ಹುಲಿ ದಾಳಿಗೆ ಜಾನುವಾರುಗಳೆರಡು ಬಲಿ

Posted on: November 18, 2017

1. 2. 3. mdk17sdr1
ಸಿದ್ದಾಪುರ:- ಹುಲಿ ದಾಳಿಗೆ ಜಾನುವಾರುಗಳೆರಡು ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆಯ ಕಾಫಿ ತೋಟದಲ್ಲಿ ನಡೆದಿದೆ.
ಮಾಲ್ದಾರೆ ಗ್ರಾ.ಪಂ ಸದಸ್ಯೆ ಇಂದಿರಾ ಎಂಬುವವರಿಗೆ ಸೇರಿದ ಹಸುಗಳೆರೆಡು ಮೇವು ಹರಸಿಕೊಂಡು ಖಾಸಗಿ ತೋಟದಲಿದ್ದ ಸಂಧರ್ಭ ಹುಲಿಯೊಂದು ಗರ್ಭ ಧರಿಸಿದ ಹಸುಗಳ ಮೇಲೆ ದಾಳಿ ನಡೆಸಿದ ಪರಿಣಾಮ ಎರಡೂ ಹಸುಗಳು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನಡೆದಿದೆ.
ಸ್ಥಳಕ್ಕೆ ಎಸಿಎಫ್ ಶ್ರೀಪತಿ ಭೇಟಿ ನೀಡಿ, ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ ಹಿನ್ನಲೆ ಅರಣ್ಯ ಇಲಾಖೆ ಕಾಫಿ ತೋಟವೊಂದರಲ್ಲಿ ಬೋನ್ ಅಳವಡಿಸಿದ್ದರೂ ಇದವರೆಗೂ ಹುಲಿ ಸೆರೆ ಸಿಕ್ಕಿಲ್ಲ. ಕೆಲವು ದಿನಗಳಿಂದ ಕಾಫಿತೋಟಗಳಲ್ಲಿ ಕಾಣಿಸಿಕೊಂಡ ಹುಲಿ ಇತ್ತೀಚೆಗೆ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾಫಿತೋಟ ಹಾಗೂ ಸಮೀಪದ ಅರಣ್ಯದಲ್ಲಿ ಮೇಯಲು ಬಿಟ್ಟಿದ್ದ ಜಾನುವಾರು ಹುಲಿ ದಾಳಿಗೆ ಬಲಿಯಾಗಿದೆ. ತಕ್ಷಣ ಹುಲಿಯ ಚಲನವಲನ ಗಮನಿಸಲು ಆರ್‌ಆರ್‌ಟಿ ತಂಡವನ್ನು ನಿಯೋಜಿಲಾಗಿದ್ದು, ಅರಣ್ಯ ಸಿಬ್ಬಂದಿಗಳಿಂದ ಹುಲಿ ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.

ಇಂದಿರಾ ಮಾತನಾಡಿ ಹಸುಗಳಿಂದ ಕುಟುಂಭ ಜೀವನ ನಡೆಯುತ್ತಿದ್ದು ೮೦ ಸಾವಿರ ನಷ್ಟ ಉಂಟಾಗಿದೆ. ಈ ಭಾಗದಲ್ಲಿ ಹುಲಿ ಹಾವಳಿ ಮಿತಿ ಮೀರಿದ್ದು ಕಾಫಿ ತೋಟದಲ್ಲಿ ಬೀಡುಬಿಟ್ಟು ರೈತರ ಜಾನುವಾರುಗಳು ನಿರಂತರ ಬಲಿಯಾಗುತಿದೆ. ಶಾಲಾ ವಿದ್ಯಾರ್ಥಿಗಳು ಮ್ತತು ಕಾರ್ಮಿಕರು ಭಯ ಭೀತರಾಗಿದ್ದಾರೆ. ಗ್ರಾಮ ದತ್ತ ಮುಖಮಾಡಿರುವ ಹುಲಿ ಹಾವಿಳಿಯಿಂದ ಜನರು ನಿಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಅರಣ್ಯ ಇಲಾಖೆ ತಕ್ಷಣ ಹುಲಿ ಸೆರೆಹಿಡಿದು ಸ್ಥಳಂತರ ಮಾಡಬೇಕು ಹುಲಿದಾಳಿಗೆ ಬಲಿಯಾದ ಹಸುಗಳಿಗೆ ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭ ವಲಯ ಅರಣ್ಯಾಧಿಕಾರಿ ಅಶೋಕ್, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ನಾಗೇಶ್, ಆರ್‌ಆರ್‌ಟಿ ತಂಡ ಹಾಜರಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *