ಹುಲಿರಾಯ

Posted on: October 7, 2017

hulirayaಅರವಿಂದ್‌ ಕೌಶಿಕ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಹುಲಿರಾಯ’ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ಕೆ.ಎನ್‌. ನಾಗೇಶ್‌ ಕೋಗಿಲು ಅವರ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರವನ್ನು ಪುಷ್ಕರ್‌ ಮಲ್ಲಿಕಾರ್ಜುನ ವಿತರಣೆ ಮಾಡುತ್ತಿದ್ದಾರೆ.

ಕಾಡಿನಂಚಿನ ವ್ಯಕ್ತಿಯೊಬ್ಬ ನಾಡಿಗೆ ಬಂದಾಗಿ ಅವನ ತವಕ ತಲ್ಲಣಗಳು ಹೇಗಿರುತ್ತವೆ ಅನ್ನುವುದೇ ಸಿನಿಮಾದ ಕತೆ. ಅದನ್ನು ಹೊಸ ರೀತಿಯಲ್ಲಿ ಹೇಳಲು ಹೊರಟಿದ್ದಾರಂತೆ ನಿರ್ದೇಶಕರು. ಬಾಲು ನಾಗೇಂದ್ರ ನಾಯಕನಾಗಿ ನಟಿಸಿದ್ದು, ದಿವ್ಯಾ ಉರುಡುಗ, ಚಿರಶ್ರೀ ಅಂಚನ್‌, ನವರಸ ರಾಮಕೃಷ್ಣ, ರೇಣು, ನಾಗೇಂದ್ರ ಕುಮಾರ್‌, ಕುಲದೀಪ್‌ ಮುಂತಾದವರ ತಾರಾಗಣ ಈ ಸಿನಿಮಾದಲ್ಲಿದೆ.

ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರವಿ ಅವರ ಸಿನಿಮಾಟೋಗ್ರಫಿಯಲ್ಲಿ ಚಿತ್ರ ಮೂಡಿ ಬಂದಿದ್ದು, ಅರ್ಜುನ್‌ ರಾಮು ಸಂಗೀತ ನೀಡಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *