ತಾರಕ್‌

Posted on: October 7, 2017

tarakಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಚಿತ್ರ ಸೆ.29ರಂದು ತೆರೆಗೆ ದಾಂಗುಡಿ ಇಟ್ಟಿದೆ. ಸಾಕಷ್ಟು ಜನರಿಗೆ ನಿರೀಕ್ಷೆ ಹುಟ್ಟಿಸಿದ್ದ ತಾರಕ್‌ ಸಿನಿಮಾದಲ್ಲಿ ದೇವರಾಜ್‌ ಅವರು ದರ್ಶನ್‌ ತಾತನಾಗಿ ನಟಿಸುತ್ತಿದ್ದಾರೆ. ಶಾನ್ವಿ ಶ್ರೀವಾತ್ಸವ್‌, ಶ್ರುತಿ ಹರಿಹರನ್‌ ದರ್ಶನ್‌ಗೆ ನಾಯಕಿಯರಾಗಿದ್ದಾರೆ.

ಇನ್ನು ತಾರಕ್‌ಗಾಗಿ ಯೂರೋಪ್‌ ದೇಶಗಳ ಸುಮಾರು 20ಕ್ಕೂ ಹೆಚ್ಚು ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಅರ್ಜುನ್‌ ಜನ್ಯ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದು, ವಿ.ನಾಗೇಂದ್ರ ಪ್ರಸಾದ್‌, ಜಯಂತ್‌ ಕಾಯ್ಕಿಣಿ ಹಾಗೂ ಹರಿ ಸಂತೋಷ್‌ ತಲಾ ಎರಡೆರಡು ಹಾಡುಗಳನ್ನು ಬರೆದಿದ್ದಾರೆ.

ಚೌಡೇಶ್ವರಿ ಸಿನಿ ಕ್ರಿಯೇಶನ್ಸ್‌ ಮತ್ತು ಜೈ ಮಾತಾ ಕಂಬೈನ್ಸ್‌ನಡಿ ದುಷ್ಯಂತ್‌ ಅವರು ತಾರಕ್‌ ಚಿತ್ರವನ್ನು ನಿರ್ಮಾಣ ಮಾಡಿದರೆ, ಪ್ರಕಾಶ್‌ ಜಯರಾಮ್‌ ನಿರ್ದೇಶನ ಮಾಡಿದ್ದಾರೆ. ​

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *