ಬ್ರೇಕಿಂಗ್ ನ್ಯೂಸ್
ಮಳೆ ಹಾನಿ ನಿಖರ ಮಾಹಿತಿ ಒದಗಿಸಲು ಪಿ.ಐ.ಶ್ರೀವಿದ್ಯಾ ಸೂಚನೆ , ಜುಲೈ 19 ರಂದು ಮಡಿಕೇರಿಗೆ ಮುಖ್ಯಮಂತ್ರಿ ಭೇಟಿ ಸಾ.ರಾ.ಮಹೇಶ್ , ಜು.19 ರಂದು ಕೊಡಗು ಜಿಲ್ಲೆಗೆ ಕುಮಾರ ಸ್ವಾಮಿ – ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂಕೇತ್ , ದಿನೇಶ್ ಗುಂಡುರಾವ್‍ಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಅಭಿನಂದನೆ , ಕೊಡಗಿನ ಧ್ವನಿಯಾದ ಫತ್ತಾಹ್ ಸಾಮಾಜಿಕ ಕಳಕಳಿ ಶ್ಲಾಘನಾರ್ಹ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮೆಚ್ಚುಗೆ , ಸುಂದರನಗರ ಬಳಿ ಪಂಚಾಯಿತಿ ವತಿಯಿಂದ ಚರಂಡಿ ಸ್ವಚ್ಚತಾ ಕಾರ್ಯಕ್ರಮ , ಸಧ್ಯದಲ್ಲಿಯೇ ಕೊಡಗಿಗೆ ಭೇಟಿ ಕೊಡವ ಸಾಹಿತ್ಯ ಅಕಾಡೆಮಿ ನಿಯೋಗಕ್ಕೆ ಸಿಎಂ ಭರವಸೆ , ಶಿಕ್ಷಕಿ ಲಾಸ್ಯ ತೇಜಸ್ವಿ ಮರಣ ಪ್ರಕರಣ – ಸಂಘ ಸಂಸ್ಥೆಗಳಿಂದ ಪ್ರತಿಭಟನೆ , ಪ್ರವಾಸಿ ಸ್ಥಳಗಳಿಗೆ ಬಸ್ ಸೌಲಭ್ಯ ಕಲ್ಪಿಸಿ ಸುನಿಲ್ ಸುಬ್ರಮಣಿ , ಮೈಸೂರು-ತಲಚೇರಿ ರೈಲ್ವೆ ಮಾರ್ಗ ಸ್ಥಗಿತಕ್ಕೆ ಸುನಿಲ್ ಸುಬ್ರಮಣಿ ಒತ್ತಾಯ ,

ಕೊಡಗಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರು ಜನ ಪೋಲೀಸರ ಅತಿಥಿಯಾಗಿದ್ದರೆ

Posted on: July 30, 2017

ganja_dis_82667

ಮಡಿಕೇರಿ:  ಕೊಡಗಿನ ಕೆಲವು ಕಾಲೇಜು, ಸಾರ್ವಜನಿಕ ಸ್ಥಳದಲ್ಲಿ ಗಾಂಜಾದ ಕಮಟು ವಾಸನೆ ಬರತೊಡಗಿತ್ತು. ಇಲ್ಲಿಗೆ ಹೇಗೆ ಗಾಂಜಾ ಸರಬರಾಜಾಗುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿತ್ತು. ಇದೀಗ ಪೊಲೀಸರು ಆರು ಜನರನ್ನು ಬಂಧಿಸುವ ಮೂಲಕ ಗಾಂಜಾ ಮಾರಾಟವನ್ನು ವಿಫಲಗೊಳಿಸಲಾಗಿದೆ.

ಕೊಡಗಿಗೆ ಹೊರಗಿನಿಂದ ಗಾಂಜಾ ತಂದು ಕೆಲವರು ಸರಬರಾಜು ಮಾಡುತ್ತಿದ್ದು, ಅಂತಹವರ ಪೈಕಿ ಆರು ಮಂದಿ ಸೆರೆ ಸಿಕ್ಕಿದ್ದು, ಅವರಿಂದ 5 ಲಕ್ಷ ರೂ. ಮೌಲ್ಯದ 14 ಕೆ.ಜಿ. ಗಾಂಜಾ ಹಾಗೂ ಪ್ರಕರಣಕ್ಕೆ ಬಳಸಿದ ಮಾರುತಿ (800) ಕಾರನ್ನು ವಶಪಡಿಸಿಕೊಂಡಿದ್ದಾರೆ.

ಹುಣಸೂರಿನ ಮೀನು ವ್ಯಾಪಾರಿ ಹೆಚ್.ಎಸ್.ಇಸ್ಮಾಯಿಲ್ ಶರೀಫ್(34), ಶಿವಜ್ಯೋತಿ ನಗರದ ಚಾಲಕ ಕೆ.ಮಹೇಶ್(30), ಕೊಯಂಬತ್ತೂರು ಕಾಲೋನಿಯ ಕೃಷಿಕ ಕೆ. ರಾಜೇಗೌಡ(61), ಭೀಮನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ಸೋಮೇಶ್ (20), ಸುಂಟಿಕೊಪ್ಪದ ವ್ಯಾಪಾರಿ ಇ.ಇರ್ಫಾನ್(27), ಪಿರಿಯಾಪಟ್ಟಣದ ಹಾರ್ನಳ್ಳಿ ಗ್ರಾಮದ ಕೃಷಿಕ ಎನ್.ನಾಸೀರ್ ಶರೀಫ್(23) ಬಂಧಿತರಾಗಿದ್ದಾರೆ.

ಈ ಆರೋಪಿಗಳು ತಮ್ಮ ಮಾರುತಿ 800 ಕಾರಿನಲ್ಲಿ ಸುಮಾರು 14 ಕೆಜಿಯಷ್ಟು ಗಾಂಜಾವನ್ನು ತಂದು ಕುಶಾಲನಗರ ಪಟ್ಟಣದ ಸಂತೆ ಮಾಳದ ನಿರ್ಜನ ಪ್ರದೇಶದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಕೊಡಗು ಪೊಲೀಸ್ ಇಲಾಖೆಗೆ ದೊರೆತ ಖಚಿತ ಮಾಹಿತಿಯನ್ವಯ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಸಿ. ಸಂಪತ್ ಕುಮಾರ್ ಅವರ ನೇತೃತ್ವದ ತಂಡ ಮಾರುತಿ 800 ವಾಹನವನ್ನು ಸುತ್ತುವರೆದ ಸಂದರ್ಭ ಆರು ಮಂದಿ ಆರೋಪಿಗಳು ಪರಾರಿಯಾಗಲು ಯತ್ನಿಸಿದರಾದರೂ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಳಿಯಿದ್ದ ತಲಾ ಎರಡು ಕೆ.ಜಿ. ತೂಕದ ಏಳು ಪ್ಯಾಕೇಟ್ ಗಾಂಜಾ ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರ ಮೊತ್ತ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಗಾಂಜಾವನ್ನು ಆಂಧ್ರ್ರ್ರಪ್ರದೇಶದ ಹಿಂದೂಪುರ ಎಂಬಲ್ಲಿಂದ ತಂದು ಕೊಡಗಿನಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಎಸ್ಪಿ ರಾಜೇಂದ್ರಪ್ರಸಾದ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕುಶಾಲನಗರ ಠಾಣಾಧಿಕಾರಿ ಪಿ. ಜಗದೀಶ್, ಕುಶಾಲನಗರ ಅಪರಾಧ ಪತ್ತೆದಳದ ಸಿಬ್ಬಂದಿ ಎಎಸ್ಐ ಗೋಪಾಲ, ಪಿ.ವಿ. ಸುರೇಶ್, ಸುಧೀಶ್ ಕುಮಾರ್, ಮುಸ್ತಫ, ಉದಯ ಕುಮಾರ್, ವಿ. ಪ್ರಕಾಶ್, ಸಂಪತ್ ರೈ, ಚಾಲಕ ಪ್ರವೀಣ್, ಕುಶಾಲನಗರ ಠಾಣೆಯ ಎಎಸ್ಐ ಗೀತಾ, ಸಿಬ್ಬಂದಿಗಳಾದ ಉಮೇಶ್, ಅನಂತ ಕುಮಾರ್ ಹಾಗೂ ನಿಶಾ ಪಾಲ್ಗೊಂಡಿದ್ದು, ಈ ತಂಡಕ್ಕೆ 10 ಸಾವಿರ ರೂ. ನಗದು ಬಹುಮಾನವನ್ನು ಘೋಷಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಗಾಂಜಾ ಮಾರಾಟ ಜಾಲ ಮಿತಿ ಮೀರಿದ್ದು, ಯುವ ಸಮೂಹ ಹಾದಿ ತಪ್ಪುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದವು. ಇದರಿಂದ ಪೊಲೀಸ್ ಇಲಾಖೆ ಗಾಂಜಾ ದಂಧೆ ವಿರುದ್ಧ ತೀವ್ರ ನಿಗಾ ವಹಿಸಿದ್ದು, ಕಾರ್ಯಾಚರಣೆಯನ್ನು ಚುರುಕುಗೊಳಿತ್ತು.

ಜಿಲ್ಲೆಯ ಸುಮಾರು 30 ಕಾಲೆೇಜುಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಇರಿಸಲಾಗಿದ್ದು, ಅಕ್ರಮ ಗಾಂಜಾ ದಂಧೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಾಹಿತಿಯನ್ನು ನೀಡಬಹುದಾಗಿದೆ. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದೆಂದು ಎಸ್ಪಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *