ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟದಿದ್ದಲ್ಲಿ ಕಾನೂನು ಹೊರಾಟ ಎಚ್ಚರಿಕೆ: ಸಂಕೇತ್ ಪೂವಯ್ಯ

Posted on: December 11, 2017

mdk10sdr2

ಸಿದ್ದಾಪುರ:- ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದಿ ಜನರು ಮನೆಯಿಂದ ಹೊರಗೆ ಬರಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದ್ದರು. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅರಣ್ಯ ಸಚಿವರು ಮೌನ ವಹಿಸಿದ್ದಾರೆ ಎಂದು ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಆರೋಪಿಸಿದರು.

ಇಂಜಿಲಗೆರೆ ಗ್ರಾಮಕ್ಕೆ ಹಾಡುಹಗಲೇ ಕಾಡಾನೆ ದಾಳಿ ಮಾಡಿ ಹಸುವೊಂದನ್ನು ಬಲಿ ತೆಗೆದುಕೊಂಡಿದೆ ಗ್ರಾಮದ ನಿವಾಸಿಗಳು ಭಯಭೀತರಾದ್ದಾರೆ ಹಾಲು ಮಾರಿ ಜೀವನ ನಡೆಸುತ್ತಿರುವು ಕುಟುಂಭ ಕಂಗಲಾಗಿದ್ದಾರೆ ಅರಣ್ಯ ಇಲಾಖೆ ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದ ಅವರು
ರೈತರು ,ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತ್ತಾಗಿದೆ
ಕಾಡು ಪ್ರಾಣಿಗಳ ಹಾವಳಿಗೆ ರೈತರು ಕಾಫಿ ತೋಟ ಹಾಗೂ ಗದ್ದೆ ಕೃಷಿ ಮಾಡಲು ಸಾದ್ಯ ವಾಗದೆ ಕೈ ಬಿಟ್ಟಿದ್ದಾರೆ. ಕಾಫಿ ತೋಟಗಳಲ್ಲಿ ಕಾಡಾನೆಗಳು ಭೀಡು ಭೀಟ್ಟು ಕಾರ್ಮಿಕರು ಕೆಲಸಕ್ಕೆ ತೆರಳದಂತ್ತಾಗಿದೆ ಶಾಲೆಗೆ ತೆರಳುವ ವಿಧ್ಯಾರ್ಥಿಗಳ ಮನೆಯಲ್ಲಿ ಉಳಿದು ಕೊಳ್ಳುವಂತ್ತಾಗಿದೆ ಕಾಡು ಪ್ರಾಣಿಗಳಿಂದ ಜಿಲ್ಲೆಯ ಜನರು ಭಯದ ವಾತವರಣದಲ್ಲಿ ಜೀವನ ನಡೆಸುವಂತ್ತಾಗಿದ್ದು. ಕಳೆದ ೪೦ ವರ್ಷಗಳಿಂದಲೂ ಕಾಡು ಪ್ರಾಣಿಗಳ ಹಾವಳಿ ಇದ್ದರು ರೈತರು ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲಾದ ಜನ ಪ್ರತಿನಿಧಿಗಳ ನಿರ್ಲಕ್ಷೆಯಿಂದ ಜನತೆ ಕಂಗಲಾಗಿದ್ದಾರೆ
ಸರಕಾರವು ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಜಿಲ್ಲೆಯನ್ನು ಅನಾಥವಾಗಿ ಮಾಡಿದೆ.
ಶಾಶ್ವತವಾಗ ಕಾಡು ಪ್ರಾಣಿಗಳನ್ನು ತಡೆಗಟ್ಟದಿದ್ದಲ್ಲಿ ಜೆ ಡಿ ಎಸ್ ನಿಂದ ಕಾನೂನು ಹೋರಾಟ ಮಾಡುವದಾಗಿ ಎಚ್ಚರಿಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *