ಬೀಟೆ ನಾಟ ಸಾಗಾಟ ಇಬ್ಬರ ಬಂಧನ

Posted on: October 10, 2017

images (2) ಶನಿವಾರಸಂತೆ:- ಸೋಮವಾರಪೇಟೆ ವ್ಯಾಪ್ತಿಯ ಚಂದನಮಕ್ಕಿ ಕಾಫಿ ತೋಟವೊಂದರಿಂದ ಮಾರುತಿ ಸುಜುಕಿ ಕಾರ್ (ನಂ ಕೆಎ- 04 ಎಂ- 5873) ನಲ್ಲಿ 2.75 ಲಕ್ಷ ಮೌಲ್ಯದ ಒಣಗಿದ ಬೀಟೆ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಬೆಳಗ್ಗಿನ ಜಾವ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ ಕೊಟ್ರೇಶ್ ಹಾಗೂ ಸಿಬ್ಬಂದಿಗಳು ಧಾಳಿ ಮಾಡಿ ಇಬ್ಬರು ಆರೋಪಿಗಳು, ಕಾರು ಹಾಗೂ 6 ಬೀಟೆ ನಾಟಗಳನ್ನು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಾದ ಅಬ್ಬೂರುಕಟ್ಟೆಯ ದೊಡ್ಡ ಅಬ್ಬೂರು ಗ್ರಾಮದ ಗೋವರ್ಧನ್ (ಮೊದಲ ಪುಟದಿಂದ) ಹಾಗೂ ಚಂದನ ಮಕ್ಕಿ ಗ್ರಾಮದ ಕುಮಾರ್ ಅವರುಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂದನಕ್ಕೆ ಒಳಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ ಕೊಟ್ರೇಶ್ ಮಾಲಂಬಿ ಉಪವಲಯ ಆರಣ್ಯಧಿಕಾರಿ ಎಸ್.ಸಿ. ಗೋವಿಂಧರಾಜ್ ಅರಣ್ಯ ರಕ್ಷಕರಾದ ವೆಂಕಟೇಶ್, ಗಣೇಶ್, ರುಕ್ಮಯ್ಯಾ, ನವೀನ್, ದೇವಿಕಾ ಚಾಲಕರಾದ ಹರೀಶ್ ಕುಮಾರ್ ಭರತ್ ಪಾಲ್ಗೊಂಡಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *