ಶಿಕ್ಷಕರಿಗೆ ಸನ್ಮಾನ

Posted on: August 12, 2017

Z DALITHA SANGHARSHAಮಡಿಕೇರಿ:- ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಮತ್ತು ಸಮಾಜ ಸೇವಕರಾದ ಟಿ.ಆರ್.ವಾಸುದೇವ ಅವರ ನೇತೃತ್ವದಲ್ಲಿ ನಗರದ ಕಿಡ್ಸ್ ಪ್ಯಾರಡೈಸ್ ವಿದ್ಯಾ ಸಂಸ್ಥೆಯ ಸಂಸ್ಥಾಪಕರನ್ನು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಶಾಲೆಯ ಕಾರ್ಯಚಟುವಟಿಕೆ ಮತ್ತು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪ್ರೋತ್ಸಾಹದಾಯಕ ಶೈಕ್ಷಣಿಕ ಕ್ರಮಗಳನ್ನು ಮೆಚ್ಚಿ ಸಂಸ್ಥಾಪಕರನ್ನು ಹಾಗೂ ಶಿಕ್ಷಕರನ್ನು ಸನ್ಮಾನಿಸುತ್ತಿರುವುದಾಗಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್.ಎಲ್.ದಿವಾಕರ್ ತಿಳಿಸಿದರು.
ದಾನಿಗಳಾದ ಟಿ.ಆರ್.ವಾಸುದೇವ, ಎಂ.ಸಿ.ಕಾರ್ಯಪ್ಪ, ಡಿವೈಎಸ್‌ಪಿ ಸುಂದರ್ ರಾಜ್, ಖ್ಯಾತ ವೈದ್ಯರಾದ ಡಾ.ಮನೋಹರ್ ಜಿ.ಪಾಟ್ಕರ್ ಸಭೆಯನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರಸಭಾ ಸದಸ್ಯರಾದ ಲೀಲಾಶೇಷಮ್ಮ, ದಸಂಸಯ ತಾಲ್ಲೂಕು ಸಂಚಾಲಕರಾದ ದೀಪಕ್, ಪ್ರಮುಖರಾದ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *