ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ

Posted on: October 17, 2017

kodagu3ಮಡಿಕೇರಿ: ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಾತ್ರೆಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಬೆಳಗ್ಗೆ 6 ರಿಂದಲೇ ಜನರು ಆಗಮಿಸಿದ್ದು, ತಲಕಾವೇರಿ ಬಳಿ ಪಿಂಡ ಪ್ರದಾನ ವಿಧಿ ನೆರವೇರಿಸುತ್ತಿದ್ದಾರೆ.

ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ತಲಕಾವೇರಿಗೆ ಭಾಗಮಂಡಲದಿಂದ ಮೂವತ್ತು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ ನಾನಾ ಕಡೆಗಳಿಂದ ಭಕ್ತರು ಆಗಮಿಸಿದ್ದು, ತೀರ್ಥೋದ್ಭವದ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲು ಕಾಯುತ್ತಿದ್ದಾರೆ.

ಮಧ್ಯಾಹ್ನ ತೀರ್ಥೋದ್ಭವವಾಗುವುದರಿಂದ ಈ ಬಾರಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಂದ ಹೆಚ್ಚು ಭಕ್ತರು ಭಾಗವಹಿಸುತ್ತಿದ್ದಾರೆ. ದೂರದ ಪ್ರದೇಶಗಳಿಂದ ಈಗಾಗಲೇ ಹಲವರು ಕೊಡಗಿಗೆ ಆಗಮಿಸಿದ್ದಾರೆ. ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಎರಡೂ ಕಡೆ ಪಾರ್ಕಿಂಗ್‌ ಮಾಡಲಾಗಿದೆ. ಪಾಸ್‌ ಇದ್ದ ವಾಹನಗಳನ್ನು ಮಾತ್ರ ಭಾಗಮಂಡಲದಿಂದ ತಲಕಾವೇರಿಗೆ ಬಿಡಲಾಗುವುದು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *