ಕಾವೇರಿ ತುಲಾ ಸಂಕ್ರಮಣಕ್ಕೆ ಬೊತ್ತ್ ಸಿದ್ಧತೆ….!!!!!!!

Posted on: October 16, 2017

20171016_111132 20171016_111201 20171016_120016
ಚೆಟ್ಟಳ್ಳಿ: ತಲಕಾವೇರಿ ಎಂಬ ಪುಣ್ಯನೆಲೆಯಲ್ಲಿ ಕೊಡಗಿನ ಕುಲದೇವರಾದ ಕಾವೇರಿ ಮಾತೆಯ ತೀರ್ಥೋದ್ಭವದ ಸಿದ್ದತೆ ಒಂದೆಡೆಯಾದರೆ ಎಲ್ಲೆಲೂ ಸಂಪ್ರದಾಯದ ಆಚರಣೆಗಳಿಗೆ ಸಿದ್ದತೆ ನಡೆಯುತಿದ್ದು ದಿನದ ಮುಂಚಿತವಾಗಿ “ಬೊತ್ತ್” ಎಂಬ ಒಂದು ತರಹದ ವಿಶಿಷ್ಟ ರೀತಿಯ ಪೊಂಗ ಮರದ ದಂಟನ್ನು ತರಲು ಕಾಡಿಗೆ ಹೋಗಿ ತಮಗೆ ಬೇಕಾದ ಬೊತ್ತ್ ಹಾಗೂ ಅದಕ್ಕೆ ಸಂಬಂದಿಸಿದ ಬಳ್ಳಿಯನ್ನು ತಂದು ಸಿದ್ದತೆ ನಡೆಯುತಿರುವುದು ಕಂಡುಬರುತಿದೆ..
ಮನೆಮನೆಗಳಲ್ಲಿ ಸಿದ್ದಪಡಿಸಿಟ್ಟ ಬೊತ್ತನ್ನು ತಲಕಾವೇರಿಯಲ್ಲಿ ತೀಥೋದ್ಭವವಾಗುವದಕ್ಕೆ ಮುಂಚಿತವಾಗಿ ತಮ್ಮ ತಮ್ಮ ಗದ್ದೆ, ಮನೆ, ಬಾವಿ, ದನದಕೊಟ್ಟಿಗೆ, ಹಟ್ಟಿ, ಕೆರೆ, ಗೊಬ್ಬರಗುಂಡಿ ಗಳಲೆಲ್ಲ ಒಂದೊಂದು ಬೊತ್ತನ್ನು ಚುಚ್ಚಿ ಅದಕ್ಕೆ ತೆಕ್ಕೆಯಂತೆ ಮಾಡಿದ ಬಳ್ಳಿಯನ್ನು ತುದಿಗೆ ಸಿಕ್ಕಿಸುತಾರೆ. ಕೊಡಗಿನ ಕೆಲವೆಡೆ ಬಿದಿರನ್ನು ಒಡೆದು ಎರಡು ತುಂಡುಗಳನ್ನು ಕತ್ತರಿ ರೂಪದಲ್ಲಿ ನಿಲ್ಲಿಸಿ ಬಳ್ಳಿಗಳನ್ನು ಹಾಕಿದರೆ, ಮತ್ತೆಕೆಲವೆಡೆ ಕಾಂಡಗಳನ್ನು ಚುಚ್ಚುವ ಕ್ರಮವಿದೆ ಹಾಗೂ ಕೆಲವೆಡೆ ಬೊತ್ತನ್ನೆ ಚುಚ್ಚುವುದಿಲ್ಲ. ಕಾವೇರಿ ತುಲಾ ಸಂಕ್ರಮಣದಂದು ಈ ಬೊತ್ತು ಚುಚ್ಚುವ ವಿಚಾರ ಕೊಡಗಿನ ಹಿರಿಯರು ಹೇಳವಂತೆ ಒಂದು ಕಡೆ ದ್ವಾಪರಯುಗದಲ್ಲಿ ಪಾಂಡವರು ವನವಾಸಕ್ಕೆ ಹೋಗುವ ಸಮಯದಲ್ಲಿ ಕೊಡಗಿನ ಕಾವೇರಿಮಾತೆಗೆ ನೀಡಿದ ಜಾಗವನ್ನು ಕಾವೇರಿ ಸಂಕ್ರಮಣದಂದು ವಾಪಾಸು ಕೇಳಿದರಂತೆ ಆಸಮಯದಲ್ಲಿ ಕೊಡವರು ಜಾಗವನ್ನೆಲ್ಲ ಉಳುಮೆ ಮಾಡಿ ಬೊತ್ತುಚುಚ್ಚಿ ಜಾಗವನ್ನು ತಮ್ಮದಾಗಿಸಿ ಕೊಂಡಿದ್ದರ ಫಲವಾಗಿ ಬೊತ್ತ್ ಚುಚ್ಚುವ ಸಂಪ್ರದಾಯವೆನ್ನುವರು. ಮತ್ತೆಕೆಲವರು ಹೇಳುವ ಪ್ರಕಾರ ಪಾಂಡವರು ವನವಾಸಕ್ಕೆ ಹೋಗುವಾಗ ತಮ್ಮ ಗುರುತಿಗಾಗಿ ತಮ್ಮ ಕೈಗೆಸಿಕ್ಕ ಗಿಡಮರಬಳ್ಳಿಗಳನ್ನು ಚುಚ್ಚಿದರಂತೆ ಅದೇ ಬೊತ್ತ್ ಎಂದೆನಿಸಿಕೊಂಡಿತೆನ್ನುವರು, ಹಿಂದೊಮ್ಮೆ ಬೊತ್ತ್ ತರಲ್ಲು ಹೋದ ಕೆಲಸದವನ್ನು ಹುಲಿಹಿಡಿದರಿಂದ ಆ ಊರಿನವರು ಬೊತ್ತಿನ ಬದಲಾಗಿ ಕಾಂಡವನ್ನು ಚುಚ್ಚುತಾರೆಂದು ಹೇಳುತ್ತಾರೆ.
-ಪುತ್ತರಿರ ಕರುಣ್ ಕಾಳಯ್ಯ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *