Posted on: November 26, 2017
ನಾಪೋಕ್ಲು : ಮಂಗಳೂರು ವಿವಿ ಮತ್ತು ಮೂಡ ಬಿದಿರೆ ಆಳ್ವಾಸ್ ಕಾಲೇಜು ಆಶ್ರಯದಲ್ಲಿ ಆಳ್ವಾಸ್ ಸಂಸ್ಥೆಯಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿವಿ ಮಹಿಳಾ ಕಬ್ಬಡಿಯಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ತೃಪ್ತಿ ಪೆರುಮುಂಡ ಬೆಸ್ಟ್ ರೈಡರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರು ಪೆರಾಜೆ ಗ್ರಾಮದ ಪೆರುಮುಂಡ ಗಂಗಾಧರ ಮತ್ತು ಸಮತಿ ದಂಪತಿಗಳ ಪುತ್ರಿ . ತೃಪ್ತಿ ಕುಂಬಳಚೇರಿ ಹಿ.ಪ್ರಾ.ಶಾಲೆ ಮತ್ತು ಜ್ಯೋತಿ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಜ್ಯೋತಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರಮೇಲು ರವರ ತರಬೇತಿಯರಡಿಯಲ್ಲಿ ಪ್ರೌಢ ಶಾಲಾ ಹಂತದಲ್ಲಿ ಬೆಳೆದವಳು. ಈಕೆ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿನಿ.