ಚಮಕ್

Posted on: September 25, 2017
gani-newಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಮಕ್ ಸಿನಿಮಾವನ್ನು ಸುನಿ ನಿರ್ದೇಶಿಸುತ್ತಿದ್ದಾರೆ.
ಕನ್ನಡ ಅಭಿಮಾನಿಗಳಿಗೆ ಅದರಲ್ಲೂ ವಿಶೇಷವಾಗಿ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗಾಗಿ ಚಿತ್ರತಂಡ ಹೆಚ್ಚುವರಿಯಾಗಿ ವಿಶೇಷ ಗಿಫ್ಟ್ ನೀಡಲು ತಯಾರಿ ನಡೆಸುತ್ತಿದೆ.
1986 ರಲ್ಲಿ  ಬಿಡುಗಡೆಯಾದ ವಿಷ್ಣುವರ್ಧನ್ ಅಭಿನಯದ ಕರ್ಣ ಸಿನಿಮಾದ ‘ಪ್ರೀತಿಯೇ ನನ್ನುಸಿರು’ ಹಾಡಿನ ರಿಮಿಕ್ಸ್ ಮಾಡಲು ನಿರ್ಧರಿಸಲಾಗಿದೆ. ವಿಷ್ಣು ವರ್ಧನ್ ಮತ್ತು ಸುಮಲತಾ ಅಭಿನಯದ ಈ ಹಾಡಿಗೆ ಎಂ ರಂಗರಾವ್ ಸಂಗೀತ ನೀಡಿದ್ದರು. ಇದು ಹಿಂದಿಯ ಪ್ಯಾರ್ ಬಿನ್ ಚೆನ್ ಹಾಡಿನ ರಿಮೇಕ್ ವರ್ಸನ್ ಆಗಿತ್ತು.
ನಟ ಗಣೇಶ್ ವಿಷ್ಣು ಅವರ ಕಟ್ಟಾಭಿಮಾನಿಯಾಗಿದ್ದು, ಚಮಕ್ ಸಿನಿಮಾದಲ್ಲಿ ಹಾಡನ್ನು ಅಳವಡಿಸಬೇಕೆಂದು ಬಯಸಿದ್ದಾರೆ.
ಸದ್ಯ ಚಮಕ್ ಸಿನಿಮಾ ನಿರ್ದೇಶಕರು ಕನ್ನಡ ಮತ್ತು ಹಿಂದಿ ಭಾಷೆ ಆಡಿಯೋ ಹಕ್ಕು ಖರೀದಿಸಿರುವ ಎರಡು ಆಡಿಯೋ ಕಂಪನಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.
ಹಾಡಿನ ರಿಮಿಕ್ಸ್ ಗಾಗಿ ಕಂಪನಿಗಳ ಜೊತೆಗೆ ಔಪಚಾರಿಕ ಮಾತುಕತೆ ಮುಗಿಸಿ ಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೇ, ಶೀಘ್ರವೇ ಹಾಡಿನ ರಿಮಿಕ್ಸ್ ಕೂಡ ಪೂರ್ಣಗೊಳ್ಳಲಿದೆ. ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *