ಅಪಘಾತ: ಯುವಕರಿಬ್ಬರ ಸಾವು

Posted on: December 5, 2017

ಕುಶಾಲನಗರ: ಕೂಡಿಗೆಯಲ್ಲಿ   ಟಿಪ್ಪರ್‌ ಹಾಗೂ ಬೈಕ್‌ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸವಾರರಿಬ್ಬರು ಮೃತಪಟ್ಟಿದ್ದಾರೆ.

ಕೂಡುಮಂಗಳೂರು ಗ್ರಾಮದ ವಿಜಯನಗರ ಬಡಾವಣೆ ನಿವಾಸಿ ರವಿ (23), ಬಸವನತ್ತೂರು ಗ್ರಾಮದ ಪ್ರದೀಪ್‌ (24) ಮೃತರು.

ಕೂಡಿಗೆಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಟಿಪ್ಪರ್‌ ಅನ್ನು ಹಿಂದಿಕ್ಕುವ ಭರದಲ್ಲಿ ಪ್ರದೀಪ್‌ ಓಡಿಸುತ್ತಿದ್ದ ಬೈಕ್‌ ನಿಯಂತ್ರಣ ಕಳೆದುಕೊಂಡು ಲಾರಿಯ ಕೆಳಗೆ ನುಗ್ಗಿತು. ಪರಿಣಾಮ ರವಿ ಮತ್ತು ಪ್ರದೀಪ್‌ ಅವರ ತಲೆ ಮತ್ತು ಎದೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾದವು. ಕೂಡಲೇ ಇಬ್ಬರಿಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *