ಕಾರು ಅಪಘಾತ:

Posted on: November 17, 2017
images (3)
    ವಿರಾಜಪೇಟೆ ತಾಲೋಕು ಪಾಲಿಬೆಟ್ಟ ನಿವಾಸಿ ವಿವೇಕ್ ಜೋಯಪ್ಪ ಎಂಬವರ ಪತ್ನಿ ಶ್ರೀಮತಿ ರಿಷಿಕ ವಿವೇಕ್ ಎಂಬವರು  ಕೆಎ 12 ಎನ್ 8068 ರ ಕಾರಿನಲ್ಲಿ ಮಗಳು ಸಾಕ್ಷಿಯನ್ನು ಕೂರಿಸಿಕೊಂಡು ಗೋಣಿಕೊಪ್ಪದ ಕಾಲ್ಸ್ ಶಾಲೆಯ ಕಡೆಗೆ  ಹೋಗುತ್ತಿದ್ದಾಗ ಸಿದ್ದಾಪುರ ಠಾಣಾ ಸರಹದ್ದಿಗೆ ಸೇರಿದ ಪಾಲಿಬೆಟ್ಟ ಟಾಟಾ ಕಂಪೆನಿಗೆ ಸೇರಿದ ಕೋಟೆಬೆಟ್ಟ ಕಾಫಿ ತೋಟದ ಮುಂಭಾಗದ ರಸ್ತೆಯ ಹತ್ತಿರ ರಸ್ತೆಯ ಬಲಭಾಗದಿಂದ ದನವೊಂದು ಅಡ್ಡ ಬಂದ ಕಾರಣ ಕಾರಿನ ನಿಯಂತ್ರಣ ಕಳೆದುಕೊಂಡ ಕಾರಣ ಕಾರು ರಸ್ತೆಯ ಎಡಭಾಗದಲ್ಲಿದ್ದ ವಿದ್ಯುತ್ ಚ್ಛಕ್ತಿ ಕಂಬಕ್ಕೆ ಡಿಕ್ಕಿಯಾಗಿ ಕಂಬ ಮುರಿದು ಬಿದ್ದು, ಕಾರು ಎಡಭಾಗದ ಬರೆಗೆ ಡಿಕ್ಕಿಯಾಗಿ ಮಗುಚಿಕೊಂಡು ಕಾರು ಜಖಂಗೊಂಡಿದ್ದು ಕಾರಿನಲ್ಲಿದ್ದವರು ಯಾವುದೇ ಅಪಾಯದಿಂದ ಪಾರಾಗಿರುತ್ತಾರೆ. ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *