ಎಂಟು ಗ್ರಹಗಳ ಸೌರಮಂಡಲ ಪತ್ತೆ

Posted on: December 16, 2017

file6xzvdwi6qc11086wiitqಗೂಗಲ್‌ನ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಹೊಸ ಸೌರಮಂಡಲವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಪತ್ತೆ ಹಚ್ಚಿದೆ. ವಿಶೇಷವೆಂದರೆ ಇಲ್ಲಿ ಎಂಟು ಗ್ರಹಗಳು ಸುತ್ತುಹಾಕುತ್ತಿವೆ. ನಮ್ಮ ಸೌರಮಂಡಲದ ರೀತಿಯ ಎಂಟು ಗ್ರಹಗಳನ್ನು ಹೊಂದಿರುವ ಮತ್ತೊಂದು ಸೌರಮಂಡಲ ಪತ್ತೆಯಾಗಿರುವುದು ಇದೇ ಮೊದಲು. ‌

ನಮ್ಮಿಂದ 2545 ಜ್ಯೋತಿರ್ವರ್ಷ ದೂರದಲ್ಲಿರುವ ಇದನ್ನು ‘ಕೆಪ್ಲರ್ 90 ಸೌರಮಂಡಲ’ ಎಂದು ಹೆಸರಿಸಲಾಗಿದೆ. ನಾಸಾದ ಕೆಪ್ಲರ್ ಟೆಲಿಸ್ಕೋಪ್ ಇದನ್ನು ಪತ್ತೆಹಚ್ಚಿದೆ. ಇಲ್ಲಿರುವ ನಕ್ಷತ್ರದ ಸುತ್ತ 14 ದಿನಗಳಿಗೊಮ್ಮೆ ಪ್ರದಕ್ಷಿಣೆ ಹಾಕುತ್ತಿರುವ ಬಿಸಿಯಾದ ಹಾಗೂ ಕಲ್ಲಿನಿಂದ ಕೂಡಿರುವ ಗ್ರಹಕ್ಕೆ ‘ಕೆಪ್ಲರ್–90ಐ’ ಎಂದು ಹೆಸರಿಡಲಾಗಿದೆ.

‘ಇದೊಂದು ಮಿನಿ ಸೌರಮಂಡಲ. ಚಿಕ್ಕ ಗ್ರಹಗಳು ಒಳಭಾಗದಲ್ಲಿ ಹಾಗೂ ದೊಡ್ಡ ಗ್ರಹಗಳು ಹೊರಭಾಗದಲ್ಲಿ ಸುತ್ತುತ್ತಿವೆ. ಪ್ರತಿಯೊಂದರ ನಡುವಿನ ಅಂತರ ತೀರಾ ಕಡಿಮೆಯಿದೆ’ ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಆಂಡ್ರ್ಯೂ ವಂಡರ್‌ಬರ್ಗ್‌ ಹೇಳಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *