ಡಿವೈಎಸ್‌ಪಿ ಆತ್ಮಹತ್ಯೆ: ಸಿಬಿಐ ತಂಡದಿಂದ ತೀವ್ರ ವಿಚಾರಣೆ

Posted on: November 16, 2017

kod (1)ಮಡಿಕೇರಿ: ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತನಿಖಾ ತಂಡವು ಮಂಗಳವಾರ ನಗರದ ವಿನಾಯಕ ವಸತಿ ಗೃಹಕ್ಕೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿ ಪರಿಶೀಲಿಸಿತು.

ಚೆನ್ನೈ ಸಿಬಿಐ ಕಚೇರಿಯ ತನಿಖಾಧಿಕಾರಿ ತಲೈಮಣಿ ನೇತೃತ್ವದ ತಂಡವು ಬೆಳಿಗ್ಗೆ 10ಕ್ಕೆ ವಸತಿಗೃಹಕ್ಕೆ ಭೇಟಿ ನೀಡಿ ಸಿಬ್ಬಂದಿಯಿಂದ ಹೇಳಿಕೆ ಪಡೆಯಿತು. ಇನ್‌ಸ್ಪೆಕ್ಟರ್‌ ಮೇದಪ್ಪ, ಎಸ್ಐ ಭರತ್‌, ಮರಣೋತ್ತರ ಪರೀಕ್ಷೆ ನಡೆಸಿದ್ದ ಜಿಲ್ಲಾ ಆಸ್ಪತ್ರೆಯ ಡಾ.ಶೈಲಜಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದರು.

ಗಣಪತಿ ಸಹೋದರ ಎಂ.ಕೆ.ಮಾಚಯ್ಯ ಹಾಗೂ ಪ್ರಮುಖ ಸಾಕ್ಷಿಗಳಾದ ಬೆಳ್ಯಪ್ಪ, ಜಗನ್‌ ಅವರಿಂದ ಹೇಳಿಕೆ ಪಡೆದರು. ಸಂಜೆ ದೆಹಲಿಯಿಂದ ಬಂದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಮುಚ್ಚಲಾಗಿದ್ದ ಕೊಠಡಿ ಸಂಖ್ಯೆ 315ರ ಬಾಗಿಲು ತೆಗಿಸಿ ಪರಿಶೀಲನೆ ನಡೆಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *