ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಪ್ರತ್ಯೇಕ ಕಳವು ಪ್ರಕರಣ ಭೇದಿಸಿದ ಪೊಲೀಸರು

Posted on: October 16, 2017

IMG-20171016-WA0059ಮಡಿಕೇರಿ ನಗರದಲ್ಲಿ ಕಳೆದ ೩-೪ ತಿಂಗಳಿನಿಂದ ರಸ್ತೆ ಬದಿಯಲ್ಲಿ ಮತ್ತು ಮನೆಯ ಮುಂಧೆ ನಿಲಿಸಿದ್ದ ಮೋಟಾರು ಸೈಕಲ್‌ನ್ನು ಕಳ್ಳತನ ಮಾಡುತ್ತಿದ್ದ ಕೇರಶ ಮೂಲದ ೩ ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ. ಹಾಗೂ ಮಡಿಕೇರಿ ಉಪ ವಿಭಾಗದ ಉಪಾಧೀಕ್ಷಕರ. ಪೊಲೀಸ್ ವೃತ್ತ ನಿರೀಕ್ಷಕರು. ಮಡಿಕೇರಿ ನಗರ ವೃತ್ತರವರ ಮಾರ್ಗದರ್ಶನದಲ್ಲಿ ಬಂದಿಸುವಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ.

ದಿನಾಂಕ: ೧೦/೦೭/೧೭ ರಂದು ಮಡಿಕೇರಿ ನಗರದ ಅಮಿತ್‌ಕುಲಾರ್ ಅವರ ಕೆಎ-೧೨-ಎಲ್-೩೦೦೬ ರ ಯಮಹಾ ಎಫ್ಜೆಡ್ ಮೋಟಾರು ಸೈಕಲ್, ದಿ:೧೬/೦೮/೧೭ ರಂದು ನಗರದ ಎಂ.ಹೆಚ್.ಮುಸ್ತಾಫ ಎಂಬವರಿಗೆ ಸೇರಿದ ಕೆಎ-೧೨-ಕ್ಯೂ-೩೫೪೨ ರ ಬಜಾಜ್ ಪಲ್ಸರ್ ಮೋಟಾರು ಬೈಕ್ ಕಳ್ಳತನವಾದ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಗರ ಠಾಣೇಯ ಪಿಎಸ್‌ಐ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಆರೋಪಿಗಳ ಪತ್ತೆಯ ಬಗ್ಗೆ ತನಿಖೆ ಕೈಗೊಂಡಿದ್ದರು.
ಪ್ರಕರಣದ ತನಿಖೆಯ ಸಮಯದಲ್ಲಿ ದಿನಾಂಕ ೧೫/೧೦/೧೭ ರಂದು ಮಡಿಕೇರಿ ನಗರದ ರಾಜಾಸೀಟ್ ಬಳಿ ಕೆ.ಎಲ್ ೧೪ ಕ್ಯೂ ೩೦೭೩ ಸಂಖ್ಯೆತ ಒಂದು ಮಾರುತಿ ಅಲ್ಟೋ ೮೦೦ ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೇಗೆ ಒಳಪಡಿಸಲಾಗಿ ಸದ್ರಿ ವ್ಯಕ್ತಿಗಳು ಕೇರಳದ ಕಾಸರಗೋಡುವಿನಿಂದ ರಾತ್ರಿ ಸಮಯದಲ್ಲಿ ಕಾರಿನಲ್ಲಿ ಮಡಿಕೇರಿಗೆ ಬಂದು ಮೋಟಾರು ಸೈಕಲ್‌ಗಳನ್ನು ಕಳವು ಮಾಡಿಕೊಂಡು ಕೇರಳ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಡಿರುವುದು ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ. ನಂಥರ ಈ ವ್ಯಕ್ತಿಗಳಿಂದ ಕಳವು ಮಾಡಲು ಉಪಯೋಗಿಸಿದ ಕೆ.ಎಲ್-೧೪-ಕ್ಯೂ-೩೦೭೩ ಮಾರುತಿ ಆಲ್ಟೋ ೮೦೦ ಕಾರನ್ನು ವಶಪಡಿಸಿಕೊಂಡು ನಗರ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕೇರಳ ರಾಜ್ಯಕ್ಕೆ ತೆರಳಿ ಆರೋಪಿಗಳು ಕಳವು ಮಾಡಿರುವ ೩ ಮೋಟಾರು ಸೈಕಲ್‌ಗಳನ್ನು ವಶಪಡಿಸಿಕೊಂಡು ಬಂದಿರುತ್ತಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *