ದೆಹಲಿ

Posted on: October 10, 2017

220px-Image-New_Delhi_Lotusದೆಹಲಿ ಭಾರತದ ರಾಜಧಾನಿ. ಹಳೆಯ ಮತ್ತು ಹೊಸ, ಪ್ರಾಚೀನ ಮತ್ತು ಆಧುನಿಕತೆಗಳ ಸುಲಲಿತ ಮಿಶ್ರಣವಾಗಿರುವ ದೆಹಲಿಯು ಸಂಸ್ಕೃತಿ ಮತ್ತು ಧಾರ್ಮಿಕತೆಗಳ ತುಂಬಿದ ಕೊಡವಾಗಿದೆ. ದೆಹಲಿ ಭಾರತವನ್ನಾಳಿದ ಹಲವು ಸಾಮ್ರಾಜ್ಯಗಳ ರಾಜಧಾನಿಯಾಗಿದೆ. ಇದರಿಂದಾಗಿ ಅದು ಐತಿಹಾಸಿಕ ಸಮೃದ್ಧತೆಯ ಪ್ರತೀಕವಾಗಿದೆ. ಆಳಿದವರು ತಮ್ಮ ವಿಶಿಷ್ಟ ವಾಸ್ತುಶಿಲ್ಪಕಲೆ ಶೈಲಿಗಳ ಮೂಲಕ ತಮ್ಮ ಛಾಪು ಒತ್ತಿ ಹೋದರು. ಪ್ರಸ್ತುತ ದೆಹಲಿಯು ಹಲವು ಖ್ಯಾತ ಐತಿಹಾಸಿಕ ಸ್ಮಾರಕಗಳು ಮತ್ತು ಹೆಗ್ಗುರುತುಗಳನ್ನು ಹೊಂದಿವೆ. ಉದಾಹರಣೆಗೆ ತೊಗಲಕಾಬಾದ್‌ ಕೋಟೆ, ಕುತ್ಬ್‌ ಮಿನಾರ್‌, ಪುರಾನಾ ಕಿಲಾ, ಲೋಧಿ ಗಾರ್ಡನ್ಸ್‌, ಜಮಾ ಮಸಜೀದ್‌, ಹುಮಾಯೂನ್‌ ಗೋರಿ, ಕೆಂಪು ಕೋಟೆ ಮತ್ತು ಸಫ್ದರ್‌ಜಂಗ್‌ ಗೋರಿ. ಆಧುನಿಕ ಸ್ಮಾರಕಗಳ ಪೈಕಿ ಜಂತರ್‌ಮಂತರ್‌, ಇಂಡಿಯಾ ಗೇಟ್‌, ರಾಷ್ಟ್ರಪತಿ ಭವನ್‌, ಲಕ್ಷ್ಮಿನಾರಾಯಣ್‌ ಮಂದಿರ, ಕಮಲ ಮಂದಿರ ಮತ್ತು ಅಕ್ಷರಧಾಮ ದೇವಾಲಯ ಖ್ಯಾತವಾಗಿವೆ.

ಹೊಸ ದೆಹಲಿಯು ಬ್ರಿಟಿಷ್‌ ವಸಾಹತುಕಾಲದ ವಾಸ್ತುಶಿಲ್ಪಗಳು, ಅಗಲ ಮಾರ್ಗಗಳು ಮತ್ತು ಸಾಲುಮರ ಮತ್ತು ವಿಶಾಲ ಬೀದಿಗಳನ್ನು ಹೊಂದಿದೆ. ಹಲವು ರಾಜಕೀಯ ಹೆಗ್ಗುರುತುಗಳು, ರಾಷ್ಟ್ರೀಯ ವಸ್ತುಸಂಗ್ರಹಾಲಯಗಳು, ಇಸ್ಲಾಮಿಕ್‌ ಪುಣ್ಯಕ್ಷೇತ್ರಗಳು, ಹಿಂದೂ ದೇವಾಲಯಗಳು, ಹಸಿರು ಉದ್ಯಾನಗಳು ಮತ್ತು ಅತ್ಯಾಧುನಿಕ ಅಲಂಕಾರಿಕ ವಾಣಿಜ್ಯ ಮಾಲ್‌ಗಳನ್ನು ಹೊಂದಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *