ಬ್ರೇಕಿಂಗ್ ನ್ಯೂಸ್
ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಚಿರತೆ ದಾಳಿ ಕೊಟ್ಟಿಗೆಯಲ್ಲಿದ್ದ ಕರು ಸಾವು , ವಿರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ಅನುಷಾ ತನ್ನ ದೊಡ್ಡಪ್ಪನ ಮಗನೊಂದಿಗೆ ಆತ್ಮಹತ್ಯೆ , ಮಹಿಳಾ ಕಾಂಗ್ರೇಸ್ ಸಮಿತಿ ಪುನರ್ ರಚನೆ ಅಧ್ಯಕ್ಷರಾಗಿ ಮಂಜುಳಾ ಆಯ್ಕೆ , ಪರೇಶ್ ಸಾವಿನ ನಂತರ ಉದ್ವಿಗ್ನಗೊಂಡ ಉತ್ತರಕನ್ನಡ , ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ-ಸಂಕೇತ್ ಪೂವಯ್ಯ , ಅವಧಿಗೂ ಮುನ್ನ ಅರಳಿದ ಕಾಫಿ ಹೂಗಳು , ದಕ್ಷಿಣ ಕೊಡಗಿನಲ್ಲೂ ವಾಹನ ದಟ್ಟಣೆ , ವರ್ಷಾ ರಾಜ್ಯ ಮಟ್ಟದ ಸ್ಪೆಲ್ಬಿ ಸ್ಪರ್ಧೆಯಲ್ಲಿ ತ್ರತೀಯ ಹಾಗು ಕೊಡಗಿಗೆ ಪ್ರಥಮ , ಎಸ್ ಬಿ ಐ ವಿರುದ್ಧ ಸಾರ್ವಜನಿಕರ ಆಕ್ರೋಶ , ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ,

ಮಡಿಕೇರಿ : ದಸರಾ ಸಂಭ್ರಮದ ವೇಳೆ ಯುವಕನ ಕಗ್ಗೊಲೆ

Posted on: October 2, 2017

images (3)ಮಡಿಕೇರಿ: ಇಲ್ಲಿ ನಡೆಯುತ್ತಿದ್ದ ದಸರಾ ಸಂಭ್ರಮದ ಮೆರವಣಿಗೆ ವೇಳೆ ಯುವಕನೊಬ್ಬನನ್ನು  ದುಷ್ಕರ್ಮಿಗಳು ಹೊಂಚು ಹಾಕಿ ಬರ್ಬರವಾಗಿ ಇರಿದು ಕೊಲೆಗೈದಿದ್ದಾರೆ. ದಶ ಮಂಟಪ ಆಚರಣೆ ನಡೆಯುತ್ತಿದ್ದ ವೇಳೆ ಕನ್ನಿಕಾ ಪರಮೇಶ್ವರಿ ದೇಗುಲದ ಬಳಿ ಘಟನೆ ನಡೆದಿದ್ದು ,  ಭಾನುವಾರ ನಸುಕಿನ 2.30 ರ ವೇಳೆ ಹೊಂಚು ಹಾಕಿ ಇರಿದು ಹತ್ಯೆಗೈಯಲಾಗಿದೆ. ರಾಜೇಶ್ವರಿ ನಗರ ನಿವಾಸಿ ಚಂದ್ರಶೇಖರ್‌ ಎನ್ನುವ 26 ವರ್ಷದ ಆಟೋ ಚಾಲಕ ಹತ್ಯೆಗೀಡಾದ ವ್ಯಕ್ತಿ. ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು , ದುಷ್ಕರ್ಮಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಯಾರಿಗೂ ತಿಳಿಯದಂತೆ ಜನ ಸಮೂಹದ ಮಧ್ಯೆಯೇ ಕೊಲೆ ಮಾಡಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *