ನೀರು ನಿರ್ವಹಕನ ಮೇಲೆ ಹಲ್ಲೆ

Posted on: October 12, 2017

mdk11sdr2
ಸಿದ್ದಾಪುರ: ಅಮ್ಮತ್ತಿ ಕಾರ್ಮಾಡು ಗ್ರಾ.ಪಂಯ ನೀರು ನಿರ್ವಹಕನ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಯನ್ನು ಕೂಡಲೆ ಬಂಧಿಸಬೇಕೆಂದ್ದು ಗ್ರಾ.ಪಂ ನೌಕರರ ಸಂಘದ ಅಧ್ಯಕ್ಷ ಪಿ.ಆರ್. ಭರತ್ ಒತ್ತಾಯಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಅಮ್ಮತ್ತಿ ಕಾರ್ಮಾಡು ಗ್ರಾ.ಪಂಯ ನೀರು ನಿರ್ವಹಕ ಹರೀಶ್ ಎಂಬವರು ಕರ್ತವ್ಯ ಮುಗಿಸಿ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ಸಂದರ್ಭದಲ್ಲಿ ಅಮ್ಮತ್ತಿ ಕಾವಡಿ ನಿವಾಸಿ ಯೋರ್ವರು ಹರೀಶನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕ್ಕೆಯನ್ನು ಒಡ್ಡಿರುತ್ತಾರೆ. ಈ ಹಿನ್ನಲೆಯಲ್ಲಿ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ದ ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದರು ಕೂಡ ಈವರೆಗೂ ಆರೋಪಿಯನ್ನು ಬಂಧಿಸಿರುವುದಿಲ್ಲವೆಂದು ಆರೋಪಿಸಿದರು. ಆರೋಪಿಯು ರಾಜರೋಷವಾಗಿ ಸುತ್ತಡುತ್ತಿದ್ದಾರೆ. ಇವರನ್ನು ಕೂಡಲೆ ಬಂಧಿಸಬೇಕೆಂದ್ದು ಒತ್ತಾಯಿಸಿದ್ದಾರೆ. ಹಲ್ಲೆಗೆ ಒಳಗಾಗಿದ್ದ ನೀರು ನಿರ್ವಹಕ ಹರೀಶ್‌ರವರು ಕಳೆದ ೫ ದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಕೂಡ ಈವರೆಗೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯಾಗಲಿ ಪಿ.ಡಿ.ಓ. ಹಾಗೂ ಕಾರ್ಯದರ್ಶಿಯಾಗಲಿ ಹರೀಶ್‌ರವರ ಯೋಗಕ್ಷೇಮವನ್ನು ವಿಚಾರಿಸದೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದರು. ಇದಲ್ಲದೇ ಪಂಚಾಯಿತಿಯು ಕೂಡ ಹಲ್ಲೆ ನಡೆಸಿದ ಆರೋಪಿಯ ವಿರುದ್ದ ಪೋಲಿಸ್ ಠಾಣೆಗೆ ಪುಕಾರು ನೀಡಬೇಕೆಂದ್ದು ಒತ್ತಾಯಿಸಿದರು. ಆರೋಪಿಯನ್ನು ಬಂಧಿಸದಿದ್ದಲ್ಲಿ ಹಾಗೂ ಪಂಚಾಯಿತಿ ಹರೀಶನವರಿಗೆ ಸಹಕಾರ ನೀಡದಿದ್ದಲ್ಲಿ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *