ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ವಾರ ಭವಿಷ್ಯ (31-7-2017 8-8-2017)

Posted on: July 31, 2017
ಮೇಷ
ಸ್ವಯಂ ವ್ಯಾಪಾರ, ವ್ಯವಹಾರಗಳು ತೂಗುಯ್ನಾಲೆಯಲ್ಲಿರುವುವು. ಅಧಿಕವಾದ ಖರ್ಚುವೆಚ್ಚಗಳಲ್ಲಿ ಬಲವಾದ ಹಿಡಿತವಿರಲಿ. ಶುಭಮಂಗಲ ಕಾರ್ಯಾರ್ಥ ಸಂಚಾರ ಒದಗಿಬರುತ್ತದೆ. ವೈವಾಹಿಕ ವಿಚಾರಗಳಲ್ಲಿ ಹೆಚ್ಚಿನ ಪ್ರಯತ್ನ ತೋರಿಸಬೇಕಾಗುತ್ತದೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಹಿನ್ನಡೆಯನ್ನು ಅನುಭವಿಸುವಂತಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕರ್ತವ್ಯವನ್ನು ಮರೆಯುವಂತಿಲ್ಲ.ದೂರದ ಬಂಧುಗಳಿಂದ ಶುಭವಾರ್ತೆಯನ್ನು ಕೇಳುವಿರಿ. ಆರೋಗ್ಯ ಭಾಗ್ಯವನ್ನು ಕಾಪಾಡಿ ಕೊಳ್ಳಿರಿ. ಶುಭ ವಾರ: ಚಂದ್ರ, ಕುಜ, ಗುರುವಾರ.

ವೃಷಭ
ಉದ್ಯೋಗಿಗಳಿಗೆ ಉದ್ಯಮದಲ್ಲಿ ಉತ್ತಮ ಸದವಕಾಶಗಳು ಒದಗಿಬಂದಾವು. ಸಾಮಾಜಿಕ ರಂಗದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ವೈಯಕ್ತಿಕ ಆರೋಗ್ಯದಲ್ಲಿ ನಿರ್ಲಕ್ಷ್ಯ ಮಾಡದಿರಿ. ವಿದ್ಯಾರ್ಥಿ ವರ್ಗಕ್ಕೆ ವಿದ್ಯಾರಂಗದಲ್ಲಿ ನಿರೀಕ್ಷಿತ ಅಭಿವೃದ್ಧಿ ಗೋಚರಕ್ಕೆ ಬರುತ್ತದೆ. ವೈವಾಹಿಕ ಮಾತುಕತೆಗಳು ಕಂಕಣಭಾಗ್ಯವನ್ನು ಒದಗಿಸಿ ಕೊಡಲಿದೆ. ದೂರ ಸಂಚಾರ ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು. ಆರ್ಥಿಕ ಸಂಗ್ರಹ ನಾನಾ ರೀತಿಯಲ್ಲಿ ಉಪಯುಕ್ತವಾದೀತು. ವಾರಾಂತ್ಯದಲ್ಲಿ ಶ್ರೀದೇವರ ದರ್ಶನ ಭಾಗ್ಯವಿದೆ. ಶುಭ ವಾರ: ಶುಕ್ರ, ಶನಿ, ಚಂದ್ರವಾರ.

ಮಿಥುನ
ವ್ಯಾಪಾರ, ವ್ಯವಹಾರಗಳ ಮುನ್ನಡೆಗಾಗಿ ಪ್ರಯಾಣದ ಮಾತು ಕತೆಯ ಸಾಧ್ಯತೆ ಇರುತ್ತದೆ. ಎಳೆಯರ ಕುರಿತು ಎಚ್ಚರದಿಂದಿರಿ ಮತ್ತು ಸೂಕ್ತ ಮಾರ್ಗದರ್ಶನ ಮಾಡಿರಿ. ಸಾಂಸಾರಿಕವಾಗಿ ತುಸು ನೆಮ್ಮದಿಯ ದಿನಗಳಾದಾವು. ಶೀತ ಬಾಧೆ, ಕಫ‌ ಇತ್ಯಾದಿಗಳು ಅನಾರೋಗ್ಯದ ಅನುಭವ ತಂದೀತು. ವಿದೇಶಿ ವ್ಯವಹಾರಗಳು ಲಾಭಕರವಾದಾವು. ಕೋರ್ಟು, ಕಚೇರಿ, ಕೆಲಸಕಾರ್ಯಗಳು ಹಂತಹಂತವಾಗಿ ಮುನ್ನಡೆ ತರುತ್ತದೆ. ವಾರಾಂತ್ಯ ಅನಿರೀಕ್ಷಿತ ರೂಪದಲ್ಲಿ ದಾಯಾದಿಗಳ ಆಗಮನ ಮನಸ್ಸಿಗೆ ಕಿರಿಕಿರಿ ತಂದೀತು. ಶುಭ ವಾರ: ಬುಧ, ಗುರು, ಭಾನುವಾರ.

ಕಟಕ
ಸ್ವಂತ ವಿದ್ಯಮಾನಗಳಲ್ಲಿ ಮತ್ತು ಕೌಟುಂಬಿಕ ವಿಚಾರಗಳಲ್ಲಿ ಒತ್ತಡ ಗಳು ದೂರವಾಗಿ ನೆಮ್ಮದಿ ತೋರಿಬಂದೀತು. ಮಂಗಲಕಾರ್ಯಗಳ ಬಗ್ಗೆ ನಿರ್ಧಾರಗಳು ಫ‌ಲ ನೀಡುತ್ತವೆ. ಉದ್ಯೋಗ, ವ್ಯವಹಾರಗಳಲ್ಲಿನ ತೊಂದರೆ ಗಳಿಂದಾಗಿ ಮಾನಸಿಕ ನೆಮ್ಮದಿ ಕೆಡುವಂತಾದೀತು. ಹಣದ ಲೆಕ್ಕಾಚಾರ ಸರಿಯಾಗಿ ಇಟ್ಟುಕೊಳ್ಳಿರಿ. ದೂರ ಪ್ರಯಾಣದ ಇಚ್ಛೆಗಳು ಅಡೆತಡೆಗಳಿಂದ ನಿಲ್ಲಲಿವೆ. ಸಾಂಸಾರಿಕವಾಗಿ ಸ್ತ್ರೀಯರ ಆರೋಗ್ಯ ಕೆಡಬಹುದು. ಕಾಳಜಿ ಇರಲಿ. ವಿದ್ಯಾರ್ಥಿಗಳಿಗೆ ಪರಿಶ್ರಮದ ಬೆಲೆ ತಿಳಿಯುವಂತಾದೀತು. ವಾರಾಂತ್ಯದಲ್ಲಿ ಆನಂದವಿದೆ. ಶುಭ ವಾರ: ಚಂದ್ರ, ಕುಜ, ಗುರುವಾರ.

ಸಿಂಹ
ಉದ್ಯೋಗ, ವ್ಯಾಪಾರ, ವ್ಯವಹಾರಗಳಲ್ಲಿ ಉಲ್ಲಾಸಕರ ವಾತಾವರಣ ನೆಮ್ಮದಿ ತಂದೀತು. ಆಸ್ತಿ ವಿಚಾರ, ಕ್ರಯ-ವಿಕ್ರಯಗಳಲ್ಲಿ ಲಾಭವಿರುತ್ತದೆ. ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಅಥವಾ ಹೊಸ ಪ್ರಾರಂಭದ ಭರವಸೆಯು ಈ ವಾರ ಕಾಣಿಸಲಿದೆ. ಸದುಪಯೋಗಿಸಿಕೊಳ್ಳಿರಿ. ಸಾಮಾಜಿಕವಾಗಿ ನಿಮ್ಮ ಪ್ರತಿಭೆ ಗುರುತಿಸಲ್ಪಡುವುದು ಹಾಗೇ ಸೂಕ್ತ ಸ್ಥಾನಮಾನ, ಗೌರವಕ್ಕೆ ಪಾತ್ರರಾಗುವಿರಿ. ಹದಿಹರೆ ಯದವರಿಗೆ ವಿವಾಹ ಭಾಗ್ಯದ ಸೂಚನೆಗಳು ಕಾಣಿಸಬಹುದು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಲಭ್ಯವಿದೆ. ಶುಭ ವಾರ: ಭಾನು, ಶುಕ್ರ, ಕುಜವಾರ.

ಕನ್ಯಾ
ಚಿಂತಿತ ವ್ಯವಹಾರಗಳು ಹಂತ ಹಂತವಾಗಿ ಬಲಗೊಳ್ಳಲಿವೆ. ಅದೃಷ್ಟ ಬಲದಿಂದ ಹೂಡಿಕೆಗಳು ಲಾಭದಾಯಕವಾದಾವು. ಸಹೋದ್ಯೋಗಿ ಹಾಗೂ ಮಿತ್ರರೊಳಗಿನ ಮಾತುಕತೆಗಳಲ್ಲಿ ಎಚ್ಚರ ವಹಿಸಬೇಕು. ತಪ್ಪು ತಿಳುವಳಿಕೆಗೆ ಕಾರಣರಾಗದಿರಿ. ಅನಿರೀಕ್ಷಿತ ರೂಪದಲ್ಲಿ ಪ್ರಮೋಶನ್‌ ಈಡೇರುವ ಸಾಧ್ಯತೆ ಇರುತ್ತದೆ.ವಿದೇಶಗಳಲ್ಲಿನ ವ್ಯವಹಾರಗಳಲ್ಲಿ ತೃಪ್ತಿಕರ ಬೆಳವಣಿಗೆಯ ಮುನ್ನಡೆಗಾಗಿ ಮಾತುಕತೆಗಳು ಯಶಸ್ವಿಯಾಗಲಿದೆ. ಆರ್ಥಿಕವಾಗಿ ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ಮನಸ್ಸಿನ ಉದ್ವೇಗವು ಕಡಿಮೆಯಾಗಲು ಗಾಯತ್ರಿ ಮಂತ್ರ ಪಠಿಸಿರಿ. ಶುಭ ವಾರ: ಬುಧ, ಶುಕ್ರ, ಶನಿವಾರ.

ತುಲಾ
ಆರ್ಥಿಕ ದೃಷ್ಟಿಯಲ್ಲಿ ಸಟ್ಟಾ, ಜುಗಾರಿ, ಶೇರು, ಲಾಟರಿ ಇತ್ಯಾದಿ ಆಕರ್ಷಣೆಯಿಂದ ದೂರವಿರಿ. ಆಗಾಗ ಕುಟುಂಬದಲ್ಲಿ ಅನಾರೋಗ್ಯ ಕಾಣಿಸಬಹುದು. ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಹೃದ್ಗತ ಸಂಗತಿಗಳಲ್ಲಿ ನಿರೀಕ್ಷಿತ ಫ‌ಲ ಇರದು. ಕೊಂಡುಕೊಳ್ಳುವ ವ್ಯವಹಾರಗಳಲ್ಲಿ ಸಾಫ‌ಲ್ಯ ಕಂಡುಬಂದರೂ ಜಾಗ್ರತೆ ಅತೀ ಅಗತ್ಯವಿದೆ. ದಾಂಪತ್ಯ ಜೀವನದಲ್ಲಿ ತಪ್ಪು ತಿಳುವಳಿಕೆಯಿಂದ ದೂರವಿರಿ. ವಿದ್ಯಾರ್ಥಿಗಳ ಅಭ್ಯಾಸ ಪರಿಪೂರ್ಣವಾಗುತ್ತದೆ. ಮನದೆಣಿಕೆಯಂತೆ ವಿವಾಹ ಇಚ್ಛೆಗಳು ಈಡೇರುತ್ತವೆ. ಶುಭ ವಾರ: ಶುಕ್ರ, ಶನಿ, ಭಾನುವಾರ.

ವೃಶ್ಚಿಕ
ವೃತ್ತಿರಂಗದಲ್ಲಿ ಬದಲಾವಣೆ ತಂದೀತು. ಪ್ರಯತ್ನಬಲ ಜಾರಿ ಯಲ್ಲಿರಲಿ. ನಿಶ್ಚಿತವಾಗಿ ನಿಮ್ಮ ಅಭಿವೃದ್ಧಿ ನಿಮಗೆ ಸಾಧಕವಾಗುತ್ತದೆ. ರಾಜಕೀಯ ವರ್ಗದವರ ಪ್ರಯತ್ನಬಲ ಕಾರ್ಯಸಾಧನೆಗೆ ಅನುಕೂಲವಾಗಿ ಫ‌ಲ ನೀಡಲಿದೆ. ಧಾರ್ಮಿಕ ಕ್ಷೇತ್ರದ ಅನುಭವ ಸಂತಸ ತರಲಿದೆ. ಆರ್ಥಿಕ ಕ್ಷೇತ್ರದಲ್ಲಿ ಧನ ಭದ್ರತೆಗೆ ಸಾಧ್ಯವಾಗಲಿದೆ. ಸ್ತ್ರೀ ನಿಮಿತ್ತ ಅನುಮಾನಕ್ಕೆ ಕಾರಣರಾಗದಂತೆ ಕಾಳಜಿ ಇರಲಿ. ವಾಯುದೋಷದಿಂದ ಆಸ್ಪತ್ರೆ ದರ್ಶನವಾದೀತು. ಕಾಳಜಿ ಇರಲಿ. ಯಶೋಭಿವೃದ್ಧಿಯಲ್ಲಿ ವೈರಿಗಳಿಂದ ಹಸ್ತಕ್ಷೇಪ, ತಡೆ, ತೊಂದರೆಗಳಿರುತ್ತವೆ. ಹನುಮನ ನೆನೆ‌ಯಿರಿ. ಶುಭ ವಾರ: ಶನಿ, ಭಾನು, ಸೋಮವಾರ.

ಧನು
ವೃತ್ತಿರಂಗದಲ್ಲಿ ಪ್ರತಿಷ್ಠಿತರ ಸಹಯೋಗದಿಂದ ಕಾರ್ಯಸಿದ್ಧಿ ಇದೆ.ಹಣಕಾಸಿನ ವಿಚಾರದಲ್ಲಿ ಮುಖ್ಯವಾಗಿ ಖರ್ಚುವೆಚ್ಚಗಳ ಬಗ್ಗೆ ಯೋಚಿಸು ವಂತಾಗುತ್ತದೆ. ರಾಜಕೀಯ ವರ್ಗದವರಿಗೆ ಮುನ್ನಡೆಯ ದಿನಗಳಿವು. ಅಲೆ ದಾಟಗಳು ಅಧಿಕ ರೂಪದಲ್ಲಿದ್ದು ದೇಹಾಯಾಸಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಸಾಂಸಾರಿಕವಾಗಿ ಉಲ್ಲಾಸಕರ ವಾತಾವರಣ ಅನುಭವಿಸುವಂತಾಗುತ್ತದೆ. ವ್ಯಾಪಾರ, ವ್ಯವಹಾರಗಳಲ್ಲಿ ಆದಾಯ ಅಧಿಕ ರೂಪದಲ್ಲಿದ್ದು ಸಮಾಧಾನ ತರುತ್ತದೆ. ರಾಜಕೀಯದಲ್ಲಿ ಶತ್ರು ಪರಾಜಯವಾಗುತ್ತದೆ. ಹಾಗೂ ಸ್ಥಾನಮಾನಗಳು ಹುಡುಕಿಬಂದಾವು. ಶುಭ ವಾರ: ಬುಧ, ಗುರು, ಶನಿವಾರ.

ಮಕರ
ಈ ವಾರ ಶುಭಮಂಗಲ ಕಾರ್ಯಗಳು ಅನಿರೀಕ್ಷಿತ ರೂಪದಲ್ಲಿ ನಡೆದುಹೋಗುತ್ತವೆ. ಉದ್ಯಮ, ವ್ಯವಹಾರಗಳಲ್ಲಿ ಹೊಸ ಅಧ್ಯಾಯ ತೆರೆಯುವುದು. ಯುವಕ-ಯುವತಿಯರಿಗೆ ಪ್ರಣಯಾಕಾಂಕ್ಷೆ ಅಥವಾ ವಿವಾಹೇಚ್ಛಾದಿಗಳು ಈಡೇರುತ್ತವೆ. ಅನಿರೀಕ್ಷಿತವಾಗಿ ಬರುವ ಸಂತಸಕರ ಸುದ್ದಿಯಿಂದ ಚಿಂತೆ ದೂರವಾಗುತ್ತದೆ. ಸಾಮಾಜಿಕವಾಗಿ ಪ್ರತಿಷ್ಠೆಯ ಸ್ಥಾಮಾನ ದೊರೆಯುತ್ತದೆ. ಕೌಟುಂಬಿಕವಾಗಿ ನಮ್ಮೆದಿ ಹಾಗೂ ಸಂತಸದಾಯಕ ವಾತಾವರಣ ಕಂಡುಬರುತ್ತದೆ. ಶುಭ ವಾರ: ಬುಧ, ಶುಕ್ರ, ಶನಿವಾರ.

ಕುಂಭ
ಮಾನಸಿಕ ಋಣಾತ್ಮಕ ಚಿಂತನೆಗಳು ಆಗಾಗ ಕಿರಿಕಿರಿಯೆನಿಸಲಿವೆ.ಶನಿಯ ಪ್ರತಿಕೂಲತೆ ಆಗಾಗ ದೈಹಿಕ ಹಾಗೂ ಆರ್ಥಿಕವಾಗಿ ಪರಿಣಾಮ ಬೀರ ಬಹುದು. ವೃತ್ತಿರಂಗದಲ್ಲಿ ಕೈಲಾಗದ ಪರಿಸ್ಥಿತಿಯನ್ನು ಪುಷ್ಟೀಕರಿಸಲಿದೆ. ನೂತನ ಕಾರ್ಯಾರಂಭಕ್ಕೆ ಅನುಕೂಲ ಸಮಯವಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇದ್ದುದನ್ನು ಇದ್ದ ಹಾಗೆ ನಡೆಸಿಕೊಂಡು ಹೋಗುವುದು ಉತ್ತಮ. ಸಾಂಸಾರಿಕವಾಗಿ ತುಸು ಸಮಾಧಾನ ಮನಸ್ಸಿಗೆ ಶಾಂತಿ ನೀಡಲಿದೆ. ಹಾಗೇ ಪ್ರಯತ್ನಬಲ, ಆತ್ಮವಿಶ್ವಾಸಗಳು ಮುನ್ನಡೆಗೆ ಪೂರಕವಾಗುತ್ತದೆ. ಶುಭ ವಾರ: ಕುಜ, ಗುರು, ಶನಿವಾರ.

ಮೀನ
ದೈವಾನುಗ್ರಹವಿದ್ದು ಕಾರ್ಯಭಾಗಗಳು ಚುರುಕಾಗಿ ಮುಗಿಯಲಿವೆ. ಸಾಲಗಾರರು ಋಣಮುಕ್ತರಾದಾರು. ವೈವಾಹಿಕ ಚಿಂತನೆಗಳು ಬಲಗೊಂಡು ಕಂಕಣಬಲದ ಕನಸನ್ನು ಸಾಕಾರಗೊಳಿಸಲಿವೆ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭದಾಯಕ ಆದಾಯ ಮುಂದಿನ ವಿಸ್ತರಣೆಗೆ ಅನುಕೂಲವಾಗಲಿದೆ. ಹಿರಿಯರ ಆರೋಗ್ಯ ಆಗಾಗ ಏರುಪೇರಾಗಿ ಕಿರಿಕಿರಿಯೆನಿಸಬಹುದು. ಸಾಂಸಾರಿಕ ಸುಖ ಅಷ್ಟಕ್ಕಷ್ಟೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅಭಿವೃದ್ಧಿ ಸಮಾಧಾನಕರವಾದೀತು. ದೂರ ಸಂಚಾರದಲ್ಲಿ ಸಂತಸವಿದೆ. ಶುಭ ವಾರ: ಚಂದ್ರ, ಕುಜ, ಬುಧವಾರ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *