ಅಪಘಾತ ಮಹಿಳೆ ಸಾವು

Posted on: August 3, 2017

carcrash ಸುಂಟಿಕೊಪ್ಪ:- ಜೀಪು ಹಾಗೂ ಓಮ್ನಿ ವ್ಯಾನ್ ಪರಸ್ಪರ ಡಿಕ್ಕಿಯಾದ ಪರಿಣಾಮ ಜೀಪಿನಲ್ಲಿದ್ದ ಮಹಿಳೆಯೋರ್ವರು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿ ಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಗರಗಂದೂರು ಮಲ್ಲಿಕಾರ್ಜುನ ಕಾಲೋನಿ ನಿವಾಸಿ ದಿ. ಮಾಯಿಲ ಅವರ ಪತ್ನಿ ನೀಲು (60) ಅವರೆ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಮಲ್ಲಿಕಾರ್ಜುನ ಕಾಲೋನಿ ಯಿಂದ ಮಾದಾಪುರ ಕಡೆಗೆ ಜೀಪಿನಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾಗ ಮಾದಾಪುರ ಪೆಟ್ರೋಲ್ ಬಂಕ್ ಬಳಿ ಮಾರುತಿ ವ್ಯಾನ್ ಎದುರಾಗಿದ್ದು, ಪರಸ್ಪರ ಡಿಕ್ಕಿಯಾಗಿದೆ. ಜೀಪಿನಲ್ಲಿದ್ದ ನೀಲುಗೆ ಗಂಭೀರ ಗಾಯವುಂಟಾಗಿತ್ತು. ಅವರನ್ನು ಮಂಗಳೂರು ವೆನ್‍ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಜೀಪಿನಲ್ಲಿದ್ದ ಇನ್ನೋರ್ವ ಮಹಿಳೆಗೂ ಗಾಯಾಳುವಾಗಿದ್ದು, ಮಡಿಕೇರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *