಕೀಯ ಕ್ಷೇತ್ರದವರಿಗೆ ಸದ್ಯದ ಪರಿಸ್ಥಿತಿಯಲ್ಲಿ ತಾಟಸ್ಥ ಧೋರಣೆ ಉತ್ತಮ ವೆನಿಸುತ್ತದೆ. ಕೆಲಸಕಾರ್ಯಗಳು ನಿಧಾನಗತಿಯಲ್ಲೇ ನಡೆದುಹೋಗಲಿವೆ. ದೇಹಾರೋಗ್ಯ ಹದಧಿಗೆಟ್ಟಿàತು. ಹಾಗೇ ಅಧಿಕ ವೈದ್ಯಕೀಯ ಖರ್ಚಿನ ಹೊರೆ, ಆತಂಕ ತಂದೀತು. ವಿದ್ಯಾರ್ಥಿಗಳಿಗೆ ಉದಾಸೀನತೆಯ ಜೊತೆ ನಿರಾಶೆ ಕಾದಿರುತ್ತದೆ. ಸಾಂಸಾರಿಕವಾಗಿ ವಿಲಾಸೀ ಜೀವನ ಸುಗಮವಾಗಿ ನಡೆಯುತ್ತದೆ. ಶುಭ ವಾರಗಳು: ಬುಧ, ಶುಕ್ರ, ಶನಿವಾರ.

ಮಿಥುನ
ಗೃಹ ಬಳಕೆಯ ಸಾಮಗ್ರಿಗಳು ಮನೆಗೆ ಬಂದಾವು. ಸಾಂಸಾರಿಕ ವಾಗಿ ಹೆಂಡತಿ-ಮಕ್ಕಳಿಂದ ತೃಪ್ತಿ. ಹೊಸ ವಾಹನ, ಮನೆ ಖರೀದಿಗೆ ಆರ್ಥಿಕವಾಗಿ ಅನುಕೂಲವಾಗುತ್ತದೆ. ಮನೆಯಲ್ಲಿ ಮಂಗಲ ಕಾರ್ಯಗಳ ಚಿಂತನೆ ನಡೆಯುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ದುಡುಕುತನದಿಂದ ಮೋಸ ಹೋಗುವ ಸಂಭವವಿರುತ್ತದೆ. ವಿದ್ಯಾರ್ಥಿಗಳಿಗೆ ಪ್ರಯತ್ನಬಲವೇ ಪರೀಕ್ಷೆಯ ಉತ್ತರ ವಾಗಲಿದೆ. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಶೀಲತೆ ಪ್ರಸನ್ನಗೊಂಡು ಜವಾಬ್ದಾರಿ ಹೆಚ್ಚಲಿದೆ.ನ್ಯಾಯಾಲಯದ ಕೆಲಸ ಕಾರ್ಯಗಳು ನಿಮಗೆ ಮುನ್ನಡೆಯನ್ನು ಸಾಧಿಸುತ್ತವೆ.ಶುಭ ವಾರಗಳು: ಬುಧ, ಗುರು, ಭಾನುವಾರ

ಕಟಕ
ಸಮಯಕ್ಕೆ ಸರಿಯಾಗಿ ಕಾರ್ಯಾನುಕೂಲವಾಗಲಿದೆ. ಅಧಿಕ ವಾಯು, ಶೀತಬಾಧೆಯಿಂದ ಅನಾರೋಗ್ಯದ ಭೀತಿ ಕಂಡುಬಂದೀತು. ಕಷ್ಟದಲ್ಲೂ ಸುಖ- ಸಮಾಧಾನ ನಿರೀಕ್ಷಿಸಬಹುದಾಗಿದೆ. ಕೌಟುಂಬಿಕವಾಗಿ ಹಿರಿತನದ ಹೆಮ್ಮೆ ಗೌರವ ತರುತ್ತದೆ. ದೇವತಾ ಕಾರ್ಯಗಳಿಂದ ಮನಸ್ಸಿಗೆ ಸಮಾಧಾನವಾಗುತ್ತದೆ. ನವದಂಪತಿಗಳಿಗೆ ಶುಭಸುದ್ದಿಯ ಸೂಚನೆ ಅನುಭವಕ್ಕೆ ಬರುತ್ತದೆ. ಮಿತ್ರರ ಸಹಕಾರ, ಪ್ರೇರಣೆಗಳಿಂದ ತೋರಿಬರುವ ಕ್ಲೇಶಗಳನ್ನು ಎದುರಿಸುವಂತಾದೀತು. ಅವಿವಾಹಿತರಿಗೆ ಗೊಂದಲದ ಪರಿಸ್ಥಿತಿಯಿಂದ ಕಾರ್ಯಸಾಧನೆಯಲ್ಲಿ ಅಡ್ಡಿಯಾಗುತ್ತದೆ. ಶುಭವಾರಗಳು: ಚಂದ್ರ, ಕುಜ, ಶನಿವಾರ.

ಸಿಂಹ
ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತಾ ಹೋಗಲಿದೆ. ಕೌಟುಂಬಿಕವಾಗಿ ನೆಮ್ಮದಿಯ ದಿನಗಳಾದಾವು. ನ್ಯಾಯಾಲಯದ ತೀರ್ಪಿನಲ್ಲಿ ನಿಮ್ಮ ಮೇಲ್ಮೆಕಾಣಿಸೀತು. ನವದಂಪತಿಗಳಿಗೆ ಸಂತಾನ ಭಾಗ್ಯದ ಸಿಹಿಸುದ್ದಿ ಸದ್ಯದಲ್ಲೇ ತೋರಿ ಬರಲಿದೆ. ಹೊಸ ವ್ಯಾಪಾರ, ವ್ಯವಹಾರಗಳಲ್ಲಿ ಲಾಭದಾಯಕ ಆದಾಯ, ಹೂಡಿಕೆ ಅಭಿವೃದ್ಧಿದಾಯಕವಾಗಲಿದೆ. ವಿಶೇಷ ಧನಯೋಗ, ಹೊಸ ವಾಹನ ಖರೀದಿ, ಭೂ ಖರೀದಿಗೆ ಸಕಾಲವಾಗಿದ್ದು ಸದುಪಯೋಗಿಸಿಕೊಳ್ಳಿ. ದೇಹಾರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯವಿದೆ. ಮಹಿಳೆಯರಿಗೆ ಅನಾವಶ್ಯಕ ಋಣಾತ್ಮಕ ಚಿಂತನೆ ತೋರಿಬರಲಿದೆ. ಶುಭ ವಾರಗಳು: ಕುಜ, ಗುರು, ಶನಿವಾರ.

ಕನ್ಯಾ
ಹಲವು ಬೇಡಿಕೆಗಳ ಪೂರೈಕೆಗಾಗಿ ಆಗಾಗ ಹಣದ ಮುಗ್ಗಟ್ಟು ತೋರಿ ಬಂದೀತು. ಆದರೂ ಸೋಲನ್ನರಿಯದ ಛಲವಾದಿಗಳಾದ ನಿಮಗೆ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ವಿಚಾರದಲ್ಲಿ ಹೊಂದಾಣಿಕೆ ಅಗತ್ಯವಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗಲಾಭ ತುಸು ಸಮಾಧಾನ ತಂದೀತು. ಮನೆ, ಯಂತ್ರ ರಿಪೇರಿಗಳಿಗಾಗಿ ಹಲವು ರೀತಿಯ ಖರ್ಚುಗಳೇ ತೋರಿಬರಲಿವೆ. ಸುಧಾರಿಸಿಕೊಳ್ಳಿ. ವಿದ್ಯಾರ್ಥಿಗಳು ಹೆಚ್ಚಿನ ಅಭಿವೃದ್ಧಿಗೆ ಪ್ರಯತ್ನಬಲ ಹೆಚ್ಚಿಸಬೇಕಾದೀತು. ವಾರಾಂತ್ಯದಲ್ಲಿ ಅನಿರೀಕ್ಷಿತ ಧನಾಗಮನದಿಂದ ಕಾರ್ಯಾನುಕೂಲಕ್ಕೆ ಸಾಧಕವಾದೀತು. ಶುಭ ವಾರಗಳು: ಶುಕ್ರ, ಬುಧ, ಕುಜವಾರ.

ತುಲಾ
ಧರ್ಮಶ್ರದ್ಧೆಯಿಂದ ಶುಭಮಂಗಲ ಕಾರ್ಯಗಳಿಗೆ ಅನುಕೂಲ ವಾದೀತು. ಅಧಿಕ ಲಾಭದ ಆಸೆ ಧನವ್ಯಯಕ್ಕೆ ಕಾರಣವಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ನ್ಯಾಯಾಲಯದ ಕೆಲಸ ಕಾರ್ಯಗಳು ಮನಸ್ಸಿಗೆ ನೋವು ತರಲಿವೆ. ವೃತ್ತಿರಂಗದಲ್ಲಿ ವಿವೇಚನೆಗೆ ಅವಕಾಶ ಕೂಡಿ ಸುಲಭದಲ್ಲಿ ಕಾರ್ಯ ಸಿದ್ಧಿಯಾಗಲಿದೆ. ವ್ಯಾಪಾರಿಗಳು ಹೊಂದಾಣಿಕೆ ಮಾಡಿಕೊಳ್ಳಬೇಕಾಗುವುದು. ಅವಿವಾಹಿತರ ಬಹುದಿನಗಳ ಆಸೆ-ಆಕಾಂಕ್ಷೆ ಫಲ ಪ್ರಾಪ್ತಿಯಾದೀತು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಂತಸ ತರಲಿದೆ. ಶುಭ ವಾರಗಳು: ಬುಧ, ಗುರು, ಶುಕ್ರವಾರ.

ವೃಶ್ಚಿಕ
ಮಂಗಲ ಕಾರ್ಯಗಳು ವಿಳಂಬವಾದಾವು. ಆರ್ಥಿಕವಾಗಿ ಆಯವ್ಯಯ ಸಮವೆನಿಸಿ ಸಂತೃಪ್ತಿ ಕಡಿಮೆಯಾದೀತು. ಅನಿರೀಕ್ಷಿತ ಕಾರ್ಯ ಸಾಧನೆ ಕೆಲವೊಮ್ಮೆ ಅಚ್ಚರಿ ತಂದೀತು. ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಪ್ರಗತಿಯ ದಾಂಗುಡಿಯಿಟ್ಟಾರು. ಹಿರಿಯರಿಂದ ಶುಭಕಾರ್ಯಗಳಿಗೆ ಚಿಂತನೆ ನಡೆಯಲಿದೆ. ಪತ್ನಿಯ ಕಿವಿಮಾತು ಮುನ್ನಡೆಗೆ ಸಾಧಕವಾಗಲಿದೆ. ಪ್ರತಿಯೊಂದರಲ್ಲೂ ಮಿತಿಯ ಬಳಕೆಯಿರಲಿ. ವಾರಾಂತ್ಯದಿಂದ ಹಂತ ಹಂತವಾಗಿ ಅಭಿವೃದ್ಧಿಯು ಗೋಚರಕ್ಕೆ ಬರುವುದರಿಂದ ಬಂದ ಅವಕಾಶಗಳನ್ನು ತಪ್ಪದೇ ಉಳಿಸಿಕೊಳ್ಳಬೇಕಾಗುವುದು. ಶುಭ ವಾರಗಳು: ಕುಜ, ಗುರು, ಭಾನುವಾರ.

ಧನು
ಕಾರ್ಯರಂಗದಲ್ಲಿ ಮಾತಿನ ತೂಕ ತಪ್ಪಿದರೆ ಮಾನಹಾನಿಯಾದೀತು. ಧನ ಸಂಗ್ರಹಕ್ಕೆ ಒದ್ದಾಡುವ ಪರಿಸ್ಥಿತಿ ತೋರಿಬರುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಶ್ರಮ ವಹಿಸಬೇಕಾದೀತು. ಹೆಚ್ಚಿನ ಸಂಚಾರ ದೇಹಾರೋಗ್ಯಕ್ಕೆ ಸಮಸ್ಯೆ ತಂದೀತು. ಗೃಹದಲ್ಲಿ ಭಿನ್ನಾಭಿಪ್ರಾಯದಿಂದ ಕಿರಿಕಿರಿ ತಂದರೂ ತಾಳ್ಮೆ, ಸಮಾಧಾನ ಸ್ಥಿತಿ ನಿಮಗೆ ಶ್ರೀರಕ್ಷೆಯಾದೀತು. ಮುಖ್ಯವಾಗಿ ಹಣಕಾಸಿನ ವಿಚಾರದಲ್ಲಿ ಕಾಳಜಿ ವಹಿಸುವುದು ಅಗತ್ಯವಿದೆ. ಆಸ್ತಿ ಖರೀದಿ, ವಾಹನ ಖರೀದಿಗಾಗಿ ದುಡುಕದಿರಿ. ಸರಕಾರಿ ಕೆಲಸ ಕಾರ್ಯಗಳು ಸ್ಥಗಿತಗೊಂಡು ಧನವ್ಯಯಕ್ಕೆ ಕಾರಣವಾಗಿ ಕ್ಲೇಶ ತಂದೀತು. ಶುಭ ವಾರಗಳು: ಚಂದ್ರ, ಕುಜ, ಗುರುವಾರ.

ಮಕರ
ವೃತ್ತಿರಂಗದಲ್ಲಿ ತೋರಿಬರುವ ಆಂತರಿಕ ಕಚ್ಚಾಟದಿಂದ ಮರ್ಯಾದೆಗೆ ಕುಂದು ತಂದೀತು. ಹಣ ನಾನಾ ರೀತಿಯಲ್ಲಿ ನೀರಿನಂತೆ ಹರಿದು ವ್ಯರ್ಥವೆನಿಸಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ಧಿ ಇದ್ದರೂ ತೆರಿಗೆ ಅಧಿಕಾರಿಗಳಿಂದ, ಸರಕಾರಿ ಇಲಾಖೆಯಿಂದಲೋ ನ್ಯಾಯಾಲ ಯ ದರ್ಶನದಿಂದಲೋ ಕ್ಲೇಶ ತಂದೀತು. ವೃತ್ತಿಯಲ್ಲಿ ಮುಂಭಡ್ತಿಯ ಸುಯೋಗವಿರುತ್ತದೆ. ಶುಭಕಾರ್ಯಗಳ ಚಿಂತನೆ ಕಾರ್ಯಗತವಾದೀತು. ಹಂತ ಹಂತವಾಗಿ ಮನೋಕಾಮನೆಗಳು ಪೂರ್ಣವಾಗುತ್ತವೆ. ಅವಿವಾಹಿತರಿಗೆ ವೈವಾಹಿಕ ಭಾಗ್ಯಕ್ಕೆ ಯೋಗ್ಯ ನೆಂಟಸ್ತಿಕೆ ಬರುತ್ತದೆ. ಶುಭ ವಾರಗಳು: ಬುಧ, ಶುಕ್ರ, ಶನಿವಾರ.

ಕುಂಭ
ಗೃಹೋಪಕರಣಗಳು ಗೃಹವನ್ನು ಅಲಂಕರಿಸಿಯಾವು. ವಿದ್ಯಾರ್ಥಿಗಳ ಅರ್ಹತೆಗೆ ಅವಕಾಶಗಳು ತಪ್ಪಿಹೋಗುವ ಸಂಭವ ತೋರಿಬಂದೀತು. ನಿರುದ್ಯೋಗಿಗಳು ಅಲೆದಾಟದಿಂದ ಸುಸ್ತು ಹೊಡೆದರೂ ಅನಿರೀಕ್ಷಿತ ರೂಪ ದಲ್ಲಿ ಉದ್ಯೋಗ ಲಾಭವನ್ನು ಪಡೆದಾರು. ದಂಪತಿಗಳಿಗೆ ಒಮ್ಮತದ ಅಭಿಪ್ರಾಯದ ಹೊಂದಾಣಿಕೆ ಅಗತ್ಯವಿದೆ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಭರವಸೆ ಉತ್ತಮವಲ್ಲ, ಕಾಳಜಿ ಇರಲಿ. ಮದುವೆ ಮುಂತಾದ ಮಂಗಲಕಾರ್ಯಗಳಲ್ಲಿ ಸಹಮತವಿರದು. ಧನಾದಾಯಕ್ಕೆ ಆಗಾಗ ವಿಳಂಬವಾದೀತು. ಪ್ರತೀ ದಿನವೂ ಆತಂಕದ ನೆರಳಲ್ಲೇ ಸವೆಸುವಂತಾದೀತು. ಶುಭ ವಾರಗಳು: ಸೋಮ, ಬುಧ, ಗುರುವಾರ.

ಮೀನ
ಹೆಚ್ಚಿನ ಲಾಭ ನಿರೀಕ್ಷೆ ನಿರಾಸೆಗೆ ಕಾರಣವಾದೀತು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ನೆಮ್ಮದಿ ತಂದೀತು. ಶಿಕ್ಷಕ ವರ್ಗದವರಿಗೆ ಸಂತಸದ ವಾತಾವರಣವಿದೆ. ಮನದನ್ನೆಯ ಮಾತು ಸಮಾಧಾನ ತಂದೀತು. ಆದಾಯದ ಹೊಸ ಮಾರ್ಗಗಳು ಗೋಚರಕ್ಕೆ ಬಂದಾವು. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣದ ಸಿದ್ಧತೆ ತಂದು ಕೊಡಲಿದೆ. ಸಕಾಲಿಕ ಧನಾದಾಯ ಎಲ್ಲ ರೀತಿಯ ಕಾರ್ಯಾನುಕೂಲಕ್ಕೆ ಸಾಧಕ ವಾದೀತು. ಶುಭ ವಾರಗಳು: ಮಂಗಳ, ಗುರು, ಭಾನುವಾರ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *