ವಾರ ಭವಿಷ್ಯ (29 – 5 ಜೂನ್ 2017)

Posted on: May 29, 2017
ಮೇಷ
ಸಂಗಾತಿ ಹೇಳಿದ್ದೆಲ್ಲ ಸರ್ವಸ್ವ ಎಂದು ತಿಳಿಯುವುದು ಮೂರ್ಖತನ ಎಂಬುದು ನಿಮಗೆ ಕ್ರಮೇಣ ಅರಿವಿಗೆ ಬರಲಿದೆ. ಜವಾಬ್ದಾರಿ ನಿಭಾಯಿಸುವ ಭರದಲ್ಲಿ ಸಾಮಾಜಿಕ ಜೀವನ, ಬಂಧುಗಳನ್ನು ಮರೆಯಬೇಡಿ. ಏನೇ ಆಗ್ಲಿ ಬಿಡಿ, ಅದೃಷ್ಟ ಮಾತ್ರ ನಿಮ್ಮ ಕೈಬಿಡಲ್ಲ.

 

ವೃಷಭ
ಇತರರು ಕೆಲಸಕ್ಕೆ ಬಾರದವರು ಎಂಬ ಮನೋಭಾವ ನಿಮಗೆ ಒಳ್ಳೆಯದಲ್ಲ. ಗದರಿ ಯಾರಾದರೂ ಹೇಳಿದರೆ, ಅದರ ಹಿಂದೆ ಕಳಕಳಿ ಇರುತ್ತದೆ ಎಂದು ತಿಳಿಯುವಷ್ಟು ಪ್ರಬುದ್ಧತೆ ನಿಮ್ಮಲ್ಲಿರಲಿ.

ಮಿಥುನ
ಹೊಸ ಕಲಿಕೆಯೆಂಬುದು ಯಾರಪ್ಪನ ಸ್ವತ್ತಲ್ಲ. ಪ್ರಯತ್ನಪಟ್ಟರೆ ಎಲ್ಲವೂ ಹಿಡಿತಕ್ಕೆ ಬರುತ್ತದೆ. ಕೆಲವರು ನಿಮ್ಮ ಕೆಲಸ ಕೆಡಿಸಲು ಹೊಂಚುಹಾಕುತ್ತಿರುತ್ತಾರೆ, ಎಚ್ಚರದಿಂದಿರಿ. ಅಂತಿಮವಾಗಿ ಗೆಲುವು ಮಾತ್ರ ನಿಮ್ಮದೆ. ಮೀನ ಮಾಡಿದ ಖರ್ಚುವೆಚ್ಚದ ಲೆಕ್ಕ ಅಚ್ಚುಕಟ್ಟಾಗಿ ನೀಡಿ.
ಕರ್ಕಾಟಕ
ಆಗಸಕ್ಕೆ ಹಾರಿಬಿಟ್ಟ ಗಾಳಿಪಟದಂತೆ ನಿಮ್ಮ ಜೀವನ ಆಗಬಾರದು. ಸೂತ್ರವನ್ನು ನೀವೇ ಹರಿದುಕೊಳ್ಳಿ, ಗಾಳಿಪಟ ಹೋದರೆ ಹೋಗಲಿ. ಮನೋಭಾವ ಬದಲಿಸಿಕೊಳ್ಳಿ, ಶಿಸ್ತನ್ನು ರೂಢಿಸಿಕೊಳ್ಳಿ, ಯೋಜನೆ ರೂಪಿಸಿಕೊಳ್ಳಿ, ಅಂದುಕೊಂಡಂತೆ ಎಲ್ಲ ಕೆಲಸಗಳನ್ನು ನಿಭಾಯಿಸಿ.
ಸಿಂಹ
ಸಣ್ಣ ಅಲೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಬರುವ ಸವಾಲುಗಳು ಕಷ್ಟವಾದರೂ ಇಷ್ಟಪಟ್ಟು ಎದುರಿಸಲು ಸನ್ನದ್ಧಗೊಳ್ಳಿ. ಎಲ್ಲ ಸೋಲು ಗೆಲುವುಗಳಿಗೆ ನೀವೇ ಹಕ್ಕುದಾರರು. ನಿಮ್ಮ ಕೆಲಸ ನೀವು ಅಚ್ಚುಕಟ್ಟಾಗಿ ಮಾಡುತ್ತಿರುವಾಗ ಸಲ್ಲದ ವಿಷಯಗಳಿಗೆ ತಲೆಕೆಡಿಸಿಕೊಳ್ಳಬೇಡಿ
ಕನ್ಯಾ
ಆಳವಾಗಿ ಯೋಚಿಸುವುದನ್ನು ಬಿಡಿ. ಮತ್ತು ಅಸಾಧ್ಯವಾದ ಪರಿಸ್ಥಿತಿಗಳ ಬಗ್ಗೆ ಯೋಚಿಸುವುದನ್ನು ತಪ್ಪಿಸಿಕೊಳ್ಳಿ. ಇಲ್ಲದಿದ್ದಲ್ಲಿ ಅದು ನಿಮಗೆ ಬಹಳಷ್ಟು ಒತ್ತಡ ತರಬಹುದು ಮತ್ತು ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕಷ್ಟಗಳನ್ನು ಎದುರಿಸಬಹುದು.
ತುಲಾ
ನೀವು ಹೊಸ ವ್ಯಾಪಾರ ಪಾಲುದಾರರ ಜೊತೆಗೂ ಸಹಯೋಗ ಹೊಂದಬಹುದು. ಪ್ರೀತಿ ಜೀವನ ಆಗಸ್ಟ್ ನಂತರ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಅದರ ಮೊದಲು ಕಟ್ಟೊಲುಮೆಯ ಕ್ಷಣಗಳನ್ನು ನಿರೀಕ್ಷಿಸಬೇಡಿ.
ವೃಶ್ಚಿಕ
ನಿಮ್ಮ ಸ್ಪರ್ಧಿಗಳಿಗೆ ನಿಮ್ಮನ್ನು ಎದುರಿಸುವುದು ಕಷ್ಟವಾದೀತು. ಅತಿಯಾದ ಮಾನಸಿಕ ಸಮಸ್ಯೆಯನ್ನು ದೂರವಿಡಿ. ಸಹೋದ್ಯೋಗಿಗಳ ಜತೆ ನಿಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಳ್ಳಬೇಡಿ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಮೂಲಕ, ನೀವು ಕೆಲವು ಪ್ರಮುಖ ಜನರನ್ನು ಭೇಟಿಯಾಗುತ್ತೀರಿ.
ಧನು
ಕಠಿಣ ಪರಿಶ್ರಮದಿಂದ ನೀವು ಏನನ್ನಾದರೂ ಪ್ರಾರಂಭಿಸಿದರೆ, ಇದು ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ. ನೀವು ಪುರಸ್ಕಾರವನ್ನೂ ಪಡೆಯುತ್ತೀರಿ. ಧನಾತ್ಮಕ ಚಿಂತನೆ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಇತರ ವ್ಯಕ್ತಿಗಳು ನಿಮ್ಮ ಕೆಲಸದಿಂದ ಮೆಚ್ಚುತ್ತಾರೆ.
ಮಕರ
ಹೊಸ ತಂತ್ರ ಅಥವಾ ಕೌಶಲವನ್ನು ಕಲಿಯಲು ಪ್ರಯತ್ನಿಸುತ್ತೀರಿ. ಇದರಿಂದ ಆದಾಯದ ಹೊಸ ಮೂಲವನ್ನು ಪಡೆಯುತ್ತೀರಿ. ನೌಕರರು ಸಹೋದ್ಯೋಗಿಗಳ ಜತೆ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಹೊಸ ಉದ್ಯೋಗ ಪಡೆಯುವುದಕ್ಕಿಂತ ಮೊದಲು ಪ್ರಸ್ತುತ ಉದ್ಯೋಗಕ್ಕೆ ರಾಜೀನಾಮೆ ನೀಡಬೇಡಿ.
ಕುಂಭ
ನಿತ್ಯ ಜೀವನದಲ್ಲಿ ತುಂಬಾ ಬ್ಯುಸಿಯಾಗಿದ್ದರೆ, ನಿಮ್ಮ ಜೀವನ ಸಂಗಾತಿಗೆ ಹೆಚ್ಚು ಸಮಯ ನೀಡಲಾಗದು. ಇವು ನಿಮ್ಮ ಸಂಬಂಧ ಹಳಸಲು ಕಾರಣವಾಗಬಹುದು. ಸಂಗಾತಿಯನ್ನು ಹೊರಗೆ ಕರೆದುಕೊಂಡು ಹೋಗಿ ಮತ್ತು ಒಂದು ಪ್ರವಾಸವನ್ನು ಯೋಜಿಸಿ.
ಮೀನ
. ಉದ್ಯೋಗ ಹುಡುಕುತ್ತಿರುವವರಿಗೆ ಯಶಸ್ಸಿದೆ. ವೃತ್ತಿ ಜೀವನದಲ್ಲೂ ಉತ್ತಮ ಆರಂಭವಿದೆ. ಕಾನೂನು, ಔಷಧ, ವಾಣಿಜ್ಯ ಇತ್ಯಾದಿಗೆ ಸಂಬಂಧಿಸಿದ ವ್ಯಕ್ತಿಗಳು ಧನಾತ್ಮಕ ಸಮಯವನ್ನು ಪಡೆಯುತ್ತಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *