ಶೆಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಸಾಧನೆ

Posted on: September 2, 2017

Z BADMINTON
ಮಡಿಕೇರಿ :-  ನಗರದ ಶೆಟಲ್ ಬಾಡ್ಮಿಂಟಲ್ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ರ್‍ಯಾಕಿಂಗ್ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಡಿಕೇರಿಯ ಯುಕ್ತಾ ೮ ಪ್ರಶಸ್ತಿಗಳನ್ನು ಗಳಿಸಿದ್ದಾಳೆ. ೧೩, ೧೫, ೧೭ ಮತ್ತು ೧೯ರ ವಯೋಮಿತಿಯ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಹಾಗೂ ೧೯ರ ವಯೋಮಿತಿಯ ಮಿಕ್ಸ್ ಡಬ್ಬಲ್ಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಅಜ್ಜೇಟಿರ ಯುಕ್ತಾ ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ೬ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಈಕೆ ಮೇದುರ ಅರುಣ್ ಪೆಮ್ಮಯ್ಯ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಯುಕ್ತಾ ಮಡಿಕೇರಿಯ ನಿವಾಸಿಗಳಾದ ಅಜ್ಜೇಟಿರ ಮೋಹನ್(ಜೈ) ಮತ್ತು ಮಮತಾ ದಂಪತಿಯ ಪುತ್ರಿಯಾಗಿದ್ದಾಳೆ. ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಪ್ರಶಸ್ತಿಗಳನ್ನು ವಿತರಿಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *