ಎರ್ಮಾಯಿ

Posted on: September 27, 2017

698 (1)ಮಳೆಗಾಲ ಬಂತೆಂದರೆ ಸಾಕು. ಮಳೆಗಾಲದುದ್ದಕ್ಕೂ  ಪ್ರಕೃತಿಗೆ ಹಬ್ಬ. ಪ್ರಕೃತಿ ಮಾತೆ ಹಚ್ಚಹಸುರಿನಿಂದ ಕಂಗೊಳಿಸುತ್ತಾಳೆ. ಬತ್ತಿ ಹೋಗಿದ್ದ ನದಿತೊರೆಗಳು ಜೀವ ಪಡೆಯುತ್ತವೆ.ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದೇ ಒಂದು ಖುಷಿ. ಮನಸ್ಸಿಗೆ, ಕಣ್ಣಿಗೆ ಆಹ್ಲಾದ ನೀಡುವ ಜಲಪಾತಗಳು ಆಗ ನಮಗೆ ಕಾಣ ಸಿಗುತ್ತವೆ.ಅಂಥವುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎರ್ಮಾಯಿ ಜಲಪಾತವೂ ಒಂದು.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಸಮೀಪದ ಎರ್ಮಾಯಿ ಎಂಬಲ್ಲಿ ದಟ್ಟ ಕಾನನದ ನಡುವೆ ಸುಮಾರು 80 ಅಡಿ ಎತ್ತರದಿಂದ ಕಲ್ಲುಬಂಡೆಗಳ ನಡುವೆ ಧುಮ್ಮಿಕ್ಕುವ ಈ ಜಲಧಾರೆಯನ್ನು ನೋಡುವುದೇ ಒಂದು ಹಬ್ಬ. ಒಂದು ಕಡೆ ಆಕಾಶದೆತ್ತರ ಬೆಳೆದು ನಿಂತ ಮರಗಳು,ಹಚ್ಚ ಹಸುರಿನ ಪ್ರಕೃತಿ, ಇನ್ನೊಂದು ಕಡೆ ಜೀರುಂಡೆಗಳ ಕಲರವ, ಮತ್ತೂಂದು ಕಡೆ ಮನಸ್ಸಿಗೆ ಖುಷಿ ನೀಡುವ ಜಲಧಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *