ಜೋಡಿನಳಿಗೆ ಕೋವಿಯಿಂದ ಗುಂಡುಹೊಡೆದು ಆತ್ಮಹತ್ಯೆ

Posted on: October 9, 2017

New Doc 2017-10-09_1 IMG-20171009-WA0015IMG_20171009_171637IMG_20171009_171654
ಚೆಟ್ಟಳ್ಳಿ:- ಚೆಟ್ಟಳ್ಳಿ ಸಮೀಪದ ಈರಳೆವಳಮುಡಿಗ್ರಾಮದ ಮಹೇಂದ್ರದ ವರ್ಮ(೩೨) ಬೆಳಿಗೆ ೭.೩೦ಕ್ಕೆ ಜೋಡಿನಳಿಕೆ ಕೋವಿಯಲ್ಲಿ ತಲೆಬಾಗಕ್ಕೆ ಗಂಡುಹೊಡೆದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬ್ರಾಹ್ಮಣ ಕುಟುಂಬಕ್ಕೆ ಸೇರಿದ ನರಸಿಂಹ ಎಸ್.ಎಸ್ ಎಂಬುವವರ ಮಗನಾದ ಮಡಿಕೇರಿಯ ೦.೩ ಸೆಕ್ಯೂರಿಟಿ ಶೇರ್‍ಸ್ ಕಂಪನಿಯ ಉದ್ಯೋಗಿಯಾದ ಮಹೇಂದ್ರದ ವರ್ಮ(೩೨) ಎಂದಿಗಿಂತ ಬೆಳಿಗೆ ಬೇಗನೆ ಎದ್ದು ಅಮ್ಮನ ಇರುವಿಕೆಯನ್ನು ಕಾತರಿಪಡಿಸಲು ಅಮ್ಮನ ಹತ್ತಿರ ತೆರಳಿ ಮಾತನಾಡಿಸಿ ತಂದೆತಾಯಿಯ ಕೋಣೆಯೊಳಗೆ ನುಗ್ಗಿ ತಂದೆಯ ಜೋಡಿನಳಿಗೆ ಕೋವಿಯನ್ನು ತಲೆಯ ಭಾಗಕ್ಕೆ ಇಟ್ಟು ೨ ಸುತ್ತು ಗುಂಡು ಹಾರಿಸಿದ್ದಾನೆ. ಒಂದುಗುಂಡಿನ ರಭಸಕ್ಕೆ ತಲೆಯ ಅರ್ಧ ಭಾಗ ಹಾಗು ಮೆದುಳು ಚಲ್ಲಾಪಿಲ್ಲಿ ಗೊಂಡು ರಕ್ತದ ಮಡುವಿನಲ್ಲಿ ಕೆಳಗೆ ಬಿದ್ದುರುತಾನೆ.
ಗುಂಡಿನ ರಭಸಕ್ಕೆ ಪತ್ನಿ ಅನುವರ್ಮ ವರ್ಷ ಬಂದುನೊಡಿದ್ದಾಗ ಕುಟುಂಬದವರಿಗೆ ವರ್ಷತಿಳಿದು. ತಮ್ಮನಾದ ಅಭಿಮನ್ಯು ಚೆಟ್ಟಳ್ಳಿ ಠಾಣಾ ಮುಖ್ಯಪೇದೆ ಪ್ರಕಾಶ್ ರವರಿಗೆ ಖುದ್ದಾಗಿ ವಿಷಯತಿಳಿದ್ದು, ಘಟನಾ ಸ್ಥಳಕ್ಕೆ ಪೋಲಿಸ್ ಸಿಬ್ಬಂದಿಗಳು ಧಾವಿಸಿ ಮಡಿಕೇರಿ ಗ್ರಾಮಾಂತರ ಠಾಣೆಗೆ ವಿಷಯ ತಿಳಿದ್ದಾರೆ. ಬೆಳೆಗೆ ೯.೩೦ಕ್ಕೆ ಮಡಿಕೇರಿ ಪೋಲಿಸ್ ಠಾಣಾ ವ್ರತ್ತನಿರೀಕ್ಷಕರಾದ ಪ್ರದೀಪ್, ಠಾಣಾಧಿಕಾರಿ ಬೋಜಪ್ಪಹಾಗು ಸಿಬ್ಬಂದಿಗಳು ಮಹಜರು ನಡೆಸಿ ಮಡಿಕೇರಿಯ ವೈದಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಮ್ರತದೇಹವನ್ನು ಒಪ್ಪಿಸಲಾಯಿತು.
ಪತ್ನಿ ಅನುವರ್ಮ(೨೬ವರ್ಷ), ಮಗ ಸೂರ್ಯವರ್ಮ(೫.೬ವರ್ಷ) ತಂದೆ ನರಸಿಂಹ, ತಾಯಿ ಉಮಾ, ಸಹೋದರರಾದ ಅಭಿಮನ್ಯು, ಅರ್ಜುನ ಮಹೇಂದ್ರದ ವರ್ಮ ಕುಟುಂಬ ಬಳಗವನ್ನು ಹೊಂದಿರುವ ಮಹೇಂದ್ರದ ವರ್ಮ ಆತ್ಮಹತ್ಯೆಗೆ ಯಾವುದೇ ಕಾರಣವಿಲ್ಲವೆಂದು ಕುಟುಂಬದವವರು ಹೇಳಿದ್ದು ಪೋಲಿಸಲು ಕಾರ್ಯನಿರ್ವಹಿಸುತಿದ್ದ ಕಚೇರಿಗೆ ಬೇಟಿನೀಡಿ ಮಾಹಿತಿ ಕಲೆಹಾಕಿದ್ದಾರೆ.
-ಕರುಣ್ ಕಾಳಯ್ಯ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *