ಇಂಜಿಲಗೆರೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಹಸು ಬಲಿ : ಭಯ ಭೀತರಾದ ನಿವಾಸಿಗಳು

Posted on: December 11, 2017

IMG_20171210_101823 mdk10 sdr2
ಸಿದ್ದಾಪುರ: ಕಾಡಾನೆ ದಾಳಿ ಮಾಡಿದ ಪರಿಣಾಮ ಹಸುವೊಂದು ಸತ್ತಿರುವ ಘಟನೆ ನಡೆದಿದೆ.
ಸಮೀಪದ ಇಂಜಿಲಗೆರೆ ಗ್ರಾಮದ ನಿವಾಸಿ ಡೇವಿಡ್ ಎಂಬರಿಗೆ ಸೇರಿದ ಹಸುವು ಕಾಡಾನೆ ದಾಳಿಗೆ ಬಲಿಯಾಗಿದ್ದು, ಬೆಳಿಗ್ಗೆ ಘಟನೆ ನಡೆದಿದೆ. ಕೊಟ್ಟಿಗೆಯಲ್ಲಿ ಹಾಲು ಕರೆದು ಮನೆಯ ಹಿಂಬದಿಯಲ್ಲಿರುವ ಗದ್ದೆಯಲ್ಲಿ ಮೇವಿಗಾಗಿ ಕಟ್ಟಿ ಹಾಕಲಾಗಿತ್ತು. ಈ ವೇಳೆ ಸಮೀಪದ ಕಾಫಿ ತೋಟದಿಂದ ಬಂದ ಕಾಡಾನೆ ಹಸುವಿನ ಮೇಲೆ ಏಕಾಏಕಿ ದಾಳಿ ಮಾಡಿ ತನ್ನ ಕೊಂಬುಗಳಿಂದ ಹೊಟ್ಟೆ ಮತ್ತು ಕುತ್ತಿಗೆ ಭಾಗಕ್ಕೆ ತಿವಿದು ಸಾಯಿಸಲಾಗಿದೆ ಎಂದು ಡೇವಿಡ್ ಪತ್ರಿಕೆಗೆ ತಿಳಿಸಿದ್ದಾರೆ.
ಡೇವಿಡ್ ಅವರದ್ದು ಕಾರ್ಮಿಕ ಕುಟುಂಬ ಎರಡು ಹಸುಗಳನ್ನು ಸಾಕಿ ಹಸುವಿನ ಹಾಲಿನಿಂದ ಬದುಕು ಸಾಗಿಸುತ್ತಿದ್ದರು. ಇತ್ತೀಚೆಗಷ್ಟೇ ನಾಯಿ ದಾಳಿಗೆ ಇವರ ಹಸುವೊಂದು ಬಲಿಯಾಗಿತ್ತು. ಇದೀಗ ಮತ್ತೊಂದು ಹಸುವು ಕಾಡಾನೆ ದಾಳಿಗೆ ಬಲಿಯಾಗಿದೆ ಅರಣ್ಯ ಇಲಾಖೆ ಪರಿಹಾರ ನೀಡುವುದರೊಂದಿಗೆ ಕಾಡಾನೆ ಹಾವಳಿಯನ್ನು ತಡೆಗಟ್ಟ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೆಳಗಾರ ರಾಜು ಮಾತನಾಡಿ, ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು, ಕಾರ್ಮಿಕರು ಹಾಗೂ ಶಾಲಾ ವಿಧ್ಯಾರ್ಥಿಗಳು ಭಯದ ವಾತವರಣದಲ್ಲಿ ದಿನ ಕಳೆಯುತ್ತಿದ್ದು ಕಾಡಾನೆ ಹಾವಳಿ ತಡೆಗಟ್ಟವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಶಾಶ್ವತವಾಗಿ ಕಾಡು ಪ್ರಾಣಿಗಳನ್ನು ತಡೆಗಟ್ಟುವಂತೆ ಒತ್ತಾಯಿಸಿದ್ದರು. ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ದೇವಯ್ಯ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಹಸುವಿನ ಮಾಲಕರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *