‘ಬೇತಾಳ’

Posted on: November 28, 2017
   file6xqij6i0z6bejyg6d4fಬೆಂಗಳೂರು: ಈ ಸಿನಿಮಾದ ಹೆಸರು ‘ಬೇತಾಳ’. ಇದರ ನಿರ್ಮಾಪಕರು ಶಿವಕುಮಾರ್ ಬಿ.ಕೆ. ಇದು ಹಾರರ್ ಲೇಪ ಇರುವ ಹಾಸ್ಯ ಪ್ರಧಾನ ಚಿತ್ರ ಎಂದು ಸಿನಿಮಾ ತಂಡ ಹೇಳಿದೆ. ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ಬೆಂಗಳೂರಿನ ಯಶವಂತಪುರದ ಶನೇಶ್ವರ ದೇವಸ್ಥಾನದಲ್ಲಿ ಈಚೆಗೆ ನಡೆಯಿತು.

ಶ್ರೀಧರ್, ಸ್ಮೈಲ್‍ ಶಿವು ಹಾಗೂ ಸೋಮಗೌಡ ಅಭಿನಯದ ಮೊದಲ ದೃಶ್ಯದ ಚಿತ್ರೀಕರಣ ಕೂಡ ನಡೆದಿದೆ. ಜಗನ್ನಾಥ್‍ ಕೆಸ್ತೂರು ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಮಡಿಕೇರಿ ಹಾಗೂ ವಿಜಯಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

ಹೊಸ ಮನೆಗೆ ಬಾಡಿಗೆಗೆ ಬಂದ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬನಿಗೆ ಅಲ್ಲಿರುವ ದೆವ್ವವೊಂದು ಯಾವ ರೀತಿ ಕಾಟ ಕೊಡುತ್ತದೆ, ಕೊನೆಗೆ ಆತ ಅಲ್ಲಿಂದ ಹೇಗೆ ಹೊರಗೆ ಬರುತ್ತಾನೆ ಎಂಬುದೇ ಈ ಸಿನಿಮಾದ ಕಥಾ ಹಂದರ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ರಾಜ್‍ಕಿಶೋರ್ ಸಂಗೀತ ಈ ಚಿತ್ರಕ್ಕೆ ಇರಲಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *