ಅಸ್ಸಾಂ

Posted on: October 10, 2017

220px-Kazi_rhino_editಅಸ್ಸಾಂ ರಾಜ್ಯವು ಭಾರತದ ಈಶಾನ್ಯ ವಲಯದ ಮಧ್ಯಭಾಗದಲ್ಲಿದೆ. ಇತರೆ ಏಳು ಸೋದರಿ ರಾಜ್ಯಗಳಿಗೆ ಇದು ಪ್ರವೇಶದ್ವಾರದಂತಿದೆ. ಪ್ರಖ್ಯಾತ ವನ್ಯಧಾಮಗಳು ಅಸ್ಸಾಂ ರಾಜ್ಯದಲ್ಲಿವೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ (ಚಿತ್ರಿತ ) ಮತ್ತು ಮಾನಸ ರಾಷ್ಟ್ರೀಯ ಉದ್ಯಾನವನ, ಅತಿದೊಡ್ಡ ನದಿ ದ್ವೀಪ ಮಜುಲಿ ಮತ್ತು ಬ್ರಿಟಿಷ್‌ ಆಳ್ವಿಕೆಯ ಕಾಲಕ್ಕೆ ಸೇರಿದ ಚಹಾ ತೋಟಗಳೂ ಸೇರಿವೆ. ಈ ರಾಜ್ಯದಲ್ಲಿ ಬಹುಮಟ್ಟಿಗೆ ಉಪ-ಉಷ್ಣವಲಯದ ಹವಾಮಾನವಿರುತ್ತದೆ. ಭಾರತದ ಇತರೆಡೆಯಂತೆ ಅಸ್ಸಾಂ ಕೂಡಾ ಮಳೆಗಾಲವನ್ನು ಅನುಭವಿಸುತ್ತದೆ. ಭಾರತದಲ್ಲಿನ ಅತಿ ಹೆಚ್ಚು ದಟ್ಟಕಾಡು ವಲಯ ಅಸ್ಸಾಂನಲ್ಲಿದೆ. ಅಸ್ಸಾಂ ಪ್ರವಾಸ ಕೈಗೊಳ್ಳಲು ಚಳಿಗಾಲದಂದು (ಅಕ್ಟೋಬರ್‌ನಿಂದ ಏಪ್ರಿಲ್‌) ಸೂಕ್ತ ಸಮಯ.

ಅಸ್ಸಾಂ ಸಮೃದ್ಧ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಬ್ರಿಟಿಷ್‌ ಆಳ್ವಿಕೆಗೆ ಮುಂಚೆ ಶತಮಾನಗಳ ಕಾಲ ಈ ವಲಯವನ್ನಾಳಿದ ಅಹೊಮ್‌ ಸಾಮ್ರಾಜ್ಯದ ಐತಿಹಾಸಿಕ ಪರಂಪರೆ ಹೊಂದಿದೆ. ಇತರೆ ಗಮನಾರ್ಹ ಲಕ್ಷಣಗಳಲ್ಲಿ ಬ್ರಹ್ಮಪುತ್ರ ನದಿ, ಜಟಿಂಗಾದಲ್ಲಿ ಹಕ್ಕಿಗಳ ಆತ್ಮಹತ್ಯೆಯ ರಹಸ್ಯ, ಕಾಮಾಕ್ಯ ಸೇರಿದಂತೆ ತಾಂತ್ರಿಕ್‌ ಪಂಥದ ಹಲವು ದೇವಾಲಯಗಳು, ಅರಮನೆಗಳ ಅವಶೇಷಗಳು ಸೇರಿವೆ. ಅಸ್ಸಾಂನ ರಾಜಧಾನಿ ಗುವಾಹಾಟಿಯಲ್ಲಿ ಹಲವು ಪೇಟೆಗಳು, ದೇವಾಲಯಗಳು ಮತ್ತು ವನ್ಯಜೀವಿ ಅಭಯಾರಣ್ಯಗಳನ್ನು ಹೊಂದಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *