ಒಂದೇ ರಾತ್ರಿ ಮೂರು ಬೈಕ್‌ಗಳನ್ನು ಕದ್ದು, ರಸ್ತೆ ಬದಿಯಲ್ಲೇ ಬಿಟ್ಟು ಹೋದ ಕಳ್ಳರು

Posted on: October 9, 2017

mdk8sdr3 mdk8sdr4 mdk8sdr5ಸಿದ್ದಾಪುರ:- ಸಿದ್ದಾಪುರ ಮತ್ತು ನೆಲ್ಯಹುದಿಕೇರಿಯಲ್ಲಿ ಒಂದೇ ದಿನ ರಾತ್ರಿ ಮೂರು ಬೈಕ್‌ಗಳನ್ನು ಕದ್ದು ವಿವಿದಡೆ ಬಿಟ್ಟು ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.

ಇಲ್ಲಿನ ಮೈಸೂರು ರಸ್ತೆಯಲ್ಲಿನ ಉಸ್ಮಾನ್, ಮಾರ್ಕೆಟ್ ರಸ್ತೆಯ ಚಿನ್ನಪ್ಪ ಹಾಗೂ ನೆಲ್ಯಹುದಿಕೇರಿಯ ಅಬ್ದುಲ್ಲಾ ಎಂಬವರ ಬೈಕ್‌ಗಳನ್ನು ಮಧ್ಯರಾತ್ರಿ ಮನೆಯ ಪಕ್ಕದಿಂದ ಕದ್ದೊಯ್ದ ಕಳ್ಳರು ಕೂಡುಗದ್ದೆ ಸ್ಮಶಾನ, ಗುಹ್ಯ ರಸ್ತೆ ಮತ್ತು ಮುಲ್ಲೆತೋಡುವಿನಲ್ಲಿ ಬೈಕ್‌ಗಳನ್ನು ಬಿಟ್ಟು ಪರಾರಿಯಾಗಿದ್ದು, ಇದರಲ್ಲಿ ೨ ಬೈಕ್‌ಗಳ ಪೆಟ್ರೋಲ್ ಕಾಲಿಯಾಗಿದೆ. ಮೈಸೂರು ರಸ್ತೆಯಲ್ಲಿನ ಮನೆಯೊಂದರಲ್ಲಿ ಯಾರೂ ಇಲ್ಲದನ್ನು ತಿಳಿದಿರುವ ಕಳ್ಳ ಹಿಂಬಾಗಿಲಿನ ಮೂಲಕ ರಾತ್ರಿಯಲ್ಲೇ ಮನೆಗೆ ನುಗ್ಗಿ ಮನೆಯೊಳಗೆ ಪೂರ್ತಿ ಪರಿಶೀಲಿಸಿ ಚಿನ್ನ ಹಾಗೂ ನಗದು ಇಲ್ಲದೆ ಇರುವುದನ್ನು ತಿಳಿದು ಬೆಲೆ ಬಾಳುವ ಇತರ ವಸ್ತುಗಳನ್ನು ತೆಗೆಯದೆ ಹಿಂತಿರುಗಿದ್ದು, ಈ ಸಂದರ್ಭ ಈತನ ಚಪ್ಪಲಿಯನ್ನು ಅಲ್ಲಿಯೇ ಬಿಟ್ಟು ಸಮೀಪದ ಮನೆಯ ಅಂಗಳದಲ್ಲಿದ್ದ ಹೊಸ ಚಪ್ಪಲಿಯೊಂದನ್ನು ಹಾಕಿ ತೆರಳಿದ್ದಾರೆ
ಇತ್ತೀಚಿಗೆ ಸಿದ್ದಾಪುರ ವ್ಯಾಪ್ತಿಯಲ್ಲಿ ಕಳ್ಳತನ ಯತ್ನಗಳು ಹೆಚ್ಚಾಗುತ್ತಿದ್ದು ಪೊಲೀಸ್‌ರು ಸೂಕ್ತ ಕ್ರಮ ಕೈಗೊಂಡು ರಾತ್ರಿ ಗಸ್ತು ಪೊಲೀಸರನ್ನ ನೇಮಾಕ ಮಾಡಿ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚ ಬೇಕೆಂದು ಸಿ ಪಿ ಐ ಎಂ ಗ್ರಾಮ ಸಮಿತಿ ಅಧ್ಯಕ್ಷ ಅನೀಲ್ ಇಲಾಖೆಯನ್ನು ಒತ್ತಾಯಿಸಿದ್ದಾರೆ
ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *