ಜೀಪು ಮಗುಚಿ ವ್ಯಕ್ತಿಗೆ ಗಾಯ

Posted on: November 18, 2017
 images (4) ಮಡಿಕೇರಿ ಬಳಿಯ ಬೆಟ್ಟಗೇರಿ ನಿವಾಸಿ ಷರೀಫ್ ಎಂಬವರಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಶಶಿಕುಮಾರ್ ಎಂಬವರು ರಫೀಕ್ ಎಂಬವರ ಪಿಕ್‌ಅಪ್ ಜೀಪು ಸಂಖ್ಯೆ ಕೆಎ-12-ಎ-9953ರಲ್ಲಿ ಮಂಜು ಎಂಬವರೊಡನೆ ಅಮ್ಮತ್ತಿಗೆ ಹೋಗುತ್ತಿರುವಾಗ ಮೂರ್ನಾಡು ಬಳಿಯ ಬೊಳಿಬಾಣೆ ಎಂಬಲ್ಲಿ ಚಾಲಕ ರಫೀಕ್ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಜೀಪು ರಫೀಕ್‌ನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಕೊಂಡ ಪರಿಣಾಮ ಶಶಿಕುಮಾರ್‌ ಮತ್ತು ಮಂಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *