ಗೋವಾ

Posted on: October 10, 2017

ಗೋವಾ ಭಾರತದಲ್ಲಿ ಅತಿ ಪ್ರಖ್ಯಾತ ಪ್ರವಾಸಿ ಸ್ಥಳಗಳಲ್ಲೊಂದು. ಇದು ಮುಂಚೆ ಪೋರ್ಚುಗಲ್‌ ದೇಶದ ವಸಾಹತು ಆಗಿತ್ತು. ಉತ್ಕೃಷ್ಟ ಕಡಲತೀರಗಳು, ಪೋರ್ಚುಗೀಸ್‌ ಚರ್ಚ್‌ಗಳು, ಹಿಂದೂ ದೇವಾಲಯಗಳು ಮತ್ತು ಅಭಯಾರಣ್ಯಗಳಿಗೆ ಗೋವಾ ಖ್ಯಾತವಾಗಿದೆ. ಬೊಮ್ ಜೀಸಸ್‌ ಬೆಸಿಲಿಕಾ, ಮಂಗುವೆಷಿ ದೇವಾಲಯ, ದೂಧ್‌ಸಾಗರ್‌ ಜಲಪಾತ ಮತ್ತು ಶಾಂತಾದುರ್ಗಾ ಗೋವಾದ ಪ್ರೇಕ್ಷಣೀಯ ಸ್ಥಳಗಳಾಗಿವೆ. ಇತ್ತೀಚೆಗೆ, ವ್ಯಾಕ್ಸ್‌ ವರ್ಲ್ಡ್‌ ಎಂಬ ಒಂದು ಮೇಣದ ವಸ್ತುಸಂಗ್ರಹಾಲಯವನ್ನು ಹಳೆ ಗೋವಾದಲ್ಲಿ ತೆರೆಯಲಾಯಿತು. ಇದು ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಹಲವು ಖ್ಯಾತನಾಮರ ಮೇಣ ಪ್ರತಿಕೃತಿಗಳನ್ನು ಹೊಂದಿದೆ.220px-India_Landscape

ಗೋವಾ ಕಾರ್ನಿವಾಲ್‌ (ಜಾತ್ರೆ, ಉತ್ಸವ ಸಮಾರಂಭಗಳು) ವಿಶ್ವವಿಖ್ಯಾತವಾದುದು. ಬಣ್ಣ-ಬಣ್ಣದ ವೇಷಭೂಷಣಗಳು, ತೇಲಾಡುವ ಅಲಂಕಾರಿಕ ಬಂಡಿಗಳು ಮತ್ತು ಎಲ್ಲೆಡೆ ಮೊಳಗುವ ಸಂಗೀತ, ಸಂಭ್ರಮ ಹಾಗೂ ನೃತ್ಯ ಪ್ರದರ್ಶನಗಳನ್ನು ಈ ಜಾತ್ರೆ ಒಳಗೊಂಡಿರುತ್ತದೆ. ಮೂರು ದಿನ ನಡೆಯುವ ಈ ಉತ್ಸವ ಮೂರನೆ ದಿನವಾದ ಮಂಗಳವಾರದಂದು ಕಾರ್ನಿವಾಲ್‌ ಪೆರೇಡ್‌ (ಪಥಸಂಚಲನ), ಮೆರವಣಿಗೆಯೊಂದಿಗೆ ಅಂತ್ಯಗೊಳ್ಳುತ್ತದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *