ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ನಗರದಲಿ ಕಳವು ಮಾಡುವ ಆರೋಪಿತರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ಯಶಸ್ವಿಯಾಗಿದ್ದಾರೆ

Posted on: October 14, 2017

IMG-20171013-WA0041 IMG-20171013-WA0043 IMG-20171013-WA0044

ಮಡಿಕೇರಿ, ವಿರಾಜಪೇಟೆ ಹಾಗೂ ಗೋಣೆಕೊಪ್ಪ ನಗರದಲ್ಲಿ ಇತ್ತೀಚೆಗೆ ಮನೆಯ ಬಾಗಿಲು ಒಡೆದು ಕಳವು ಮಾಡುವ ಆರೋಪಿತರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲೆಯ ಅಪರಾಧ ಪತ್ತೆ ದಳದ ತಂಡ ಯಶಸ್ವಿಯಾಗಿದ್ದಾರೆ.
ದಿನಾಂಕ: ೧೬/೦೭/೧೭ ರಂದು ಗೋಣೆಕೊಪ್ಪ ಮಖ್ಯರಸ್ತೆಯಲ್ಲಿರುವ ಶ್ರೀಮತಿ ಪುಷ್ಪಾವತಿ ಎಂಬವರ ಮನೆ ಕಳುವಾದ ಬಗ್ಗೆ ಗೋಣೆಕೊಪ್ಪ ಪೊಲೀಸ್ ಠಾಣೆಯಲ್ಲು ಪ್ರಕರಣ ದಾಖಲಾಗಿದ್ದು ಆರೋಪಿತರು ಸುಮಾರು ೧೬೪ಗ್ರಾಂ ಚಿನ್ನ ಹಾಗೂ ೧೫ ಸಾವಿರ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು, ಈ ಪ್ರಕರಣವನ್ನು ಗೋಣೆಕೊಪ್ಪ ವೃತ್ತ ನಿರೀಕ್ಷಕರವರು ತನಿಖೆ ನಡೆಸುತ್ತಿದ್ದರು. ಈ ಪ್ರಕರಣವನ್ನು ಸುಮಾರು ೧೨ ದಿನಗಳ ನಂತರ ದಿನಾಂಕ:- ೨೮/೦೭/೧೭ ರಂದು ಮಡಿಕೇರಿ ನಗರದ ಜಯನಗರ ನಿವಾಸಿಯಾದ ಕಾರ್ಯಪ್ಪ ಎಂಬವರ ಮನೆಯನ್ನು ಬಾಗಿಲು ಮುರಿದು ಕಳವು ಮಾಡಿ ಆರೋಪಿತರು ಸುಮಾರು ೨೫೬ ಗ್ರಾಂ ಚಿನ್ನ ಹಾಗೂ ೫ ಸಾವಿರ ನಗದು ಹಣ ಹಾಗೂ ೨೨ ರಿವಾಲ್ವರ್ ಹಾಗೂ ಮೂರು ಗುಂಡುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಸದರಿ ರಿವಾಲ್ವರ್‍ನು ಬಳಸಿ ಅರೋಪಿತರು ಇನ್ನಷ್ಟು ಕೃತ್ಯಗಳನ್ನು ಎಸಗುವ ಸಾಧ್ಯತೆಯಿದ್ದ ಕಾರಣ ಸದರಿ ಪ್ರಕರಣವನ್ನು ಪತೆ ಮಾಡುವ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಅಧಿಕ್ಷಕರು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರಾದ ಎಂ. ಮಹೇಶ್ ಹಾಗೂ ಮಡಿಕೇರಿ ನಗರ ವೃತ್ತದ ವೃತ್ತ ನಿರೀಕ್ಷಕರಾದ ಮೇದಪ್ಪ ರವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿದ್ದರು.
ಕಳವು ಪ್ರಕರಣದ ಅರೋಪಿರತನ್ನು ಪತ್ತೆ ಮಾಡುವಲ್ಲಿ ಎರಡೂ ತಂಡಗಳು ಮಾಹಿತಿ ಸಂಗ್ರಹಿಸುತ್ತಿರುವಾಗಲೇ ದಿನಾಂಕ ೨೮/೦೯/೧೭ ರಂದು ಮಡಿಕೇರಿ ನಗರದ ರೈಫಲ್ ರೇಂಜ್‌ನ ಎನ್.ಯು ಗೌತಮ್ ಎಂಬವರ ಮನೆಯ ಬಾಗಿಲು ಮುರಿದು ೭೨ ಗ್ರಾಂ ಚಿನ್ನಾಭರಣ ಹಾಗೂ ಒಂದು ಎಸ್ವಿವಿಎಲ್ ಕೋವಿಯನ್ನು ಕಳವು ಮಾಡಿದ್ದು ಈ ಬಗ್ಗೆ ಮಡಿಕೇರಿ ನಗರದಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮಡಿಕೇರಿ ನಗರದಲ್ಲಿ ನಡೆದ ಎರಡೂ ಪ್ರಕರಣಗಳಲ್ಲಿ ಅರೋಪಿತರು ರಿವಾಲ್ವರ್ ಹಾಗೂ ಬಂದೂಕನ್ನು ಕಳವು ಮಾಡಿದ್ದರಿಂದ ಇನ್ನಷ್ಟು ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಅಧೀಕ್ಷಕರು ಎರಡು ತಂಡಗಳಿಗೆ ತಿಳಿವಳಿಕೆಯನ್ನು ನೀಡಿದ್ದರು. ಪೊಲೀಶ್ ಅಧಿಕ್ಷಕರ ಮಾರ್ಗದಶನದಂತೆ ಕರ್ತವ್ಯ ನಿರತರಾದ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರು ಈ ಹಿಂದೆ ಮನೆಗಳನ್ನು ಪ್ರಕರಣಗಲ್ಲಿ ಜೈಲಿನಿಂದ ಬಿಡುಗಡೆಯಾದ ಆಸಾಮಿಗಳ ಬಗ್ಗೆ ಮಾಹಿತಿ ಸಂಘ್ರಹಿಸಿ. ಪ್ರಕರಣದ ಓರ್ವ ಆರೋಪಿ ಸಲೀಂನನ್ನು ಸೋಮವಾರಪೇಟೆಯಲ್ಲಿ ವಸಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆಯ ವೇಳೆ ಆರೋಪಿಯು ತನ್ನ ಸಹಚರರಾದ ಗರಗಂದೂರು ಗ್ರಾಮದ ಶಂತ್ ಹಾಗೂ ಸೋಮವಾರಪೇಟೆಯ ಅನಿಲ್ ಎಂಬುವವರ ಬಗ್ಗೆ ಸುಳಿವು ನೀಡಿರುತ್ತಾನೆ. ಆತನ ಮಾಹಿತಿಯನ್ನಾಧರಿಸಿ ಶರತ್ ಹಾಗೂ ಅನಿಲ್ ರವರನ್ನು ಗರಗಂದೂರು ಹಾಗೂ ಸುಂಠಿಕೊಪ್ಪದಲ್ಲಿ ವಶಕ್ಕೆ ಪಡೆದ ಜಿಲ್ಲಾ ಅಪರಾಧ ಪತ್ತೆ ದಳದ ತಂಡ ಮೂವರು ಅರೋಪಿರತನನ್ನು ತೀವ್ರ ವಿಚಾರಣೇಗೆ ಒಳಪಡಿಸಲಾಗಿ ಆರೋಪಿ ಸಲೀಂ. ಶರತ್ ಹಾಗೂ ಅನಿಲ್ ರವರ ಸೇರಿ ಗೋಣಿಕೊಪ್ಪ ನಗರದಲ್ಲಿ ಒಂದು ಹಾಗೂ ಮಡಿಕೇರಿ ನಗರದಲ್ಲಿ ೨ ಕಳವು ಮಾಡಿದ್ದು. ಸದರಿ ಕಳವುಗಳನ್ನು ಮಾಡಲು ಆಯುಧಗಳನ್ನು ಅರೋಪಿ ಅನಿಲ್‌ನು ಒದಗಿಸುತ್ತಿದ್ದನೆಂದು ಹಾಗೂ ಕಳವು ಮಾಡಿದ ಸ್ವತ್ತುಗಳನ್ನು ಶರತ್ ಹಾಗೂ ಅನಿಲ್ ಸೇರಿ ಶುಂಠಿಕೊಪ್ಪ ಹಾಗೂ ತಮಿಳಿನಾಡಿನ ವೆಲ್ಲೂರಿ ಜಿಲ್ಲೆಯ ಅಂಬೂರ್‍ನಲ್ಲಿ ಮಾರಿ ಬಂದ ಹಣವನ್ನು ಎಲ್ಲರೂ ಸೇರಿ ಹಂಚಿಕೊಂಡಿರುವ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ.
ಅಲ್ಲದೆ ಆರೋಪಿ ಸಲೀಂನು ತನ್ನ ಮತ್ತೊಬ್ಬ ಸಹಚರ ಸವಿನ್ ಎಂಬಾತನೊಂದಿಗೆ ಸೇರಿ ದಿನಾಂಕ ೦೩/೦೭/೧೭ ರಂದು ವಿರಾಜಪೇಟೆಯ ಅರಮೆರಿ ಗ್ರಾಮದ ಶ್ರೀಮತಿ ಅನುಸೂಯ ಎಂಬವರ ಮನೆಯ ಬಾಗಿಲು ಮುರಿದು ೭೦ ಸಾವಿರ ನಗದು ಹಾಗೂ ೩೨ ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿದ್ದು. ಸದರಿ ಚಿನ್ನಾಭರಣಗಳು ಸವಿನ್‌ನ ಬಳಿ ಇರುವುದಾಗಿ ಒಪ್ಪಿಕೊಂಡಿರುತ್ತಾನೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *