ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಪಾಲಿಬೆಟ್ಟ ವಿಎಸ್ಎಸ್ಎನ್ ಬ್ಯಾಂಕಿನಲ್ಲಿ ಗೋಲ್ ಮಾಲ್ ಆರೋಪ

Posted on: October 17, 2017
IMG-20171016-WA0083ಸಿದ್ದಾಪುರ: ಪಾಲಿಬೆಟ್ಟ ವಿಎಸ್ ಎಸ್ ಎನ್ ಬ್ಯಾಂಕಿನಲ್ಲಿ ಗೋಲ್ ಮಾಲ್ ನಡೆದಿದ್ದು ಗ್ರಾಹಕರು ಅಡವಿಟ್ಟ ಚಿನ್ನವನ್ನೇ ನಕಲಿ ಮಾಡಲಾಗಿದೆ ಎಂಬುವುದಾಗಿ ನಾಗರೀಕ ಹೋರಾಟ ಸಮಿತಿ ಆರೋಪಿಸಿದೆ. ಅಕ್ಕ ಸಾಲಿಗನಿಂದ ಪರಿಶೀಲಿಸಿದ ಬಳಿಕ ಚಿನ್ನದ ಮೇಲೆ ಬ್ಯಾಂಕ್ ಸಾಲ ನೀಡಿದ್ದು ಇದೀಗ ಚಿನ್ನ ಬಿಡಿಸಲು ತೆರಳಿದ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ಕೃಷ್ಣ ನೀವು ಇಟ್ಟಿರುವ ಚಿನ್ನ ನಕಲಿಯಾಗಿದೆ ಎಂಬುವುದಾಗಿ ತಿಳಿಸಿದ್ದಾರೆ. ಮಾತ್ರವಲ್ಲ ನಿಮ್ಮ ಮೇಲೆ ಪೊಲೀಸ್ ದೂರು ನೀಡುತ್ತೇವೆ ಎಂದು ಬೆದರಿಸುತ್ತಿದ್ದಾರೆ ಎಂದು ನಾಗರೀಕ ಹೋರಾಟ ಸಮಿತಿ ಅಧ್ಯಕ್ಷ ಎ. ಮಹದೇವ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಲೈಲಾ ಎಂಬ ಮಹಿಳೆಯು ಬ್ಯಾಂಕಿನಲ್ಲಿ ಸದಸ್ಯತ್ವ ಹೊಂದಿರುವ ಕಾರಣ ಆಕೆಯ ಮುಖಾಂತರ ಹಲವರು ತಮ್ಮ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದಾರೆ. ಸಾಲಗಾರರಿಗೆ ಯಾವುದೇ ನೋಟೀಸ್ ನೀಡದೆ ಏಕಾಏಕಿ ಚಿನ್ನವನ್ನು ಹರಾಜಿಗೆ ಹಾಕಿದ್ದು, ಅದರ ವಿರುದ್ದ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ತಿಳಿಸಿದರು.
ನಾಗರೀಕ ಹೋರಾಟ ಸಮಿತಿ ಉಪಾಧ್ಯಕ್ಷ ನಾಸರ್ ಮಾತನಾಡಿ, ಬ್ಯಾಂಕ್ ಕಾರ್ಯದರ್ಶಿ ಈ ಹಿಂದೆಯೂ ಇದೇ ರೀತಿ ಚಿನ್ನವನ್ನು ನಕಲಿ ಮಾಡಿದ ಆರೋಪಗಳಿದ್ದು, ಗ್ರಾಮಸ್ಥರ ಒತ್ತಡಕ್ಕೆ ಮಣಿದು ಚಿನ್ನವನ್ನು ಹಿಂತಿರುಗಿಸಿದ್ದಾರೆ. ಲೈಲಾ ಎಂಬ ಮಹಿಳೆಯು ವಿಜಯಾ ಬ್ಯಾಂಕಿನಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಅವರಿಂದ ಬಿಡಿಸಿ ವಿಎಸ್ಎಸ್ಎನ್ ಬ್ಯಾಂಕಿನಲ್ಲಿ ಇಡಿಸಿದ್ದಾರೆ. ಇದೀಗ ಚಿನ್ನ ನಕಲಿ ಎಂಬುವುದಾಗಿ ಆಕೆಗೆ ತಿಳಿಸಿದ್ದು ಆಕೆ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾಳೆ. ಕೂಡಲೆ ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆ ಆಗ ಬೇಕೆಂದು ಒತ್ತಾಯಿಸಿದರು. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗ ಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಪಾಲಿಬೆಟ್ಟ ನಾಗರೀಕ ಹೋರಾಟ ಸಮಿತಿ ಸಹ ಕಾರ್ಯದರ್ಶಿ ತಂಗರಾಜ್, ಅಬ್ದುಲ್ ರಶೀದ್ ಮತ್ತು ಸದಸ್ಯ ಅಲೀಮ್ ಇದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *