“ಶಿವಗಾಮಿ’

Posted on: November 8, 2017

ramyakrishnaರಮ್ಯಕೃಷ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ “ಶಿವಗಾಮಿ’ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದ್ದು, ಇದೀಗ ಅಂತಿಮ ಹಂತದ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿದೆ. ಗಂಗಪಟ್ನಂ ಶ್ರೀಧರ್‌ ನಿರ್ಮಾಣದ ಈ ಚಿತ್ರವನ್ನು ಮಿಣಕನ ಗುರ್ಕಿ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಇವರದೇ.

ಇನ್ನು, ನಿರ್ಮಾಪಕ ಗಂಗಪಟ್ನಂ ಶ್ರೀಧರ್‌, ತೆಲುಗಿನಲ್ಲಿ 5 ಚಿತ್ರಗಳನ್ನು ನಿರ್ಮಿಸಿದ್ದು, ಕನ್ನಡದಲ್ಲಿ “ಶಿವಗಾಮಿ’ ಮೊದಲ ನಿರ್ಮಾಣದ ಚಿತ್ರ. ಅದ್ಧೂರಿ ಅರಮನೆ ಸೆಟ್‌ನಲ್ಲಿ ಬಹುಭಾಷಾ ನಟರ ಅಭಿನಯದೊಂದಿಗೆ ಭರ್ಜರಿಯಾಗಿ ಚಿತ್ರೀಕರಣ ನಡೆಯಲಿದೆ. ರಮ್ಯ ಕೃಷ್ಣ ಅವರು ಶಿವಗಾಮಿಯಾಗಿ 9ನೇ ಶತಮಾನದ ರಾಣಿ ಪಾತ್ರ ನಿರ್ವಹಿಸುತ್ತಿದ್ದಾರೆ.

ಪ್ರವೀಣ್‌ ನಾಯಕರಾದರೆ, ಪಾಯಲ್‌ ನಾಯಕಿ. ಉಳಿದಂತೆ ರವಿಕಾಳೆ, ರೋಲರ್‌ ರಘು, ಅವಿನಾಶ್‌, ಗೋಲಿಸೋಡ ಮಧು, ರಮೇಶ್‌ ಪಂಡಿತ್‌, ರಿತೇಶ್‌, ಕುರಿಬಾಂಡ್‌ ರಂಗ ಇತರರು ನಟಿಸುತ್ತಿದ್ದಾರೆ. ಈ ಚಿತ್ರ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಗೆ ಡಬ್‌ ಆಗಲಿದೆ.

ಚಿತ್ರಕ್ಕೆ “ಬಾಹುಬಲಿ’ಗೆ ಗ್ರಾಫಿಕ್ಸ್‌ ಮಾಡಿದ್ದ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ವೀರ್‌ಸಮರ್ಥ್ ಸಂಗೀತವಿದೆ. ಯೋಗರಾಜ್‌ ಭಟ್‌, “ಬಹುದ್ದೂರ್‌’ ಚೇತನ್‌, ವಿ.ನಾಗೇಂದ್ರ ಪ್ರಸಾದ್‌, ಗೌಸ್‌ ಪೀರ್‌ ಸಾಹಿತ್ಯವಿದೆ. ಬಾಲರೆಡ್ಡಿ ಕ್ಯಾಮೆರಾ ಹಿಡಿದರೆ, ಕೆ.ಎಂ.ಪ್ರಕಾಶ್‌ ಸಂಕಲನವಿದೆ. ಶಿವಶಂಕರ್‌ ನೃತ್ಯ ನಿರ್ದೇಶನ ಮಾಡಿದ್ದಾರೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *