ಆಟೋ ಬಾಡಿಗೆ ವಿಷಯದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

Posted on: November 17, 2017

ಮಡಿಕೇರಿ ನಗರ ನಿವಾಸಿ ಆಟೋ ಚಾಲಕ ಪಿ.ಎಂ. ಹಸನ್ ಎಂಬವರು ತಮ್ಮ ಬಾಪ್ತು ಆಟೋ ರಿಕ್ಷಾದಲ್ಲಿ ನಗರದ ಕಾವೇರಿ ಹಾಲ್ ಬಳಿಯಿಂದ ಮಡಿಕೇರಿ ನಗರದ ವಿದ್ಯಾನಗರ ನಿವಾಸಿ ರಮೇಶ ಎಂಬವರನ್ನು ಬಾಡಿಗೆಗೆ ಐ.ಟಿ.ಐ. ಜಂಕ್ಷನ್ ಗೆ ಕರೆದುಕೊಂಡು ಹೋಗಿದ್ದು, ಬಳಿಕ ಬಾಡಿಗೆ ಹಣ ನೀಡುವ ವಿಚಾರದಲ್ಲಿ ಸದರಿ ರಮೇಶ್ ರಿಕ್ಷಾ ಚಾಲಕನೊಂದಿಗೆ ಜಗಳ ಮಾಡಿ ಹಣವನ್ನು ನೀಡಿದ್ದು, ಚಾಲಕ ರಿಕ್ಷಾವನ್ನು ನಗರದ ಕಡೆಗೆ ತಿರುಗಿಸಿದ ಸಂದರ್ಭದಲ್ಲಿ ಆರೋಪಿ ರಮೇಶ ಕಲ್ಲೊಂದರಿಂದ ಚಾಲಕನ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *