ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ವಾರ ಭವಿಷ್ಯ (12 – 19 ಜೂನ್ 2017)

Posted on: June 12, 2017
ಮೇಷ
ಸಂಗಾತಿ ಹೇಳಿದ್ದೆಲ್ಲ ಸರ್ವಸ್ವ ಎಂದು ತಿಳಿಯುವುದು ಮೂರ್ಖತನ ಎಂಬುದು ನಿಮಗೆ ಕ್ರಮೇಣ ಅರಿವಿಗೆ ಬರಲಿದೆ. ಜವಾಬ್ದಾರಿ ನಿಭಾಯಿಸುವ ಭರದಲ್ಲಿ ಸಾಮಾಜಿಕ ಜೀವನ, ಬಂಧುಗಳನ್ನು ಮರೆಯಬೇಡಿ. ಏನೇ ಆಗ್ಲಿ ಬಿಡಿ, ಅದೃಷ್ಟ ಮಾತ್ರ ನಿಮ್ಮ ಕೈಬಿಡಲ್ಲ.
ವೃಷಭ
ನಾನೊಬ್ಬನೇ ದುಡಿಯುತ್ತಿದ್ದೇನೆ, ಇತರರು ಕೆಲಸಕ್ಕೆ ಬಾರದವರು ಎಂಬ ಮನೋಭಾವ ನಿಮಗೆ ಒಳ್ಳೆಯದಲ್ಲ. ಗದರಿ ಯಾರಾದರೂ ಹೇಳಿದರೆ, ಅದರ ಹಿಂದೆ ಕಳಕಳಿ ಇರುತ್ತದೆ ಎಂದು ತಿಳಿಯುವಷ್ಟು ಪ್ರಬುದ್ಧತೆ ನಿಮ್ಮಲ್ಲಿರಲಿ.
ಮಿಥುನ
ಹೊಸ ಕಲಿಕೆಯೆಂಬುದು ಯಾರಪ್ಪನ ಸ್ವತ್ತಲ್ಲ. ಪ್ರಯತ್ನಪಟ್ಟರೆ ಎಲ್ಲವೂ ಹಿಡಿತಕ್ಕೆ ಬರುತ್ತದೆ. ಕೆಲವರು ನಿಮ್ಮ ಕೆಲಸ ಕೆಡಿಸಲು ಹೊಂಚುಹಾಕುತ್ತಿರುತ್ತಾರೆ, ಎಚ್ಚರದಿಂದಿರಿ. ಅಂತಿಮವಾಗಿ ಗೆಲುವು ಮಾತ್ರ ನಿಮ್ಮದೆ
ಕರ್ಕಾಟಕ
ಗಾಳಿಪಟದಂತೆ ನಿಮ್ಮ ಜೀವನ ಆಗಬಾರದು. ಸೂತ್ರವನ್ನು ನೀವೇ ಹರಿದುಕೊಳ್ಳಿ, ಗಾಳಿಪಟ ಹೋದರೆ ಹೋಗಲಿ. ಮನೋಭಾವ ಬದಲಿಸಿಕೊಳ್ಳಿ, ಶಿಸ್ತನ್ನು ರೂಢಿಸಿಕೊಳ್ಳಿ, ಯೋಜನೆ ರೂಪಿಸಿಕೊಳ್ಳಿ, ಅಂದುಕೊಂಡಂತೆ ಎಲ್ಲ ಕೆಲಸಗಳನ್ನು ನಿಭಾಯಿಸಿ.
ಸಿಂಹ
ಅಡೆತಡೆಗಳನ್ನು ಹಿಮ್ಮೆಟ್ಟಿ ಮುನ್ನುಗ್ಗಿರುತ್ತೀರಿ. ಅಡ್ಡಗಾಲು ಹಾಕುವವರಿಗೆ, ಹೀಯಾಳಿಸಿ ಕೆಳಗೆ ಬೀಳಿಸುವವರಿಗೆ ಕಡಿಮೆಯಿರುವುದಿಲ್ಲ. ಆದರೆ, ನಿಮ್ಮ ಗುರಿ ಎಲ್ಲಿದೆ ಎಂಬುದು ಗಮನದಲ್ಲಿರಲಿ.
ಕನ್ಯಾ
ಎಲ್ಲ ಸೋಲು ಗೆಲುವುಗಳಿಗೆ ನೀವೇ ಹಕ್ಕುದಾರರು. ನಿಮ್ಮ ಕೆಲಸ ನೀವು ಅಚ್ಚುಕಟ್ಟಾಗಿ ಮಾಡುತ್ತಿರುವಾಗ ಸಲ್ಲದ ವಿಷಯಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಮಕರ ಅತಿಯಾದ ವೇಗ ಅಪಾಯಕ್ಕೆ ಆಹ್ವಾನ ಒಡ್ಡಿದಂತೆ ಎಂಬುದು ಹಳಸಲು ಮಾತು.
ತುಲಾ
ಸುನಾಮಿ ಬಂದಷ್ಟೇ ವೇಗವಾಗಿ ಮರೆಗೆ ಸರಿದುಬಿಡುತ್ತವೆ. ಇಲ್ಲದಿದ್ದರೆ ಸಣ್ಣ ಅಲೆಗಳು ಬಂದು ಅಪ್ಪಳಿಸುವಂತೆ ಬಂದು ಅಪ್ಪಳಿಸುತ್ತಲೇ ಇರುತ್ತವೆ. ಸುನಾಮಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಿ, ಸಣ್ಣ ಅಲೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.
ವೃಶ್ಚಿಕ
ಮನದಲ್ಲಿ ಹುದುಗಿರುವ ಹಿಂಜರಿತ, ಅಸಮಾಧಾನ, ಸಿಟ್ಟು ಸೆಡುವು, ಅನಿಶ್ಚಿತತೆ, ಅಸಹಾಯಕತೆಗಳನ್ನು ಬಟ್ಟೆ ಕಳಚಿದ ಹಾಗೆ ಕಳಚಿ ಬಿಸಾಕಿ. ನಂತರ ನೋಡಿ ನೀವು ಹೊಸ ಮನುಷ್ಯರಾಗಿರುತ್ತೀರಿ.
ಧನು
ಕೇಳಿದ್ದೆಲ್ಲ ಅನಾಯಾಸವಾಗಿ ಸಿಗುತ್ತಿರುವಾಗ ಅದನ್ನು ಪಡೆದುಕೊಳ್ಳುವ ಮತ್ತು ಅನುಭವಿಸುವ ಅವಕಾಶವನ್ನು ನೀವಾಗಿಯೇ ಕಳೆದುಕೊಳ್ಳುತ್ತೀರಾದರೆ ನಿಮಗಿಂದ ದುರಾದೃಷ್ಟವಂತ ಮತ್ತೊಬ್ಬರಿಲ್ಲ. ಎಲ್ಲರನ್ನೂ ಅವಕಾಶಗಳು ಹುಡುಕಿ ಬರುವುದಿಲ್ಲ.
ಮಕರ
ಹೊಸದು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಆದರೆ ಕನಸು ಕಾಣಲು ಏನು ಕಷ್ಟ? ಕನಸು ಕಾಣುವುದಕ್ಕೇ ನೀವು ಹಿಂದೇಟು ಹಾಕಿದರೆ ಹೊಸ ಕನಸುಗಳು ಹುಟ್ಟುವುದಾದರೂ ಹೇಗೆ? ನಿಮಗೆ ನೀವೇ ಪ್ರಶ್ನೆಯಾಗಿರಿ, ಉತ್ತರವನ್ನು ಕಂಡುಕೊಳ್ಳಿ.
ಕುಂಭ
ಅದೇತಾನೆ ಅಭಿಷೇಕ ಮಾಡಿ ತಯಾರಿಸಿದ ಪಂಚಾಮೃತಕ್ಕೆ ಸಮಾನ. ಮನಸೋಇಚ್ಛೆ ಸವಿಯಿರಿ. ತುಲಾ ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬ ಮಾತಿದೆ.
ಮೀನ
ಸ್ವರ್ಗೀಯವಾದ ಸುಖವೊಂದು ಮೈಯನ್ನು ಅಮರಿಕೊಂಡಿರುತ್ತದೆ. ಅಂಥದೊಂದು ಅನುಭವಕ್ಕೆ ಮೈಯೊಡ್ಡಿಕೊಳ್ಳಿ. ಅಂಥದೊಂದು ಅನುಭೂತಿ ನಿಮ್ಮನ್ನು ಬೆನ್ನತ್ತಿ ಬರದಿದ್ದರೆ, ನೀವೇ ಅದನ್ನು ಬೆನ್ನತ್ತಿ ಹೋಗಿ. ಅಡ್ಡ ಬಂದ ಸವಾಲುಗಳನ್ನೆಲ್ಲ ಅಷ್ಟೇ ಆಸಕ್ತಿಯಿಂದ ಎದುರಿಸಿ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *