ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಸಿಎನ್‌ಸಿ ಜನಜಾಗ್ರತಿ ಸಭೆ

Posted on: October 16, 2017

IMG_0059 IMG_0071
ಚೆಟ್ಟಳ್ಳಿ: ವಿಶಿಷ್ಟವಾದ ಭಾಷೆ, ಆಚಾರ ವಿಚಾರ, ಉಡುಪು ತೊಡುಪು ಹಾಗೂ ಪದ್ಧತಿಯನ್ನೆಲ್ಲ ಪರಂಪರಾಗತವಾಗಿ ಹೊಂದಿರುವ ಕೊಡಗಿನ ಮೂಲನಿವಾಸಿಗಳಾದ ಕೊಡವರು ಬುಡಕಟ್ಟು ಜನಾಂಗಕ್ಕೆ ಒಳಪಟ್ಟಿದ್ದರಾದರೂ ಸಂವಿದಾನದ ಸೇಡ್ಯೂಲ್ ಪಟ್ಟಿ ಪಟ್ಟಿಯಲ್ಲಿ ಸೇರಿಸ ಬೇಕೆಂದು ಹಕ್ಕೋತ್ತಾಯ ಏರಬೇಕು, ಅದಕ್ಕಾಗಿ ಕೊಡವರು ತಮ್ಮ ಆತ್ಮಶಕ್ತಿಯ ಮೂಲಕವೇ ಕೊಡವ ನಾಡಿನ ಹಕ್ಕನ್ನು ಪಡೆಯಲು ಸಾಧ್ಯವೆಂದು ಸಿಎನ್‌ಸಿ ಸಂಚಾಲಕ ನಂದಿನೆರವಂಡ ನಾಚಪ್ಪ ಕೊಡವ ಆಗ್ರಹಿಸಿದ್ದಾರೆ.
ಮೈಸೂರಿನ ಮಹಾರಾಜ ಎದುವೀರ್‌ನ ಹೆಂಡತಿ ತ್ರಿಶಿಕಾಳ ಸ್ವೌರಾಪ್ಟ್ರದ ದುಂಗಾರ್‌ಪುರ್ ರಾಜ ಮನೆತನಕ್ಕೆ ಸೇರಿದ್ದವರಿಗೆ ಬುಡಕಟ್ಟು ಪಟ್ಟಿಯ ಸ್ಥಾನಮಾನವಿದೆ. ಲಂಡನ್ನ್ ವಿಶ್ವವಿದ್ಯಾನಿಲಯದ ಪಧವೀಧರ ಮಾಜಿ ಲೋಕಸಭಾ ಸ್ಪೀಕರ್ ದಿ. ಪಿ.ಎ ಸನ್ಮಾವರರು ಗಾರೋ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಮೇಜರ್. ಜೈಪಾಲ್ ಸಿಂಗ್ ಮುಂಡಾರವರ ಇಡೀ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನವಿದೆ. ಇಂಗ್ಲೇಂಡಿನಲ್ಲಿ ವ್ಯಾಸಂಗಮಾಡಿರುವ ಕೇಂದ್ರ ಗ್ರಹಖಾತೆ ಸಹಾಯಕ ಮಂತ್ರಿ ಅರಣಾಚಲ ಪ್ರದೇಶದ ಮೋನ್‌ಪಾ ಬುಡಕಟ್ಟಿಗೆ ಸೇರಿದ್ದವರಾಗಿದ್ದಾರೆ.೩೦ ಸಾವಿರ ಹೆಕ್ಟೇರ್ ಚಹಾ ತೋಟ ಹೊಂದಿರುವ ಅಗರ್ಭ ಶ್ರೀಮಂತ ಅರುಣಾಚರ ಪ್ರದೇಶದ ಮಾಜಿ ಮುಖ್ಯಮಂತ್ರಿ ಗೇಂಗಾಗ್ ಅಪಾಂಗ್‌ರವರು ಆದಿಬುಡಕಟ್ಟು ಜನಾಂಗಕ್ಕೆ ಸೇರಿದವರೇ. ಇಡೀ ಕೊಡಗಿನ ಮತ್ತು ಕೊಡವರ ಒಟ್ಟು ಆಸ್ತಿಯ ಒಬ್ಬ ಶ್ರೀರಾಮಲು, ಒಬ್ಬ ಜಾರಕೀಹೊಳಿ ಇದ್ದು ಇವರುಗಳು ಕೂಡ ನಾಯಕ್ ಬುಡಕಟ್ಟು ಜನಾಂಗದವರು. ಟಿಬೇಟಿಯನ್ನ್ ಧರ್ಮಗುರು ದಲೈಲಾಮ, ನೆಲ್ಸನ್‌ಮಡೆಲ ರಂತವರು ತಮ್ಮ ಜನಾಂಗದ ಹೋರಾಟಕ್ಕೆ ಮುಂದಾಗಿ ವಿಶ್ವದಲ್ಲೇ ಹೆಸರುಗಳಿಸಿದ್ದಾರೆ. ನೇಷನಲ್ ಮೈನಾರಿಟಿಗೆ ಸೇರುವ ಕೊಡವರ ಹಕ್ಕತೋತ್ತಾಯ ಹೋರಾಟ ರಾಜ್ಯದಿಂದಿಡಿದು ಕೇಂದ್ರದವರೆಗೆ ತಲುಪಲು ಸಿಎನ್‌ಸಿ ಸಂಘಟನೆ ಶ್ರಮಿಸಿದೆ.
ಅಲ್ಪ ಸಂಖ್ಯಾತಾಗುತಿರುವ ಕೊಡವರು ಬೆಟ್ಟಗುಡ್ಡಗಳಲ್ಲಿ ವಾಸವಿದ್ದು, ವಿಶಿಷ್ಟ ಭಾಷೆ, ಜನಪದ, ಉಡುಗೆ ತೊಡುಗೆ, ಐನ್‌ಮನೆ, ಮಂದ್‌ಮಾನಿ ತೂಟ್‌ಗಳ(ಸ್ಮಸಾನ)ಗಳೊಂದಿದ್ದು ಹಾಗು ಹಬ್ಬಹರಿದಿನಗಳಲ್ಲಿ ಗೆಡ್ಡೆಗೆಣಸಿನಿಂದ ಮಾಡುವ ಖಾದ್ಯಗಳನ್ನು ಸವಿಯುವ ಸಂಸ್ಕ್ರತಿಯಾಗಿದ್ದು ಬುಡಕಟ್ಟು ಜನಾಂಗಕ್ಕೆ ಸಂವಿಧಾನದ ವಿಧಿ ಅನ್ವಯ ಸ್ಥಾನಮಾನ ಸಿಗಲೇ ಬೇಕೆಂದು ಕೊಡವ ನ್ಯಾಶ್ನಲ್ ಕೌಂಸಿಲ್(ಸಿಎನ್‌ಸಿ) ಸಂಘಟನೆ ಕಳೆದ ೨೭ ವರ್ಷಗಳಿಂದ ಹೋರಾಟ ಮಾಡುತ್ತಾ ಬರುತಿದೆ. ಪ್ರಾರಂಭದಿಂದ ಈ ವರೆಗೂ ಹಕ್ಕೋತ್ತಾಯಕ್ಕಾಗಿ ಹಲವು ಪಾದಯಾತ್ರೆಗಳು,ದೆಹಲಿ ಹಾಗು ಬೆಂಗಳೂರು ರ್‍ಯಾಲಿಗಳು, ರಾಜ್ಯ ಹಾಗು ಕೇಂದ್ರಸರಕಾರಕ್ಕೆ ಕೊಡವರಿಗೆ ಸಲ್ಲಿಕೆಯಾಗಬೇಕಾದ ಹಕ್ಕೋತ್ತಾಯದ ಮನವಿ ಸಲ್ಲಿಸುವುದರ ಜೊತೆಗೆ ಹಲವು ಬಾರಿ ರಾಜ್ಯಪಾಲರ ಜೊತೆ ಖದ್ದಾಗಿ ಬೇಟಿಮಾಡಿ ನಮ್ಮ ನ್ಯಾಯಯುತ ಹೋರಾಟಕ್ಕೆ ಸಹಕಾರದ ಭರವಸೆಯನ್ನು ಪಡೆದಿದ್ದೇವೆ. ಆದರೆ ಹೋರಾಟದ ಫಲವಾಗಿ ೩೮ ಕೇಸುಗಳು ಹಾಗು ಕ್ರಿಮಿನಲ್ಲ್ ಕೇಸ್ ದಾಖಲಾಗುತದೆಯಾದರೂ ಹೋರಾಟದ ಕಿಚ್ಚುನ್ನು ಕಡಿಮೆಮಾಡಲು ಯಾರಿಂದಲೂ ಸಾಧ್ಯವ್ಶಗಿಲ್ಲವೆಂದು ನಾಚಪ್ಪನವರು ಹೇಳಿದರು.
ಕೊಡವರ ಹಕ್ಕೋತ್ತಾಯದ ಬಗ್ಗೆ ಹೋರಾಟದ ಫಲವಾಗಿ ಸರಕಾರ ಎತ್ನೋಗ್ರಾಫಿಕ್ ಸರ್ವೆ ಕಾರ್ಯ ಪ್ರಾರಂಭಸಿದೇ ಯಾದರೂ ಫಲಕಾರಿಯಾಗಲು ಬಿಡಲಿಲ್ಲ. ಸರ್ವೆ ಕಾರ್ಯ ನಡೆದಿದಿದ್ದರೆ ಕೊಡವರ ಮಾಹಿತಿ ಸರಕಾರಕ್ಕೆ ದೊರೆತು ಅನೂಕೂಲವಾಗುತಿತ್ತು.ಕೆಲವರು ಹೋರಾಡದ ವಿರುದ್ದ ಪಿತ್ತೂರಿ ಮಾಡುತಲೇ ಕೊಡವರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತಾ ತೊಗಲುಗೊಂಬೆಯಂತೆ ಆಡಿಸಲು ಹೊರಟಿದ್ದಾರೆ. ಒಂದೆಡೆಯಾದರೆ ಬುಡಕಟ್ಟು ಜನಾಂಗವೆಂದ್ದು ಒಪ್ಪದವರು ಕೆಲವರಿದ್ದಾರೆ. ವಿಶ್ವದ ಎಲ್ಲಮೂಲೆಯಲ್ಲೂ ನೋಡಿದರೆ ಬುಡಕಟ್ಟು ಜನಾಂಗವರೇ ಅಧಿಕಾರ ಹೊಂದಿರುವುದು ಕಾಣಬರುತಿದೆ.
ವಿಶ್ವದಲ್ಲಿ ಹೋಮ್‌ಲ್ಯಾಂಡಿಗೆ ಅರ್ಹತೆ ಇಲ್ಲದ ಅದೇಷ್ಟೋ ಜನಾಂಗ ಹೋರಾಡುತಿದ್ದಾರೆ. ಆದರೆ ಎಲ್ಲಾ ಬಗೆಯಲ್ಲೂ ನೋಡಿದ್ದಾಗ ಒಂದೇ ಪ್ರದೇಶದಲ್ಲಿ ವಾಸವಿರುವಂತ ಕೊಡವ ಹಾಗು ಗೂರ್ಖ ಜನಾಂಗ ನೇಷನಲ್ಲ್ ಮೈನಾರಿಟಿಗೆ ಅರ್ಹವಾಗಿದೆ. ವಿಶ್ವಸಂಸ್ಥೆಗೆ ಪ್ರತೀ ತಿಂಗಳು ಸಿಎನ್‌ಸಿ ವತಿಯಿಂದ ಸಂಪೂರ್ಣ ಕೊಡವರ ಹಕ್ಕೊತ್ತಾಯದ ಮಾಹಿತಿಯನ್ನು ಕಳುಹಿಸಲಾಗುತಿದ್ದು ಕೊಡವರಿಗೆ ನ್ಯಾಷಿನಲ್ಲ್ ಮೈನಾರಿಟಿ ಹಾಗು ಬುಡಕಟ್ಟು ಜನಾಂಗದ ಸ್ಥಾನಮಾನ ದೊರೆತರೆ ಕೊಡವ ಜನಾಂಗಕ್ಕೆ ತನ್ನದೇ ಅಧಿಕಾರ, ಭದ್ರತೆ ಸೌಲತ್ತುಗಳು ದೊರೆಯಲಿದೆಂದು ನಾಚಪ್ಪ ಹೇಳಿದರು.
ಕೊಡವರನ್ನು ಹೀನಾಯವಾಗಿ ನರಮೇದ ಗೊಳಿಸಿದ ದೇವಟ್ಟಿಪರಂಬಿನಲ್ಲಿ ಪೂರ್ವಜರ ನೆನಪಿಗಾಗಿ ಸಮಾಧಿಯನ್ನು ನಿರ್ಮಿಸಲು ವಿರೋಧ ಜೊತೆಗೆ ಟಿಪ್ಪುವಿನ ಜಯಂತಿ ಅಚರಣೆಯ ಉದ್ದೇಶವೇನೆಂಬುದು ಕೊಡವರು ತಿಳಿಯ ಬೇಕಿದೆ. ಕೊಡಗಿನ ರಾಜಕಾರಣಿಗಳು ಒಕ್ಕೋರಳಿನಿಂದ ಟಿಪ್ಪುಜಯಂತಿ ಕೊಡಗಿನಲ್ಲಿ ಆಚರಿಸಬೇಡವೆಂದು ರಾಜಕೀಯ ಬಿಟ್ಟು ಆತ್ಮಗೌರವದಿಂದ ಒತ್ತಾಯಿಸಬೇಕೆಂದರು.
ಕೊಡವ ನ್ಯಾಷನಲ್ ಡೇ: ಪ್ರತೀ ವರ್ಷದಂತೆ ಈ ವರ್ಷ ನವಂಬರ್ ೨೬ರ ಅದಿತ್ಯವಾರ ಮಡಿಕೇರಿಯಲ್ಲಿ ನಡೆಯುವ ಕೊಡವ ನ್ಯಾಷನಲ್ಲ್ ಡೇ ಯಲ್ಲಿ ಭಾಗವಹಿಸಿ ಕೊಡವ ಜನಾಂಗದ ಹಕ್ಕೋತ್ತಾಯವನ್ನು ಸರಕಾರದ ಗಮನ ಹರಿಸಲು ಜೈಜೋಡಿಸ ಬೇಕಿದೆಂದರು.
ವೇದಿಕೆಯಲ್ಲಿ ನಿವ್ರತ್ತ ಡಿವೈಎಸ್ಪಿ ಪುತ್ತರಿರ ಟುಟ್ಟು ಕಾರ್ಯಪ್ಪ, ನಿವ್ರತ್ತಕ್ಯಾಪ್ಟನ್ನ್ ಮುಳ್ಳಂಡ ಪ್ರಭಕತಿಮ್ಮಯ್ಯ, ಪೊರಿಮಂಡ ದಿನಮಣಿ ಪೂವಯ್ಯ ಹಾಜರಿದ್ದರು. ಪೊರಿಮಂಡ ದಿನಮಣಿ ಪೂವಯ್ಯ ಸ್ವಾಗತಿಸಿ, ಮುಳ್ಳಂಡ ಪ್ರಭಕತಿಮ್ಮಯ್ಯ ವಂದಿಸಿದರು. ಚೆಟ್ಟಳ್ಳಿಗೆ ಒಳಪಟುವ ಚೇರಳ ಶ್ರೀಮಂಲ, ಈರಳೆವಳಮುಡಿ, ಕೂಡ್ಲೂರುಚೆಟ್ಟಳ್ಳಿಯ ಗ್ರಾಮಸ್ಥರು ಭಾಗವಹಿಸಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *