ಗುಂಡು ಹೊಡೆದುಕೊಂಡು ಗೃಹಿಣಿ ಆತ್ಮಹತ್ಯೆ

Posted on: October 3, 2017

Suicide-002ಮಡಿಕೇರಿ:- ಗೃಹಿಣಿಯೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿಯ ಸುಬ್ರಮಣ್ಯ ನಗರದಲ್ಲಿ ನಡೆದಿದೆ. ಸುಬ್ರಮಣ್ಯನಗರ ನಿವಾಸಿ ಗಣೇಶ್ ಎಂಬವರ ಪತ್ನಿ 44 ವರ್ಷ ಪ್ರಾಯದ ವಾಣಿ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಗಣೇಶ್ ಭಾಗಮಂಡಲದಲ್ಲಿ ಉದ್ಯೋದಲ್ಲಿದ್ದರು ಎನ್ನಲಾಗಿದೆ. ತಮ್ಮ ಇಬ್ಬರು ಮಕ್ಕಳೊಂದಿಗೆ ವಾಣಿ ಸುಬ್ರಮಣ್ಯ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 13 ವರ್ಷ ಪ್ರಾಯದ ಪುತ್ರ ಆದಿತ್ಯ ಬೆಳಿಗ್ಗೆ ಹಾಲು ತರಲೆಂದು ಹೋದ ಸಂದರ್ಭ ವಾಣಿ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಆಯುಧಪೂಜೆ ಸಂದರ್ಭ ಮನೆಯಲ್ಲಿದ್ದ ರಿವಾಲ್ವಾರ್ಗೆ ಪೂಜೆ ಸಲ್ಲಿಸಲಾಗಿತ್ತು. ಬಳಿಕ ರಿವಲ್ವಾರ್‌ನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ವಾಣಿ  ಹಣೆಯ ಭಾಗಕ್ಕೆ ಗುಂಡು ಹೊಡೆದುಕೊಂಡಿದ್ದಾರೆ. ಪುತ್ರಿ ಸಿರಿ(9), ಪುತ್ರ ಆದಿತ್ಯ(13) ಹಾಗೂ ಪತಿಯನ್ನು ವಾಣಿ ಅಗಲಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *