ಪರಿಸರ ಸಂರಕ್ಷಣೆಯಲ್ಲಿ”ಟೀಂ ನರಿಕೊಡವ ರೈಡರ್‍ಸ್ ಗ್ರೂಪ್”

Posted on: August 12, 2017

IMG-20170811-WA0166 IMG-20170811-WA0207 IMG-20170811-WA0232
ಚೆಟ್ಟಳ್ಳಿ:- ಕೊಡಗಿನಲ್ಲಿ ಹಲವು ಸಂಘಸಂಸ್ಥೆಗಳು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಂತೆ ಕೊಡಗಿನ ಯುವಕರ ಟೀಂ ನರಿಕೊಡವ ರೈಡರ್‍ಸ್ ಗ್ರೂಪ್ ಪರಿಸರ ಸಂರಕ್ಷಣೆಯ ಕಾಳಜಿಯೊಂದಿಗೆ ತೊಡಗಿಸಿ ಕೊಂಡಿದೆ.
ಫೇಸ್‌ಬುಕ್ಕ್, ವಾಟ್ಸ್‌ಯಾಪ್‌ಗಳಲ್ಲಿ ಗ್ರೂಪನ್ನು ತೆರೆದು ತನ್ನ ಗ್ರೂಪ್ನ ಬಗ್ಗೆ ಕಾಳಜಿ ಮೂಡಿಸುತಿದ್ದಾರೆ. ಈಗಾಗಲೇ ೨೦ ಸದಸ್ಯರು ಈ ಗ್ರೂಪ್ನಲ್ಲಿ ಸದಸ್ಯರಾಗಿದ್ದು ಬುಲೇಟ್, ಜಾವ, ಎಸ್ಡಿ ಹಾಗು ಹಲವು ಬೈಕ್‌ಗಳಲ್ಲಿ ಕೊಡಗಿನಲ್ಲದೆ ಬೇರೆ ರಾಜ್ಯಗಳ ಪ್ರವಾಸಿತಾಣಗಳಿಗೆ ರೈಡ್ ಹೋಗುವರು.
ಪರಿಸರ ಸಂರಕ್ಷಣೆಯ ಬಗ್ಗೆ ಜಾಗ್ರತ್ತಿ ಮೂಡಿಸುವ ಬಗ್ಗೆ ಮಡಿಕೇರಿ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ಇಲಾಖಾ ವತಿಯಿಂದ ಹಲವು ಗಿಡಗಳನ್ನು ಪಡೆದು ಮಡಿಕೇರಿ ತಾಲೂಕು ಮಕ್ಕಂದೂರಿನ ಪುಟ್ಟ ಹಳ್ಳಿಯಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಮಾವು, ನೇರಳೆ, ನೆಲ್ಲಿಕಾಯಿ, ಕುಂಬ್ಳಿಗಿಡವನ್ನೆಲ್ಲ ನೀಡಿದರು. ಈ ಗ್ರೂಪ್ನ ಪದಾಧಿಕಾರಿ ಯುವಕರುಗಳಾದ ಕುಂಚೆಟ್ಟಿರ ಅರುಣ್ ಬೆಳ್ಯಪ್ಪ, ಕೆಚ್ಚಟಿರ ಮದನ್ ಮಾದಯ್ಯ, ಪೆಮ್ಮುಡಿಯಂಡ ಅಭಿಷೇಕ್ ಉತ್ತಪ್ಪ ಶಿಕ್ಷಕರಿಗೆ ಹಾಗು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ನಮ್ಮೆಲ್ಲ ಹೊಣೆ ಗಿಡ, ಮರವನ್ನು ನಮ್ಮ ಸ್ನೇಹಿತರಂತೆ ಕಂಡರೆ ಮಾತ್ರ ಸಂರಕ್ಷಣೆ ಸಾಧ್ಯವೆಂದು ಕಿವಿಮಾತು ಹೇಳಿದರು.
ಕೊಡಗಿನ ವಾತಾವರಣ ನಮ್ಮ ಕಣ್ಣಮುಂದೆ ದಿನೇ ದಿನೇ ಹಾಳಾಗುತಿರುವುದು ಕಾಣಬರುತೆ ಅದನ್ನು ಹಿಂದಿನಂತೆ ಪುನಸ್ಚೇತನ ಗೊಳಿಸಲು ಶ್ರಮಿಸುತೇವೆಂದು ಗ್ರೂಪ್‌ನ ಸಂಚಾಲಕ ಅಭಿಷೇಕ್ ಉತ್ತಪ್ಪ ಹೇಳುತ್ತಾನೆ.
-ಕರಣ್ ಕಾಳಯ್ಯ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *