ವೈಶಾಖಿಣಿ

Posted on: November 8, 2017

Vaishaakiniಅನಿತಾ ಭಟ್‌ ಖುಷಿಯಾಗಿದ್ದಾರೆ. ಅವರ ಖುಷಿಗೆ ಕಾರಣ “ವೈಶಾಖಿಣಿ’. ಯಾರೀ ವೈಶಾಖಿನಿ ಎಂದರೆ ಸಿನಿಮಾ ಬಗ್ಗೆ ಹೇಳಬೇಕು. ಹೌದು, ಅನಿತಾ ಭಟ್‌ ವೈಶಾಕಿನಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಇಡೀ ಸಿನಿಮಾ ಅವರ ಸುತ್ತವೇ ಸಾಗುವುದರಿಂದ ಈ ಅವಕಾಶಕ್ಕಾಗಿ ಖುಷಿಯಾಗಿದ್ದಾರೆ. ಅಂದಹಾಗೆ, ವೈಶಾಕಿನಿ ಪೌರಾಣಿಕ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಅನಿತಾ ಇಲ್ಲಿ ರಾಣಿಯಾಗಿ ಕಾಣಿಸಿಕೊಂಡಿದ್ದಾರೆ.

ತೆರೆಮೇಲೆ ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವ ಜೊತೆಗೆ ಚಿತ್ರದ ನಾಯಕನ ಜೊತೆ ರೊಮ್ಯಾನ್ಸ್‌ ಕೂಡಾ ಮಾಡಿದ್ದಾರಂತೆ. “ನಾನು ಯಾವ ಹೀರೋ ಜೊತೆಯೂ ರೊಮ್ಯಾನ್ಸ್‌ ಮಾಡಿಲ್ಲ. ಆದರೆ, ಈ ಸಿನಿಮಾದಲ್ಲಿ ಸಾಕಷ್ಟು ರೊಮ್ಯಾಂಟಿಕ್‌ ದೃಶ್ಯಗಳಿವೆ. ಒಳ್ಳೆಯ ಪಾತ್ರ ಸಿಕ್ಕಿದೆ’ ಎಂದು ಖುಷಿಯಿಂದ ಹೇಳಿಕೊಂಡರು. ಚಿತ್ರದಲ್ಲಿ ಅನಿತಾ ಭಟ್‌ ರಾಣಿಯಾಗಿ ಕಾಣಿಸಿಕೊಂಡಿದ್ದಾರೆ.

ರಾಜ-ರಾಣಿ ಮಧುಚಂದ್ರಕ್ಕೆ ತೆರಳಿದ ವೇಳೆ ರಾಣಿಯ ಮೇಲೆ ಆಸೆ ಬೀಳುವ ರಿಷಿ ಕುಮಾರ್‌ ಎಲ್ಲರನ್ನು ಸಾಯಿಸುತ್ತಾ ಬರುತ್ತಾನಂತೆ. ಆ ನಂತರದ ಸೇಡಿನ ಕಥೆಯನ್ನು ಇಲ್ಲಿ ಹಾರರ್‌ ಹಿನ್ನೆಲೆಯಲ್ಲಿ ತೋರಿಸಲಾಗಿದೆ. ಬಿ.ಎಸ್‌.ಸಂಜಯ್‌ ಈ ಚಿತ್ರದ ನಿರ್ದೇಶಕರು. ಹಾರರ್‌ ಚಿತ್ರ ಇದಾಗಿರುವುದರಿಂದ ಇಲ್ಲಿ ಗ್ರಾಫಿಕ್‌ಗೂ ಹೆಚ್ಚು ಕೊಡಲಾಗಿದೆಯಂತೆ. ಅಂದಹಾಗೆ, ಈ ಚಿತ್ರ ಮರಾಠಿಯಲ್ಲೂ ತಯಾರಾಗುತ್ತಿದೆ.

ವಿನ್ಸೆಂಟ್‌ ಎನ್ನುವವರು ಮರಾಠಿಯಲ್ಲಿ ಸಿನಿಮಾ ಮಾಡಲಿದ್ದಾರೆ. ಅನಿತಾ ಭಟ್‌ ಎರಡೂ ಭಾಷೆಯಲ್ಲೂ ಇರಲಿದ್ದಾರಂತೆ.  ಇನ್ನು, ಬಾಡಿ ಬಿಲ್ಡರ್‌ ಆಗಿ ಮಿಸ್ಟರ್‌ ವರ್ಲ್ಡ್, ಮಿಸ್ಟರ್‌ ಇಂಡಿಯಾ, ಮಿಸ್ಟರ್‌ ಕರ್ನಾಟಕ ಆಗಿ ಮಿಂಚಿರುವ ಪವನ್‌ ಶೆಟ್ಟಿ ಈ ಸಿನಿಮಾದ ನಾಯಕ. ಮೊದಲ ಸಿನಿಮಾದಲ್ಲೇ ಒಳ್ಳೆಯ ಪಾತ್ರ ಸಿಕ್ಕ ಖುಷಿ ಅವರಿಗಿದೆ. ಚಿತ್ರದಲ್ಲಿ ವಿಶಾಲ್‌, ಶಾಕೂರ್‌ ರಾಣಾ ಸೇರಿದಂತೆ ಅನೇಕರು ನಟಿಸಿದ್ದಾರೆ.
Read more at https://www.udayavani.com/kannada/news/balcony-sandalwood-news/249871/anita-bhat-is-now-vaisakhini#jjdHYWF3VBvQ7PGV.99

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *